ನಾಗೂರು: ತೆಂಗಿನ ಸಮಗ್ರ ಬೇಸಾಯ ತರಬೇತಿ ಕಾರ್ಯಕ್ರಮ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ‘ಕರಾವಳಿಯ ಪ್ರಮುಖ ತೋಟಗಾರಿಕೆ ಕೃಷಿಯಾದ ತೆಂಗು ಉತ್ತಮ ಆರ್ಥಿಕ ಬೆಳೆ. ಕೂಲಿಯಾಳುಗಳ ಕೊರತೆಯಿಂದ ತೆಂಗು ಕೃಷಿಗೆ ಆತಂಕ ಎದುರಾಗಿದೆ. ಗ್ರಾಮೀಣ ಯುವಕ, ಯುವತಿಯರು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ನಡೆಸುವ ತೆಂಗಿನ ಮರ ಏರುವ ತರಬೇತಿ ಪಡೆದು ಲಾಭಕರ ಉದ್ಯೋಗ ನಡೆಸಬಹುದು’ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಶಶಿಧರ್ ಕೆ. ಸಿ. ತಿಳಿಸಿದರು.

Call us

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ, ಕುಂದಾಪುರ ತಾಲ್ಲೂಕು ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಷನ್ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಾಗೂರು ಒಡೆಯರಮಠ ಗೋಪಾಲಕೃಷ್ಣ ಕಲಾಮಂಟಪದಲ್ಲಿ ‘ವಿಶ್ವ ತೆಂಗು ದಿನಾಚರಣೆ’ ಅಂಗವಾಗಿ ಆಯೋಜಿಸಿದ್ದ ‘ತೆಂಗಿನ ಸಮಗ್ರ ಬೇಸಾಯ ತರಬೇತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಾಪ್‌ಕಾಮ್ಸ್ ಅಧ್ಯಕ್ಷ ಸೀತಾರಾಮ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಎಸ್ ಯು. ಪಾಟೀಲ್, ತೆಂಗು ಉತ್ಪಾದಕರ ಕಂಪನಿಯ ಮೂಲಕ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಬ್ರಾಂಡ್ ಮಾಡಿ ಮಾರುವುದರಿಂದ ಅಧಿಕ ಲಾಭ ಪಡೆಯಬಹುದು’ ಎಂದರು.

ಮುಖ್ಯ ಅತಿಥಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಂಜೀವ್ ನಾಯ್ಕ್, ‘ ತೆಂಗು ಫೆಡರೇಷನ್ ಮತ್ತು ಕಂಪನಿಗಳಿಂದ ರೈತರಿಗೆ ಆಗುವ ಲಾಭ’, ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ , ‘ತೆಂಗಿನ ಮರದಿಂದ ಉತ್ಪಾದಿಸುವ ಕಲ್ಪರಸ’, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಧನಂಜಯ ಬಿ. ‘ ವರ್ಜಿನ್ ತೆಂಗಿನ ಎಣ್ಣೆ’ ಮುಂತಾದವುಗಳ ಪ್ರಾಮುಖ್ಯವನ್ನು ವಿವರಿಸಿದರು.

Call us

ತಾಂತ್ರಿಕ ಸಮಾವೇಶದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಚೈತನ್ಯ ಎಚ್. ಎಸ್. ‘ತೆಂಗು ಕೃಷಿಯಲ್ಲಿ ಪೋಷಕಾಂಶಗಳ ನಿರ್ವಹಣೆ’ , ಬೇಸಾಯ ಶಾಸ್ತ್ರ ವಿಜ್ಞಾನಿ ಡಾ. ನವೀನ್ ಎನ್. ಈ. ‘ ತೆಂಗಿನ ತ್ಯಾಜ್ಯದಿಂದ ಎರೆಗೊಬ್ಬರ ತಯಾರಿ’ ಕುರಿತು ಮಾಹಿತಿ ನೀಡಿದರು. ತೆಂಗಿನ ಮರದ ಬುಡ ಬಿಡಿಸುವುದರ ಪ್ರಾತ್ಯಕ್ಷಿಕೆ ನೀಡಲಾಯಿತು. ಕುಂದಾಪುರ ಕಲ್ಪವೃಕ್ಷ ತೆಂಗು ಉತ್ಪಾದಕರ ಫೇಡರೇಷನ್‌ನ ೪೫ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

two × three =