ಕುಂದಾಪುರ ವಿಧಾನಸಭಾ ಕ್ಷೇತ್ರದ ಕ್ವಾರಂಟೈನ್ ಮಾಹಿತಿ-ದೂರಿಗಾಗಿ ಕಂಟ್ರೋಲ್ ರೂಂ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕ್ವಾರಂಟೈನ್ ಮಾಹಿತಿಗೆಇಲ್ಲಿನ ಪುರಸಭೆ ಕಟ್ಟಡದ ಮೊದಲ ಮಹಡಿಯಲ್ಲಿ ಬುಧವಾರದಿಂದ ಕಂಟ್ರೋಲ್ ರೂಂ ಆರಂಭಿಸಲಾಗಿದೆ.

ಕಂಟ್ರೋಲ್ ರೂಂಗೆ ಕರೆ ಮಾಡಿ ಕ್ವಾರಂಟೈನ್ ಕೇಂದ್ರಗಳಿಗೆ ಸಂಬಂಧಿಸಿದ ಮಾಹಿತಿ, ದೂರು, ಸಮಸ್ಯೆಗಳಿದ್ದರೆ ಹೇಳಿಕೊಳ್ಳಬಹುದು. ಇಲ್ಲಿನ ಸಿಬ್ಬಂದಿಗಳು ಲಭ್ಯವಿರುವ ಮಾಹಿತಿ ಒದಗಿಸುವುದಲ್ಲದೇ ಆಯಾ ಕ್ವಾರಂಟೈನ್ ಕೇಂದ್ರಗಳ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲಿದ್ದಾರೆ.

ಹೊರರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್ ಕೇಂದ್ರದಲ್ಲಿ ಅನೇಕ ಸಮಸ್ಯೆಗಳಾಗುತ್ತಿದ್ದವು. ಆಹಾರ ತಡವಾಗಿ ತಲುಪುತ್ತಿತ್ತು. ನೀರಿನ ವ್ಯವಸ್ಥೆ, ವಿದ್ಯುತ್, ಊಟ ಶುಚಿತ್ವದ ವ್ಯವಸ್ಥೆ ಕುರಿತು ದೂರುಗಳಿದ್ದವು. ಹಾಗಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಕೇಂದ್ರ ತೆರೆಯಲು ಸೂಚಿಸಿದ್ದು ಅದರಂತೆ ಪುರಸಭೆ ಕೊಠಡಿಯೊಂದನ್ನು ಸಜ್ಜುಗೊಳಿಸಿ ನೀಡಿದೆ. ಇಲ್ಲಿ ಶಾಸಕರೇ ಸಿಬಂದಿಗಳನ್ನು ನೇಮಿಸಿ ಇರಿಸಿದ್ದಾರೆ. ಶಾಸಕರು ಬುಧವಾರ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹೊರರಾಜ್ಯಗಳಿಂದ ಬರುವವರು ಮಾಹಿತಿಗೆ, ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರು ದೂರುಗಳಿಗೆ ಈ ಕೇಂದ್ರವನ್ನು ಸಂಪರ್ಕಿಸಬಹುದು. ಪ್ರಸ್ತುತ ಸೇವಾಸಿಂಧು ಆ್ಯಪ್ ಮೂಲಕ ಹೊರರಾಜ್ಯಗಳಿಂದ ಬರುವ ಪ್ರಕ್ರಿಯೆ ತಡೆ ಹಿಡಿಯಲಾಗಿದೆ. ಕೆಲವು ದಿನಗಳಲ್ಲಿ ಮತ್ತೆ ಚಾಲನೆ ದೊರೆಯಲಿದೆ. ಈಗಾಗಲೇ ತಾಲೂಕಿನಲ್ಲಿ 44 ಕ್ವಾರಂಟೈನ್ ಕೇಂದ್ರಗಳಿವೆ.

  • ಕ್ವಾರಂಟೈನ್ ಮಾಹಿತಿಗೆ ಸಂಪರ್ಕಿಸ ಬೇಕಾದ ಸಂಖ್ಯೆ
  • 7204018041
  • 7204018071
  • 7619568072

ಇದನ್ನೂ ಓದಿ:
ಕುಂದಾಪುರದಲ್ಲಿ120 ಬೆಡ್‌ಗಳ ಕೋವಿಡ್-19 ಆಸ್ಪತ್ರೆ ಸಜ್ಜು – https://kundapraa.com/?p=37752 .
► ಮುಂಬೈನಿಂದ ನೇರ ಮನೆಗೆ ತೆರಳಿದ್ದ ವ್ಯಕ್ತಿಯನ್ನು ಕ್ವಾರಂಟೈನ್‌ಗೆ ಒಪ್ಪಿಸಿದ ಕುಟುಂಬಿಕರು – https://kundapraa.com/?p=37735 .
► ಉಡುಪಿ ಜಿಲ್ಲೆಯಲ್ಲಿ ಒಂದೇ ದಿನ 27 ಕೊರೋನಾ ಪಾಸಿಟಿವ್ – https://kundapraa.com/?p=37743 .

Leave a Reply

Your email address will not be published. Required fields are marked *

eight − two =