ಚೆಟ್ಟಿನಾಡ್ ಚಿಕನ್ ಖಾದ್ಯ ತಯಾರಿಸಲು ರೆಡಿಯಾಗಿ

Call us

Call us

Cittinad chickenಚಟ್ಟಿನಾಡ್ ಕೋಳಿ ಗಟ್ಟಿ ಸಾರು ಸಾಮಗ್ರಿ: ಕೋಳಿ 1 ಕೆ.ಜಿ., ಆಲೂಗೆಡ್ಡೆ ಹೆಚ್ಚಿದ್ದು 2, ನವಿಲು ಕೋಸು ಹೆಚ್ಚಿದ್ದು 2, ಸಬ್ಬಸಿಗೆ ಸೊಪ್ಪು ಹೆಚ್ಚಿದ್ದು 1 ಬಟ್ಟಲು, ಮೆಂತ್ಯದ ಸೊಪ್ಪು ಹೆಚ್ಚಿದ್ದು 1 ಬಟ್ಟಲು, ಅರಿಶಿಣ 1 ಟೀ ಸ್ಪೂನ್, ಒಣಮೆಣಸಿನಕಾಯಿ ಪುಡಿ 2 ಟೇಬಲ್ ಸ್ಪೂನ್, ದನಿಯಾ ಪುಡಿ 2 ಟೇಬಲ್ ಸ್ಪೂನ್, ಉಪ್ಪು, ಈರುಳ್ಳಿ ಹೆಚ್ಚಿದ್ದು 3, ಟೊಮೆಟೊ 3 ಹೆಚ್ಚಿದ್ದು. ಮಸಾಲಾ ಪುಡಿ: ಚಕ್ಕೆ 2 ಚೂರು, ಲವಂಗ 6, ಕಲ್ಲು ಹೂವು 4, ಸೋಂಪು 1 ಟೀ ಸ್ಪೂನ್ ಎಲ್ಲವನ್ನೂ ಹುರಿದು ಪುಡಿ ಮಾಡಿ. ವಿಧಾನ: 4 ಟೇಬಲ್ ಸ್ಪೂನ್ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಟೊಮೇಟೊ ಸೇರಿಸಿ ಬಾಡಿಸಿ. ಇದಕ್ಕೆ ಹೆಚ್ಚಿದ ಸೊಪ್ಪುಗಳು, ಅರಿಶಿಣ, ಒಣ ಮೆಣಸಿನಕಾಯಿ ಪುಡಿ, ದನಿಯಾ ಪುಡಿ, ಉಪ್ಪು, ಕೋಳಿ ತುಂಡುಗಳು, 2 ಬಟ್ಟಲು ನೀರು ಸೇರಿಸಿ 2 ವಿಶಲ್ ಕೂಗಿಸಿ. ತಣ್ಣಗಾದ ನಂತರ ಕುಕ್ಕರ್ ತೆಗೆದು ಮಸಾಲಾ ಪುಡಿಯನ್ನು ಸೇರಿಸಿ ಗೊಜ್ಜಿನ ಹದಕ್ಕೆ ಬೇಯಿಸಿ. ಕಡೆಯಲ್ಲಿ ಕೊತ್ತಂಬರಿ ಸೊಪ್ಪು, ಕರಿಬೇವು ಸೇರಿಸಿ.

Call us

Call us

Visit Now

ಚೆಟ್ಟಿನಾಡ್ ಕೋಳಿ ಫ್ರೈ ಸಾಮಗ್ರಿ: ಕೋಳಿ 1 ಕೆ.ಜಿ., ಕೆಂಪು ಮೆಣಸಿನಕಾಯಿ ಪೇಸ್ಟ್, 2 ಟೇಬಲ್ ಸ್ಪೂನ್, ಶುಂಠಿ ಬೆಳ್ಳುಳ್ಳಿ 2 ಟೇಬಲ್ ಸ್ಪೂನ್, ಅರಿಶಿಣ 1 ಟೀ ಸ್ಪೂನ್, ಉಪ್ಪು, ನಿಂಬೆರಸ, ಕರಿಬೇವು, ಎಣ್ಣೆ ಕರಿಯಲು. ವಿಧಾನ: ಬಟ್ಟಲಿನಲ್ಲಿ ಕೋಳಿ ತುಂಡುಗಳು, ಕೆಂಪು ಮೆಣಸಿನಕಾಯಿಯ ಪೇಸ್ಟ್, ಶುಂಠಿ, ಬೆಳ್ಳುಳ್ಳಿ, ಅರಿಶಿಣ, ದನಿಯಾ ಪುಡಿ, ಉಪ್ಪು, ನಿಂಬೆರಸ, 1 ಟೇಬಲ್ ಸ್ಪೂನ್ ಎಣ್ಣೆ ಸೇರಿಸಿ 1 ಗಂಟೆಯ ಕಾಲ ನೆನೆಸಿ. ಎಣ್ಣೆ ಬಿಸಿ ಮಾಡಿ ಕರಿಬೇವನ್ನು ಎಣ್ಣೆಯಲ್ಲಿ ಕರಿದು ಇಡಿ. ನಂತರ ಅದೇ ಎಣ್ಣೆಯಲ್ಲಿ ಕೋಳಿಯನ್ನು ಗರಿಗರಿ ಆಗುವವರೆಗೂ ಹುರಿಯಿರಿ. ಬಡಿಸುವ ಮುನ್ನ ಹುರಿದ ಕರಿಬೇವಿನಿಂದ ಅಲಂಕರಿಸಿ.

