ಸ್ವಾಮಿ ವಿವೇಕಾನಂದರ ಸಿಡಲ ಭಾಷಣದ ಮೂಲಕ ಇಂದಿಗೂ ಭಾರತದ ಶ್ರೇಷ್ಠತೆ ಉಳಿದಿದೆ: ಚಕ್ರವರ್ತಿ ಸೂಲಿಬೆಲೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೂರಿಪ್ಪತ್ತೈದು ವರ್ಷದ ಹಿಂದೆ ಸ್ವಾಮೀ ವಿವೇಕಾನಂದರ ಸಿಂಹ ನುಡಿಯ ಮೂಲಕ ವಿದೇಶಿಯರು ಭಾರತ ನೋಡುವ ದೃಷ್ಟಿ ಬದಲಾಯಿತು. ಇದೇ ವಿವೇಕವಾಣಿಯ ಪ್ರೇರಣೆಯಿಂದ ಇಂದು ಭಾರತಕ್ಕೆ ಧಮ್ಕಿ ಹಾಕುವ ದೇಶಗಳಿಗೆ ತಿರುಗೇಟು ನೀಡುವಷ್ಟು ಸಾಮರ್ಥ್ಯ ದೇಶಹೊಂದಿದೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.

ಮತ್ತೊಮ್ಮೆ ದಿಗ್ವಿಜಯ ವಿವೇಕಾನಂದರ ಭಾರತದಲ್ಲಿ ಕಾರ‍್ಯಾಚರಣೆ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ಮತ್ತೊಮ್ಮೆ ವಿವೇಕವಾಣಿಯಿಂದ ಯುವ ಸಮಾಜ ಜಾಗೃತವಾಗಿದೆ. ಇದರ ಹಿನ್ನೆಲೆಯಲ್ಲಿ ಈ ಬದುಕು ದೇಶಕ್ಕಾಗಿ ಎಂಬ ವಿವೇಕಾನಂದ ಜೀವನ ಮೌಲ್ಯವಿದೆ ಎಂದು ಹೇಳಿದರು.

Call us

ಸ್ವಾತಂತ್ರ ಪೂರ್ವದ ಕ್ರಾಂತಿಕ್ರಾರಿಗಳ ಪಟ್ಟಿಯಲ್ಲಿ ವಿವೇಕಾನಂದ ಮೊದಲ ಸ್ಥಾನದಲ್ಲಿದ್ದು ಅವರಲ್ಲಿ ಒಬ್ಬ ಕ್ರಾಂತಿಕಾರಿ ಹುಟ್ಟಿಕೊಂಡಿದ್ದ. ದೇಶದ ದಾಸ್ಯ ಮುಕ್ತಿಗೆ ವಿವೇಕಾನಂದ ದೇಶ ಸುತ್ತಿ ಮಾಡಿದ ಭಾಷಣ ಜಾಗೃತಿ ಮೂಡಿಸಿ, ಸಮಾಜದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು ಎಂದು ಹೇಳಿದರು. ವಿವೇಕಾನಂದರನ್ನು ಶ್ರೇಷ್ಟ ಬುದ್ದಿವಂತ ಎಂದು ವಿಶ್ವವೇ ಒಪ್ಪಿಕೊಳ್ಳುವಂತೆ ಅವರ ಚಿಕಾಗೋ ಬಾಷಣ ಮಾಡಿದರೆ, ಸದಾ ದೇಶದ ಬಗ್ಗೆ ಚಿಂತಿಸುತ್ತಿದ್ದರು. ವಿವಾಕಾನಂದ ಹೊಸ ಸ್ವಾತಂತ್ರ ಸಂಗ್ರಾಮ ಜನಕ ಎಂದು ಬಣ್ಣಿಸಿದರು.

ಚಿಕಾಗೋ ಯಾತ್ರೆ ಕುರಿತು ಸಾಲಿಗ್ರಾಮ ದಿವೈನ್ ಪಾರ್ಕ್ ವಿವೇಕ ಉಡುಪ, ಚಿಕಾಗೋ ಬಾಷಣ ಬಗ್ಗೆ ಗುಂಡೂ ರಾವ್ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.

Also read:

► ಕಳೆದ 10 ವರ್ಷದಿಂದ ರಾಜಕೀಯ ನಾಯಕರು ಸುಂದರ ಕರ್ನಾಟಕದ ಕನಸೇ ಕಂಡಿಲ್ಲ: ಚಕ್ರವರ್ತಿ ಸೂಲಿಬೆಲೆ  – http://kundapraa.com/?p=26818

► ಚಿಕಾಗೋದ ಎರಡೂವರೆ ನಿಮಿಷದ ಭಾಷಣದಿಂದ ಹಿಂದೂ ಧರ್ಮದ ಮಹತ್ವ ಜಗತ್ತಿಗೆ ತಿಳಿಯಿತು: ಧರ್ಮವೃತಾನಂದ ಸ್ವಾಮೀಜಿ – http://kundapraa.com/?p=26864 

Leave a Reply

Your email address will not be published. Required fields are marked *

4 × 3 =