ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವ್ಯಕ್ತಿಯೋರ್ವನಿಗೆ ಕೋರೋನಾ ಸೋಂಕು ಇರುವ ಬಗ್ಗೆ ಬೈಂದೂರಿನಾದ್ಯಂತ ಗಾಸಿಪ್ ಹರಿದಾಡುತ್ತಿದ್ದು, ಕೊರೋನಾ ಪಾಸಿಟಿವ್ ಇರುವುದು ಈವರೆಗೆ ದೃಢಪಟ್ಟಿಲ್ಲ ಎನ್ನಲಾಗಿದೆ. ವ್ಯಕ್ತಿಯನ್ನು ಐಸೋಲೇಶನ್‌ನಲ್ಲಿರಿಸಿ ಆತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿಯ ನಿರೀಕ್ಷೆಯಲ್ಲಿರುವುದಾಗಿ ಆರೋಗ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ.
ಬೆಳಗಾವಿಯ ಕಾನಾಪುರದಿಂದ ಮೇ.1ರ ರಾತ್ರಿ ಬಂದಿದ್ದ ವ್ಯಕ್ತಿ ಬೈಂದೂರು ತಾಲೂಕಿನ ಕಳವಾಡಿಯ ಮನೆಗೆ ತೆರಳಿದ್ದ ಎನ್ನಲಾಗಿದೆ. ಬೆಳಗಾವಿಯಲ್ಲಿ ಆರೋಗ್ಯ ಇಲಾಖೆ ವ್ಯಕ್ತಿಯ ಆತನ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಅದರಲ್ಲಿ ನೆಗೆಟಿವ್ ಬಂದಿದೆ. ಆದರೆ ಮೊಬೈಲ್‌ಗೆ ಬಂದಿರುವ ಸಂದೇಶದಿಂದ ಗೊಂದಲಕ್ಕೊಳಗಾದ ವ್ಯಕ್ತಿ ಬೈಂದೂರು ಸರಕಾರಿ ಆಸ್ಪತ್ರೆಗೆ ಬಂದಿದ್ದ. ಆತನನ್ನು ಕೂಡಲೇ ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಂಜೆಯೊಳಗೆ ವರದಿ ಕೈಸೇರುವ ಸಾಧ್ಯತೆ ಇದೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಬೆಳಗಾವಿಯಿಂದ ಬೈಂದೂರಿಗೆ ಬಂದ ವ್ಯಕ್ತಿಯ ಕೋರೋನಾ ಟೆಸ್ಟ್ 2ನೇ ವರದಿಯೂ ನೆಗೆಟಿವ್ – https://kundapraa.com/?p=37410 .