Click here

Call us

Call us

ಚೆಟ್ಟಿನಾಡ್ ಗ್ರಿಲ್ ಕೋಳಿ ಸಾಮಗ್ರಿ : ಕೋಳಿ 1 ಕೆ.ಜಿ. ದಪ್ಪಕ್ಕೆ ತುಂಡು ಮಾಡಿದ್ದು, ಉಪ್ಪು. ಮಸಾಲಾ ಪುಡಿ: ಕರಿ ಕಾಳು ಮೆಣಸು ಪುಡಿ 2 ಟೀ ಸ್ಪೂನ್, ಜೀರಿಗೆ 1/2 ಟೀ ಸ್ಪೂನ್, ಮೆಂತ್ಯ 1/4 ಟೀ ಸ್ಪೂನ್, ಸೋಂಪು 1 ಟೀ ಸ್ಪೂನ್, ಚಕ್ಕೆ 2 ಚೂರು, ಲವಂಗ 4 ಎಲ್ಲವನ್ನೂ ಹುರಿದು ಪುಡಿ ಮಾಡಿ. ವಿಧಾನ: ಮೇಲಿನ ಪುಡಿಗೆ 2 ಟೀ ಸ್ಪೂನ್ ಒಣ ಮೆಣಸಿನಕಾಯಿ ಪುಡಿ, ದನಿಯಾ ಪುಡಿ 1 ಟೀ ಸ್ಪೂನ್ ಎಲ್ಲವನ್ನೂ ಕೋಳಿಗೆ ಸೇರಿಸಿ ಇದಕ್ಕೆ 1 ಟೇಬಲ್ ಸ್ಪೂನ್ ಶುಂಠಿ ಬೆಳ್ಳುಳ್ಳಿ ರುಬ್ಬಿದ್ದು , 1 ಟೇಬಲ್ ಸ್ಪೂನ್ ಎಣ್ಣೆ ಸೇರಿಸಿ 1 ಗಂಟೆ ನೆನೆಸಿ. ನೆನೆಸಿದ ಕೋಳಿ ತುಂಡುಗಳನ್ನು 180 ಡಿಗ್ರಿ ಸಿ ನಲ್ಲಿ 10-15 ನಿಮಿಷಗಳ ಕಾಲ್ ಗ್ರಿಲ್ ಮಾಡಿ. ಬಡಿಸುವ ಮುನ್ನ ಎಣ್ಣೆಯಲ್ಲಿ ಕರಿದ ಕರಿಬೇವು, ಗೋಡಂಬಿಯಿಂದ ಅಲಂಕರಿಸಿ.

