ಕ್ವಾರಂಟೈನ್ ಮುಗಿಸಿ ತೆರಳಿದ್ದ ಬಾರಿಕೆರೆಯ ಮಹಿಳೆ, ವಂಡಾರಿನ ಮಗುವಿಗೆ ಕೊರೋನಾ ಪಾಸಿಟಿವ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: 14 ದಿನಗಳ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ಕೋಟತಟ್ಟು ಗ್ರಾಮದ ಬಾರಿಕೆರೆಯ ಮಹಿಳೆ ಹಾಗೂ ವಂಡಾರು ಗ್ರಾಮದ ಮಾರ್ವೆಯ ಮಗುವಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈರ್ವರನ್ನು ಉಡುಪಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್’ಡೌನ್ ಮಾಡಲಾಗಿದೆ.

ಮುಂಬೈನಿಂದ ಆಗಮಿಸಿದ್ದ ಮಹಿಳೆ 14 ದಿನದ ಕ್ವಾರಂಟೈನ್ ಮುಗಿಸಿದ್ದರು. ಪೂನದಿಂದ ತಂದೆ-ತಾಯಿಯೊಂದಿಗೆ ಆಗಮಿಸಿದ ಒಂದೂವರೇ ವರ್ಷದ ಮಗುವಿನ ಕುಟುಂಬ ಕೂಡ ಕ್ವಾರಂಟೈನಿನಲ್ಲಿತ್ತು. ಸರಕಾರದ ಹೊಸ ಆದೇಶ ಬಂದ ಬಳಿಕ, ಗಂಟಲು ದ್ರವ ಪರೀಕ್ಷೆಯ ವರದಿ ಲಭ್ಯವಾಗುವ ಮುನ್ನವೇ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಅವರು ಮೇ 28 ರಂದು ಸಂಜೆ ಮನೆಗೆ ಬಂದಿದ್ದು ಮೇ 29ರಂದು ಪಾಸಿಟಿವ್ ಇರುವುದು ಎಂದು ತಿಳಿದು ಬಂದಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸ್ಥಳಕ್ಕೆ ಬ್ರಹ್ಮಾವರ ತಹಶಿಲ್ದಾರ್ ಕಿರಣ್ ಗೌರಯ್ಯ, ಕೋಟ ಠಾಣಾಧಿಕಾರಿ ರಾಜಶೇಖರ್ ಮಂದಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕೋಟತಟ್ಟು ಗ್ರಾ.ಪಂ. ವ್ಯಾಪ್ತಿಯ ಬಾರಿಕೆರೆಯ 100ಮೀ. ವ್ಯಾಪ್ತಿಯ 12 ಮನೆ ಮತ್ತು ವಂಡಾರು ಮಾರ್ವಿಯಮನೆಯನ್ನುಸೀಲ್ ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ಪರೀಕ್ಷೆಗೆ ಒಳಪಡಿಸಲಿದ್ದು, ಉಳಿದವರನ್ನು ಕ್ವಾರಂಟೈನ್ ಮಾಡಲಾಗಿದೆ.

ಇದನ್ನೂ ಓದಿ:
► ಜಿಲ್ಲೆಯಲ್ಲಿ ಮೂರು ದಿನ ಭಾರಿ ಮಳೆ: ಸಾರ್ವಜನಿಕರಿಗೆ ಸೂಚನೆ – https://kundapraa.com/?p=38020 .
► ಜೂನ್ 15ರಿಂದ ಮೀನುಗಾರಿಕೆ ನಿಷೇಧ: ಪರಿಷ್ಕೃತ ಆದೇಶ – https://kundapraa.com/?p=38016 .
► ಉಡುಪಿ: 7 ದಿನ ಸರ್ಕಾರಿ ಕ್ವಾರಂಟೈನ್ ಪೂರೈಸಿದವರಿಗೆ ಹೋಂ ಕ್ವಾರಂಟೈನ್‌ಗೆ ಅನುಮತಿ – https://kundapraa.com/?p=37978 .

 

Leave a Reply

Your email address will not be published. Required fields are marked *

2 × one =