ಚಿರನಿದ್ರೆಗೆ ಜಾರಿದ ಬಡಗುತಿಟ್ಟಿನ ಯಕ್ಷಗಾನ ಧ್ರುವತಾರೆ ಚಿಟ್ಟಾಣಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬಡಗುತಿಟ್ಟಿನ ಯಕ್ಷಗಾನದ ಧ್ರುವತಾರೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅನಾರೋಗ್ಯದಿಂದ ದೈವಾಧಿನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಹ ತ್ಯಜಿದ್ದಾರೆ.

ಯಕ್ಷಗಾನದ ಬಡಗುತಿಟ್ಟು ಶೈಲಿಯ ಮೇರು ಕಲಾವಿದರು ಚಿಟ್ಟಾಣಿಯವರು ಕೌರವ, ದುಷ್ಟಬುದ್ದಿ, ಭಸ್ಮಾಸುರ, ಕೀಚಕ, ಮಾಗದ, ಕರ್ಣ, ರುದ್ರಕೋಪ, ಕಂಸನ ಪಾತ್ರಗಳಲ್ಲಿ ವಿಂಚಿದ್ದರು. ‘ಚಿಟ್ಟಾಣಿ ಘರಾಣಾ’ ಎಂದೇ ರಾಮಚಂದ್ರ ಹೆಗಡೆ ಶೈಲಿ ಹೆಸರುವಾಸಿಯಾಗಿತ್ತು. ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾದ ಮೊದಲ ಯಕ್ಷಗಾನ ಕಲಾವಿದ ಇವರು. ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಬಡಗುತಿಟ್ಟು ಶೈಲಿಯಲ್ಲಿ ನವರಸಗಳನ್ನೂ ಹೊರಹೊಮ್ಮಿಸುತ್ತಿದ್ದರು.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಚಿಟ್ಟಾಣಿ ರಾಮಚಂದ್ರ ಹೆಗಡೆ ಜನವರಿ 1, 1933ರಲ್ಲಿ ಜನಿಸಿದರು. ತಮ್ಮ 7ನೇ ವರ್ಷದಲ್ಲಿಯೇ ಯಕ್ಷಗಾನದಲ್ಲಿ ನಟಿಸಲು ಆರಂಭ ಮಾಡಿದರು. ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಶಾಲೆಬಿಟ್ಟ ರಾಮಚಂದ್ರ ಹೆಗಡೆ ಕೇವಲ 14ನೇ ವರ್ಷಕ್ಕೇ ಪ್ರಮುಖ ಪಾತ್ರಗಳನ್ನ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

14 − 2 =