ಚೆಟ್ಟಿನಾಡ್ ಚಿಕನ್ ರೋಸ್ಟ್ ಸಾಮಗ್ರಿ: ಕೋಳಿ 1 ಕೆ.ಜಿ. ತುಂಡುಗಳು, ಎಣ್ಣೆ 3 ಟೇಬಲ್ ಸ್ಪೂನ್, ಉಪ್ಪು, ಅರಿಶಿಣ, ಒಣ ಮೆಣಸಿನಕಾಯಿ ಪುಡಿ 2 ಟೀ ಸ್ಪೂನ್, ದನಿಯಾ ಪುಡಿ 1 ಟೀ ಸ್ಪೂನ್, ಈರುಳ್ಳಿ 2 ಹೆಚ್ಚಿದ್ದು, ಎಣ್ಣೆ 2 ಟೇಬಲ್ ಸ್ಪೂನ್, ಕರಿಬೇವು, ಶುಂಠಿ ಬೆಳ್ಳುಳ್ಳಿ ರುಬ್ಬಿದ್ದು 1 ಟೇಬಲ್ ಸ್ಪೂನ್, ಗೋಡಂಬಿ 50 ಗ್ರಾಂ. ಮಸಾಲಾ ಪುಡಿ: ಕರಿ ಕಾಳು ಮೆಣಸು 1 ಟೀ ಸ್ಪೂನ್, ಸೋಂಪು 1 ಟೀ ಸ್ಪೂನ್, ಮೆಂತ್ಯ 1/4 ಟೀ ಸ್ಪೂನ್, ಕಲ್ಲು ಹೂವು 2, ಚಕ್ಕೆ 1, ಲವಂಗ 2 ಹುರಿದು ಪುಡಿ ಮಾಡಿ. ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಸೇರಿಸಿ ಬಾಡಿಸಿ. ಇದಕ್ಕೆ ಹೆಚ್ಚಿದ ಟೊಮೆಟೊ, ಕೋಳಿ ತುಂಡುಗಳು, ಒಣ ಮೆಣಸಿನಕಾಯಿ ಪುಡಿ, ದನಿಯಾ ಪುಡಿ, ಅರಿಶಿಣ, ಉಪ್ಪು ಸೇರಿಸಿ 5 ನಿಮಿಷ ಹುರಿಯಿರಿ. ಇದಕ್ಕೆ 1 ಬಟ್ಟಲು ನೀರು ಸೇರಿಸಿ ಕೋಳಿಯನ್ನು ಚೆನ್ನಾಗಿ ರೋಸ್ಟ್ ಮಾಡಿ. ರೋಸ್ಟ್ ಮಾಡಿದ ಕೋಳಿಗೆ ಮಸಾಲಾ ಪುಡಿ, ಕರಿಬೇವು, ಗೋಡಂಬಿಯನ್ನು ಸೇರಿಸಿ ಚೆನ್ನಾಗಿ ರೋಸ್ಟ್ ಮಾಡಿ.

ಟಿಪ್ಸ್ * ಎಲ್ಲಾ ಚೆಟ್ಟಿನಾಡ್ ಖಾದ್ಯಗಳನ್ನು ನಾಟಿ ಕೋಳಿಯಲ್ಲೂ ಮಾಡಬಹುದು. * ಕೋಳಿಯನ್ನು ಗ್ರಿಲ್ ಮಾಡುವಾಗ ಆಗಿಂದಾಗ್ಗೆ ಎಣ್ಣೆಯನ್ನು ಸವರಬೇಕು. * ಕೆಂಪು ಮೆಣಸಿನಕಾಯಿ ಪೇಸ್ಟ್ ಮಾಡುವ ಬಗೆ: ಬ್ಯಾಡಗಿ ಮೆಣಸಿನ ಕಾಯಿಯನ್ನು ನೀರಿನಲ್ಲಿ ಮೆತ್ತಗೆ ಆಗುವವರೆಗೆ ಬೇಯಿಸಿ, ನಂತರ ರುಬ್ಬಿ. * ಚೆಟ್ಟಿನಾಡ್ ಖಾದ್ಯಗಳಿಗೆ ಕರಿಬೇವು, ಸೋಂಪು, ಕಲ್ಲು ಹೂವು ಕಡ್ಡಾಯವಾಗಿ ಬಳಸಬೇಕು. * ಚಟ್ಟಿನಾಡ್ ಕೋಳಿ ಸಾರನ್ನು ದೋಸೆ, ಆಪಂ ಹಾಗೂ ಇಡ್ಲಿಯೊಂದಿಗೆ ಬಡಿಸಿ. * ಚೆಟ್ಟಿನಾಡ್ ಚಿಕನ್‌ನನ್ನು ಸ್ಟಾರ್ಟರ್ ತರಹ ಬಳಸಬಹುದು. * ಚೆಟ್ಟಿನಾಡ್ ಮಸಾಲೆಯನ್ನು ಕಡ್ಡಾಯವಾಗಿ ಹುರಿದು ಪುಡಿ ಮಾಡಬೇಕು.

ವಿಜಯಲಕ್ಷ್ಮಿ ರೆಡ್ಡಿ

Leave a Reply

Your email address will not be published. Required fields are marked *

13 − 8 =