ಗೋಳಿಹೊಳೆ: ಛತ್ರಪತಿ ಯುವ ಸೇನೆ ಸಡಗರ – 2019

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕುಂದಾಪುರ ಮತ್ತು ಬೈಂದೂರು ತಾಲೂಕಿನ ಮರಾಠಿ ಜನಾಂಗದವರು ಶ್ರಮ ಜೀವಿಗಳು ಮತ್ತು ನಂಬಿಕಸ್ಥರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದುವರಿಯಬೇಕಾದ್ದು ಬಹಳಿಷ್ಟಿದೆ. ಆ ನಿಟ್ಟಿನಲ್ಲಿ ಮರಾಟಿಗರ ಏಳಿಗೆಗೆ ಸರ್ವ ರೀತಿಯಲ್ಲಿ ಸಹಕರಿಸುವೆ ಎಂದು ಶಾಸಕ ಬಿ ಎಂ ಸುಕುಮಾರ ಶೆಟ್ಟಿಯವರು ನುಡಿದರು.

ಗೋಳಿಹೊಳೆ ಮಹಿಷಾಮರ್ದಿನಿ ಸಭಾ ಭವನದಲ್ಲಿ ಜರುಗಿದ ಮರಾಠಿಗರ ಸಾಂಸ್ಕೃತಿಕ ಪರಂಪರೆಯನ್ನ ಬಿಂಬಿಸುವ ಛತ್ರಪತಿ ಯುವ ಸೇನೆ ಸಡಗರ 2019 ಉದ್ಘಾಟಿಸಿ ಮಾತನಾಡಿದರು. ಛತ್ರಪತಿ ಯುವ ಸೇನೆ ಸಾಂಸ್ಕೃತಿಕ ವೈಭವದಲ್ಲ್ಲಿ ಕುಂದಾಪುರ ತಾಲೂಕಿನ ಮೊಟ್ಟ ಮೊದಲ ವೈದ್ಯ ಪದವಿದರೆ ಡಾ, ನಿವೇದಿತ ನಂದಿಗದ್ದೆ ಮತ್ತು ಅಂತರ್ ರಾಷ್ಟ್ರೀಯ ಕ್ರೀಡಾಪಟು ಮಂಜುನಾಥ ಮರಾಟಿ ಹೊಸೇರಿ ಹಾಗು ವಿದ್ಯಾರ್ಥಿ ಸಾಧಕರದ ಭುವನೇಶ್ವರಿ ಕನ್ಕಿಮಡಿ, ವಿನೋದ ನಾಗರಮಕ್ಕಿ ಸುಬ್ರಮಣ್ಯ ಮಂಗಳಮಕ್ಕಿ, ಕಿಶನ್ ಹಾಲಾಡಿ, ರಾಜೇಶ ಹಾಲ್ಕಲ್, ರಜನಿ ಕೊಲ್ಲೂರುರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

 

ಬೈಂದೂರು ವಲಯ ಮರಾಠಿ ಸಮಾಜ ಸುಧಾರಕರ ಸಂಘದ ಅಧ್ಯಕ್ಷರಾದ ಬೋಜು ನಾಯ್ಕ ಜಾಂಬ್ಳಿಹೊಂಡ. ಉಪಾಧ್ಯಕ್ಷರಾದ ನಾಗೇಶ ನಾಯ್ಕ, ಬೈಂದೂರು ವಲಯ ಮರಾಠಿ ಉದ್ಯೋಗಿಗಳ ಸಂಘದ ಅಧ್ಯಕ್ಷರಾದ ನಾರಯಣ ನಾಯ್ಕ ಬ್ರಹ್ಮೇರಿ, ಛತ್ರಪತಿ ಯುವ ಸೇನೆ ಕಾರ್ಯದರ್ಶಿ ಗೋಪಾಲ ನಾಯ್ಕ ಚಿತ್ತೂರು, ಛತ್ರಪತಿ ಯುವ ಸೇನೆ ಉಪಾಧ್ಯಕ್ಷರಾದ ಚಂದ್ರ ನಾಯ್ಕ ಹರ್ಕೋಡು, ವಸಂತಿ ರಂಗುನಾಯ್ಕ ಬಸ್ರೀಬೇರು ಉಪಸ್ಥಿತರಿದ್ದರು.

ಅಧ್ಯಕ್ಷರಾದ ಮಹಾಲಿಂಗ ನಾಯ್ಕ ಜೋಗಿಜಡ್ಡು ಅಧ್ಯಕ್ಷೀಯ ನುಡಿಗಳನ್ನಾಡಿದರು. ಉಮೇಶ ನಾಯ್ಕ ಹಳ್ಳಿಹೊಳೆ ವಾರ್ಷಿಕ ವರದಿ ವಾಚಿಸಿದರು. ರಘು ನಾಯ್ಕ ಕನ್ಕಿಮಡಿ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ನಾಯ್ಕ ನಂದಿಗದ್ದೆ ಧನ್ಯವಾದಗೈದರು.

 

Leave a Reply

Your email address will not be published. Required fields are marked *

one + ten =