ಉಡುಪಿ ಜಿಲ್ಲೆ: ಕೊರೋನಾಗೆ ಎರಡನೇ ಬಲಿ. ಮಹಾರಾಷ್ಟದಿಂದ ಬಂದಿದ್ದ ತೆಕ್ಕಟ್ಟೆ ವ್ಯಕ್ತಿ ಸಾವು

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಕೊವೀಡ್-19ಗೆ ಮತ್ತೊರ್ವ ವ್ಯಕ್ತಿ ಬಲಿಯಾಗಿದ್ದಾರೆ. ಮಹಾರಾಷ್ಟದಿಂದ ಬಂದಿದ್ದ ತೆಕ್ಕಟ್ಟೆ ಭಾಗದ 54 ವರ್ಷ ಪ್ರಾಯದ ವ್ಯಕ್ತಿ ಮೃಪಪಟ್ಟಿದ್ದು, ವರದಿಯಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ.

Call us

ಮಹಾರಾಷ್ಟದಿಂದ ನಾಲ್ವರು ಜೂನ್ 18ರ ಮಧ್ಯಾಹ್ನ ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಅವರೆಲ್ಲರಿಗೂ ಡಿಸ್ಟಿಕ್ ರಿಸಿವ್ ಸೆಂಟರಿನಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿತ್ತು. ಟೆಂಪ್ರೆಚರ್ ಹೆಚ್ಚು ಇಲ್ಲದೇ ಇದ್ದುದರಿಂದ ಹೋಮ್ ಕ್ವಾರಂಟೈನಿಗೆ ಕಳುಹಿಸಲಾಗಿತ್ತು. ಆದರೆ ಸಂಜೆಯ ವೇಳೆಗೆ ಓರ್ವರು ಮೃತಪಟ್ಟಿದ್ದರು. ಅವರ ಸ್ವ್ಯಾಬ್ ಪರೀಕ್ಷಿಸಿದಾಗ ಮೃತ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಮರಣಕ್ಕೆ ನಿಖರ ಕಾರಣ ತಿಳಿದುಬರಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಈ ಬಗ್ಗೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಕೋವಿಡ್ ಬಂದ ನಂತರ ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ವೈದ್ಯರ ತಂಡ ನಿರಂತವಾಗಿ ಕೆಲಸ ಮಾಡುತ್ತಿದೆ. ಮುಂಬೈನಿಂದ ಬರುವಾಗಲೇ ತಡವಾಗಿ ಬಂದು ಸರಿಯಾದ ಮಾಹಿತಿ ಒದಗಿಸದಿದ್ದರೇ, ಜೀವಕ್ಕೆ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಆ ಬಗ್ಗೆ ಜಾಗೃತೆ ವಹಿಸುವುದು ಅಗತ್ಯ ಎಂದವರು ತಿಳಿಸಿದ್ದಾರೆ.

Call us

ಮೃತ ವ್ಯಕ್ತಿಯೊಂದಿಗೆ ಬಂದಿದ್ದ ಉಳಿದ ಮೂವರ ಸ್ವ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ  ಬೈಂದೂರು ತಾಲೂಕಿನ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಹೊರ ರಾಜ್ಯದವರು ಜಿಲ್ಲೆಗೆ ಆಗಮಿಸುವ ಸಮಯದಲ್ಲಿ ಗರಿಷ್ಠ ಪ್ರಕರಣ ದಾಖಲಾಗಿದ್ದು,  ಅವರಲ್ಲಿ ಬಹುಪಾಲು ಮಂದಿಗೆ ಕೋವಿಡ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳದಿರುವುದರಿಂದ ಬೇಗ ಡಿಸ್ಚಾರ್ಜ್ ಆಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಗರಿಷ್ಠ ಪಾಸಿಟಿವ್ ಪ್ರಕರಣಗಳನ್ನು ದಾಖಲಿಸಿದ್ದ ಜಿಲ್ಲೆ, ಅಷ್ಟೇ ವೇಗವಾಗಿ ಗುಣಮುಖರಾಗುವವರ ಸಂಖ್ಯೆಯನ್ನೂ ದಾಖಲಿಸಿತ್ತು /ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಉಡುಪಿ ಕೊರೋನಾ ಅಪ್‌ಡೇಟ್: ಶುಕ್ರವಾರ 11 ಪಾಸಿಟಿವ್. ಓರ್ವ ವ್ಯಕ್ತಿ ಸಾವು – https://kundapraa.com/?p=38799 .

 

2 thoughts on “ಉಡುಪಿ ಜಿಲ್ಲೆ: ಕೊರೋನಾಗೆ ಎರಡನೇ ಬಲಿ. ಮಹಾರಾಷ್ಟದಿಂದ ಬಂದಿದ್ದ ತೆಕ್ಕಟ್ಟೆ ವ್ಯಕ್ತಿ ಸಾವು

Leave a Reply

Your email address will not be published. Required fields are marked *

4 × five =