ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿವೇಕಾನಂದರ ತತ್ವಾದರ್ಶಗಳನ್ನು ಪ್ರಚುರ ಪಡಿಸುವ ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸಿ ನವ ಚೈತನ್ಯ ತುಂಬುವ ಉದ್ದೇಶದೊಂದಿಗೆ ರಾಜ್ಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಯುವ ಜಾಗೃತಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಯುವ ಮುಂದಾಳು ಚರಣ್ ಬೈಂದೂರು ಆಯ್ಕೆಗೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಚರಣ್ ಅವರು ಬಿಡುವಿನ ವೇಳೆಯಲ್ಲಿ ಬೈಂದೂರು ಭಾಗದ ಸಂಘ ಸಂಸ್ಥೆ, ಸಂಘಟನಾ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಯುವ ಜಾಗೃತಾ ವೇದಿಕೆಯ ರಾಜ್ಯಾಧ್ಯಕ್ಷ ಸಂದೀಪ್ ಪಾಟೀಲ್ ಚರಣ್ ಅವರನ್ನು ಆಯ್ಕೆ ಮಾಡಿದ್ದಾರೆ. ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸುಕುಮಾರ ಶೆಟ್ಟಿ ಚರಣ್ ಬೈಂದೂರು ಅವರನ್ನು ಅಭಿನಂದಿಸಿದ್ದಾರೆ. / ಕುಂದಾಪ್ರ ಡಾಟ್ ಕಾಂ ಸುದ್ದಿ/
ಯುವ ಜಾಗೃತಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಚರಣ್ ಬೈಂದೂರು ಆಯ್ಕೆ
