ತಾಲೂಕಿನ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಆಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು: ತಾಲೂಕಿನ ಕುಂದಾಪುರ ಹೊಲಿಕ್ರಾಸ್ ಚರ್ಚ್, ಬಸ್ರೂರು ಫಿಲೀಪ್ ನೇರಿ ಚರ್ಚ್, ತ್ರಾಸಿ ಕ್ರಿಸ್ಟ್ಕಿಂಗ್ ಚರ್ಚ್, ಗಂಗೊಳ್ಳಿ ಅವರ್ ಲೇಡಿ ಆಫ್ ಇಮ್ಯಾಕ್ಯೂಲೇಟ್ ಚರ್ಚ್, ತಲ್ಲೂರು, ಬೆಳ್ವೆ ಜೊಸೆಫ್ ಚರ್ಚ್, ಫ್ರಾನ್ಸಿಸ್ ಆಸಿಸಿ ಚರ್ಚ್, ಬೈಂದೂರು ಹೊಲಿಕ್ರಾಸ್ ಚರ್ಚ್ ಸೇರಿದಂತೆ ವಿವಿಧ ಚರ್ಚುಗಳು ಹಾಗೂ ಕ್ರೈಸ್ತ ಸಮುದಾಯ ಕ್ರಿಸ್ಮಸ್ ಹಬ್ಬವನ್ನು ಸರಳವಾಗಿ ಆಚರಿಸಿ ಸಂಭ್ರಮಿಸಿದರು.

Click Here

Call us

Call us

ಚರ್ಚ್ಗಳಿಗೆ ಕುಟುಂಬ ಸಮೇತ ತೆರಳಿದ ಕ್ರೈಸ್ತರು, ಯೇಸು ಕ್ರಿಸ್ತನ ಶೀಲುಬೆ ಮುಂದೆ ನಿಂತು ಶ್ರದ್ದಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ನ ಆವರಣದಲ್ಲಿ ನಿರ್ಮಿಸಿರುವ ಕಣ್ಮನ ಸೆಳೆಯುವ ಗೋದಲಿಗಳು ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದ್ದವು. ಕ್ರೈಸ್ತರ ಮನೆಗಳಲ್ಲಿ ಸಂಭ್ರಮ ಮನೆಮಾಡಿದ್ದು, ಗೋದಲಿ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.

Click here

Click Here

Call us

Visit Now

ಬೈಂದೂರು ಹೊಲಿಕ್ರಾಸ್ ಚರ್ಚ್‌ನಲ್ಲಿ ರೆ.ಪಾ ಲಿಯೋ ಲಸ್ರಾದೊ, ರೆ.ಪಾ ಸ್ಟ್ಯಾನಿ ಮಣಕ್ಕಲ್, ರೆ.ಪಾ ವಿನ್ಸೆಂಟ್ ಕುವೆಲ್ಲೊ, ಬ್ರದರ್ ಲಿವನ್ ಮಥಾಯಸ್ ಇವರ ನೇತ್ರತ್ವದಲ್ಲಿ ಸರಳವಾಗಿ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಯಿತು.

ಇದನ್ನೂ ಓದಿ:
► ಸಡಗರ, ಸಂಭ್ರಮದ ಕ್ರಿಸ್‌ಮಸ್, ಏಸುಕ್ರಿಸ್ತನ ಜನ್ಮದಿನhttps://kundapraa.com/?p=9588 .

Call us

ಚಿತ್ರಗಳು: ಎ ಒನ್ ಸ್ಟುಡಿಯೋ

Leave a Reply

Your email address will not be published. Required fields are marked *

eleven − 3 =