ಕೋವಿಡ್ ನಿಯಂತ್ರಣ ಹಾಗೂ ಸಹಾಯಕ್ಕಾಗಿ ಬೈಂದೂರು, ಕುಂದಾಪುರದಲ್ಲಿ ಸಹಾಯವಾಣಿ ಕೇಂದ್ರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋವಿಡ್ ನಿಯಂತ್ರಣ ಹಾಗೂ ಸಹಾಯಕ್ಕಾಗಿ ಕುಂದಾಪುರ ಮತ್ತು ಬೈಂದೂರು ಭಾಗದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಅಗತ್ಯವುಳ್ಳ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಛೇರಿಯಲ್ಲಿ ಕೋವಿಡ್ ತುರ್ತು ಸಹಾಯವಾಣಿ ಕೇಂದ್ರ ತೆರೆಯಲಾಗಿದ್ದು ನಾಗಶ್ರೀ ಅವರನ್ನು (7760514907) ಸಂಪರ್ಕಿಸಿ ಅಗತ್ಯ ಸೇವೆಗಳ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಆಸ್ಪತ್ರೆ ಮತ್ತು ಅಂಬ್ಯುಲೆನ್ ಸೇವೆಗಾಗಿ ಪ್ರಕಾಶ್ ಪೂಜಾರಿ ಜಡ್ಡು ಮತ್ತು ಹರ್ಷ ಮೊಗವೀರ ಸಿದ್ಧಾಪುರ (9008121917, 8971162076), ವೆಂಟಿಲೇಟರ್ ಮತ್ತು ರೆಮಿಡಿಸಿವರ್ಗಾಗಿ ಶರತ್ ಕುಮಾರ ಶೆಟ್ಟಿ, ಮತ್ತು ಸಾಮ್ರಾಟ್ ಶೆಟ್ಟಿ (9986099687, 9845230002), ವ್ಯಾಕ್ಸಿನೇಶನ್ ಸೇವೆಗಾಗಿ ಸುರೇಶ್ ಬಟವಾಡಿ ಮತ್ತು ಆನಂದ ಖಾರ್ವಿ, (9448525641, 9880476829), ಆಯುಷ್ಮಾನ್ ಭಾರತ್ ಕಾರ್ಡ್ ಸೇವೆಗಾಗಿ ಪ್ರಿಯದರ್ಶಿನಿ ಮತ್ತು ಭಾಗೀರಥಿ (7975887506, 9448605186), ಪ್ರಚಾರ ವಿಭಾಗ ವಿನೋದ್ ಭಂಡಾರಿ ಮತ್ತು ಪ್ರಜ್ವಲ್ ಕುಮಾರ ಶೆಟ್ಟಿ (9900113246, 9880996689) ಹಾಗೂ ಅಂತಿಮ ಸಂಸ್ಕಾರಕ್ಕಾಗಿ ರೋಹಿತ್ ಶೆಟ್ಟಿ ಸಿದ್ಧಾಪುರ ಮತ್ತು ಆಕಾಶ್ ಪೂಜಾರಿ (9980255514, 8296029677) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಸದರ ಕಛೇರಿಯಲ್ಲಿಯೂ ಸಹಾಯವಾಣಿ ಕೇಂದ್ರವಿದ್ದು ಅಗತ್ಯವುಳ್ಳವರು ಸಂಸದರ ಆಪ್ತ ಸಹಾಯಕ ಶಿವಕುಮಾರ್ (9844242005) ಅವರನ್ನು ಸಂಪರ್ಕಿಸಬಹುದಾಗಿದೆ.

ಕುಂದಾಪುರ ನಗರದಲ್ಲಿ ಸಹಾಯವಾಣಿ:
ಕೋವಿಡ್ – 19 ಹಾಗೂ ಲಾಕ್‌ಡೌನ್‌ಗೆ ಸಂಬಂಧಿಸಿದ ಮಾಹಿತಿ ಹಾಗೂ ಸಮಸ್ಯೆಗಳ ಸ್ಪಂದನೆಗೆ ಕುಂದಾಪುರದಲ್ಲಿಯೂ ತುರ್ತು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಅಗತ್ಯವುಳ್ಳವರು 9844783053 ಸಂಖ್ಯೆಗೆ ದಿನದ 24 ಗಂಟೆಯೂ ಕರೆಮಾಡಿ ಸಂಪರ್ಕಿಸಬಹುದಾಗಿದೆ.

ಕುಂದಾಪುರ ನಗರ ಪ್ರದೇಶದಲ್ಲಿ ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆಯ ಬೆಡ್ ಲಭ್ಯತೆಯ ಮಾಹಿತಿ, ಅಂಬುಲೆನ್ಸ್, ಕೋವಿಡ್ ವಾಕ್ಸಿನೇಷನ್, ಲಾಕ್ಡೌನ್ನಿಂದ ಅಗತ್ಯ ವಸ್ತು ಖರೀದಿಗೆ ತೆರಳಲು ಸಾಧ್ಯವಾಗದ ವೃದ್ಧರು ಅಶಕ್ತರಿಗೆ ಸಹಾಯ ಮಾಡುವುದು ಸೇರಿದಂತೆ ವಿವಿಧ ಸೇವೆಗಳನ್ನು ನೀಡಲು ಕಲಾಕ್ಷೇತ್ರ ಕುಂದಾಪುರದ ಬಿ. ಕಿಶೋರ್ ಕುಮಾರ್ ಅವರ ತಂಡ ಸನ್ನದ್ಧವಾಗಿದೆ.

Leave a Reply

Your email address will not be published. Required fields are marked *

five × two =