ಮೊದಲ ಮತದಾನ: ಹಲವು ದಿನದ ಕಾತರ. ದೇಶದ ಅಭಿವೃದ್ಧಿಗೆ ಕೊಡುಗೆಯಿತ್ತ ಸಾರ್ಥಕತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ವಡೇರ ಹೋಬಳಿ ಪಿಂಕ್ ಮತಗಘಟ್ಟೆಯಲ್ಲಿ ಪ್ರಥಮ ಬಾರಿ ಮತ ಚಲಾಯಿಸಿದ ಕುಂದಾಪುರ ಫಿಲೋನಾ ವಾಝ್, ಸುಶ್ಮಾ ಬೆರೆಟ್ಟೊ ಹಾಗೂ ರೆಬೆರೋ ವಾಝ್ ಪ್ರಥಮ ಮತದಾನದ ನಂತರ ಪಿಂಕ್ ಮತಕೇಂದ್ರ ಸೆಲ್ಫಿ ಪಾಯಿಂಟ್‌ನಲ್ಲಿ ನಿಂತು ವಿಜಯದ ಸಂಕೇತ ಸಿಂಬಲ್ ತೋರಿಸುವ ಮೂಲಕ ಸೆಲ್ಪಿತೆಗೆದುಕೊಂಡು ಸಂಭ್ರಮಿಸಿದರು. ನಾವು ಮತದಾನ ಮಾಡಿದ್ದೇವೆ. ಎಲ್ಲರೂ ಮತದಾನ ಮಾಡುವ ಮೂಲಕ ದೇಶಕಟ್ಟುವ ಕೆಲಸ ಮಾಡಬೇಕು. ದೇಶಕ್ಕಾಗಿ ನಮಗೆ ಬೇರೇನನ್ನೂ ಮಾಡಲಾಗದಿದ್ದರೂ ಮತದಾನದ ಮೂಲಕವಾದರೂ ಕಿಂಚಿತ್ ಋಣ ತೀರಿಸಲು ಸಾಧ್ಯ. ದೇಶದ ಅಭಿವೃದ್ಧಿಗೆ ನಾವು ಮೊದಲ ಮತದಾನದ ಮೂಲಕ ಕೊಡುಗೆ ನೀಡಿದ್ದೇವೆ ಎಂಬ ಹೆಮ್ಮೆ ನಮ್ಮದು. ನಾವು ಇನ್ನು ಮುಂದೆ ಯಾವತ್ತೂ ಮತದಾನದಿಂದ ದೂರ ಉಳಿಯೋದಿಲ್ಲ. ಎಲ್ಲರೂ ಮತದಾನ ಮಾಡುವ ಮೂಲಕ ಸದೃಢ, ಸಂಭೃದ್ಧ ದೇಶ ಕೊಟ್ಟೋಣ ಎಂದು ಮೂವರು ಸ್ನೇಹಿತೆಯರು ತಿಳಿಸಿದ್ದಾರೆ.

ಈ ದಿನಕ್ಕಾಗಿ ಕಾದಿದ್ದೆ:
ಎಲ್ಲರೂ ಮತದಾನ ಮಾಡುತ್ತಿರುವಾಗ ನಾನು ಮತದಾನ ಮಾಡಬೇಕು ಎನ್ನುವ ಉತ್ಕಟ ಆಸೆ ಪುಟಿದೇಳುತ್ತಿತ್ತು. ನಮ್ಮ ಸಂವಿಧಾನ ಪ್ರಕಾರ ಮತದಾನಕ್ಕಾಗಿ 18ವರ್ಷ ಕಾದಿದ್ದು, ಇಂದು ಸಾರ್ಥಕವಾಯಿತು ಎನ್ನುವ ಧನ್ಯತಾ ಭಾವ ಮೂಡಿದೆ. ಮೊದಲ ಮತದಾನ ಅತ್ಯಂತ ಖುಷಿಕೊಟ್ಟ ಜೀವನದ ಅತ್ಯಾಮೂಲ್ಯ ಕ್ಷಣಗಳಲ್ಲಿ ಒಂದಾಗಿರುತ್ತದೆ. ಹೀಗೆಂದವರು ಕುಂದಾಪುರ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪೂಜಿತಾ ಗಣೇಶ್ ಶೇರಿಗಾರ್.
ಕುಂದಾಪುರ ಎಪಿಎಂಸಿ ಉಪಾಧ್ಯಕ್ಷ ಗಣೇಶ್ ಶೇರೆಗಾರ್ ಹಾಗೂ ಪುರಸಭೆ ಸದಸ್ಯೆ ರವಿಕಲಾ ಗಣೇಶ್ ಶೇರೆಗಾರ್ ಪುತ್ರಿ ಪೂಜಿತಾ ಚಿಕ್ಕಂದಿನಿಂದಲೂ ಮತದಾನದ ಕನಸು ಕಂಡಿದ್ದು, ಮೊದಲ ಮತದಾನದ ಮೂಲಕ ಕನಸು ಸಾಕಾರ ಮಾಡಿಕೊಂಡರು. ತಾಯಿ-ತಂದೆ ಜತೆ ಸಂಭ್ರಮದಲ್ಲಿ ವಡೇರ ಹೋಬಳಿ ಪಿಂಕ್ ಮತಘಟ್ಟೆಗೆ ಬಂದ ಪೂಜಿತಾ ಅವರ ಮತಘಟ್ಟೆ ಅಧಿಕಾರಿಗಳು ಸ್ವಾಗತಿಸಿ, ಪ್ರಥಮ ಮತದಾನದ ಸವಿ ನೆನಪಿಗಾಗಿ ನನೆಪಿನ ಕಾಣಿಗೆ ನೀಡಿ ಗೌರವಿಸಿದರು. ಮೊದಲ ಮತದಾನ ಅತ್ಯಾಂತ ಸಂತೋಷದ ಕ್ಷಣವಾಗಿದ್ದು, ಮುಂದೆ ಕೂಡಾ ತಪ್ಪದೆ ಮತದಾನ ಮಾಡುತ್ತೇನೆ, ಎಲ್ಲರೂ ಮತದಾನ ಮಾಡಬೇಕು ಎಂದು ಹೇಳಿದರು.

ಮತದಾನದ ಅಪೂರ್ವ ಅನುಭವ
ಕುಂದಾಪುರ ಭಂಡರಾರ್‌ಕಾರ‍್ಸ್ ಕಾಲೇಜ್ ಹಿರಿಯ ನಾಗರಿಕ ಮತಕೇಂದ್ರದಲ್ಲಿ ಮೊದಲ ಮತದಾನದ ಮೂಲಕ ಅಪೂರ್ವ ಅಪೂರ್ವ ಅನುಭವ ಪಡೆದರು.
ತಾಯಿ ಜೊತೆ ಮತಕೇಂದ್ರಕ್ಕೆ ಬಂದ ಅಪೂರ್ವ ಹಿಂದೆಯೇ ಮತದಾನ ಮಾಡಬೇಕು ಎಂದು ನಿರ್ಧಾರ ಮಾಡಿದ್ದು, ಇಂದು ಅದು ಈಡೇರಿದೆ. ಮತದಾನದ ಹೊಸ ಅನುಭವ ನಿಜಕ್ಕೂ ಮಧುರಾತಿಮಧುರ ಎನ್ನೋದು ಅವರ ನಂಬಿಕೆ.

ಮೊದಲ ಮತದಾನ: ಮರೆಯಲಾಗದ ನೆನಪು
ವಂಡ್ಸೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡುವ ಮೂಲಕ ಮೊದಲು ಮತದಾನ ಮಾಡಿದ ಪಟ್ಟಿಗೆ ಅಜಯ ಕುಮಾರ್ ಪೂಜಾರಿ ಹಾಗೂ ವರಣ್ ಸೇರಿದರು. ಯುವ ಭಾರತ್ ನಿರ್ಮಾಣ ಹಾಗೂ ದೇಶದ ಉಜ್ವಲ ಭವಿಷ್ಯದ ದೃಷ್ಟಿಯಲ್ಲಿ ಮತದಾನ ಮಾಡಿದ್ದು, ಮತದಾನಕ್ಕೆ ಯಾವುದೇ ದಾನ ಸಾಟಿಯಿಲ್ಲ. ಎಲ್ಲರೂ ಮತದಾನದ ಮೂಲಕ ಸಂಬೃದ್ಧ ಸದೃಡ ಸರ್ಕಾರ ನಿರ್ಮಾಣವಾಡಲು ಸಾಧ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಮತದಾನ ಮಾಡುತ್ತೇವೆ ಎನ್ನುತ್ತಾರೆ ಸ್ನೇಹತರು.

Leave a Reply

Your email address will not be published. Required fields are marked *

three × 4 =