ಬೈಂದೂರಿಗೆ ಕ್ರಿಕೆಟಿಗ ಹಾಗೂ ನಟ ಎಸ್. ಶ್ರೀಶಾಂತ್

ಸೆ. 13ರಂದು ಇಂದು ’ರುಪೀ ಮಾಲ್’ ಶುಭಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಆರ್. ಎಸ್. ವೆಂಚರ‍್ಸ್ ಪ್ರವರ್ತಿತ ಬೈಂದೂರಿನ ಪ್ರಥಮ ವ್ಯಾಪಾರ ಮಳಿಗೆ ’ರುಪೀ ಮಾಲ್’ ಸೆಪ್ಟೆಂಬರ್ 13ರಂದು ಅಧಿಕೃತವಾಗಿ ಆರಂಭಗೊಳ್ಳಲಿದೆ. ಕ್ರಿಕೆಟ್ ಆಟಗಾರ ಹಾಗೂ ನಟ ಎಸ್. ಶ್ರೀಶಾಂತ್ ರುಪೀ ಮಾಲ್ ಉದ್ಘಾಟನೆಗೈಯಲಿದ್ದಾರೆ.

ಬೈಂದೂರು ಶಾಸಕರಾದ ಬಿ. ಎಂ. ಸುಕುಮಾರ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟನೆಗೈಯಲಿದ್ದಾರೆ. ಬೈಂದೂರು ಪ್ಯಾಲೇಸ್‌ನ ಮಾದರಿ ಫ್ಲಾಟ್‌ನ್ನು ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರು ಉದ್ಘಾಟಿಸಲಿದಾರೆ. ಕಿಡ್ಸ್ ಝೋನ್‌ನ್ನು ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೂಕಾಂಬು ದೇವಾಡಿಗ ಅವರು ಉದ್ಘಾಟಿಸಲಿದ್ದಾರೆ. ಫ್ಯಾಶನ್ ಸ್ಟೋರನ್ನು ಮಿಸ್ ಸೌತ್ ಇಂಡಿಯಾ 2019 ನಿಕಿತಾ ಥೋಮಸ್ ಅವರು ಉದ್ಘಾಟಿಸಲಿದ್ದಾರೆ.

50,000 ಸ್ವ್ಯಾರ್ ಫೀಟ್ ವಿಸ್ತೀರ್ಣದ ಮಾಲ್‌ನ ಎರಡನೇ ಮಳಿಗೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಕರ್ಯಗಳೊಂದಿಗೆ ಕಿಡ್ಸ್ ಝೋನ್ ಆರಂಭಗೊಳ್ಳಲಿದ್ದು ಮಕ್ಕಳಿಗಾಗಿಯೇ ಕ್ರೀಡಾ ಜಗತ್ತು ತೆರೆದುಕೊಳ್ಳಲಿದೆ. ಬೈಂದೂರು ಹಾಗೂ ಸುತ್ತಲಿನ ನಗರಗಳಲ್ಲಿ ಮೊದಲ ಭಾರಿಗೆ ಈ ಎಲ್ಲಾ ಮಕ್ಕಳ ಮನೋರಂಜನಾ ತಾಣ ಆರಂಭಗೊಳ್ಳುತ್ತಿದೆ.

ರುಪೀ ಮಾಲ್ ಹೈಪರ್ ಮಾರ್ಕೆಟ್ ಒಳಗೊಂಡಿದ್ದು ಮನೆಗೆ ಅಗತ್ಯವಾದ ಸಾಮಾಗ್ರಿಗಳು, ಫ್ಯಾನ್ಸಿ ಸ್ಟೋರ್, ಪೂಟ್‌ವೇರ್ ಸ್ಟೋರ್, ಗೃಹೋಪಯೋಗಿ ವಸ್ತುಗಳು, ಪ್ರಿಮಿಯಂ ವಾಚ್ ಶೋರೂಮ್, ಶೋಕೇಸ್ ಗಿಫ್ಟ್ ಐಟಮ್ ಮೊದಲಾದವುಗಳು ಉದ್ಘಾಟನೆಯ ದಿನದಿಂದಲೇ ಕಾರ್ಯಾರಂಭಗೊಳ್ಳಲಿದೆ. ರುಪೀ ಮಾಲ್ ಉದ್ಘಾಟನೆಯ ಅಂಗವಾಗಿ ಗ್ರಾಹಕರಿಗೆ ೫೦% ತನಕ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಮಾಲ್‌ನಲ್ಲಿ ಆರಂಭಗೊಳ್ಳಲಿರುವ ಬೃಹತ್ ಫ್ಯಾಶನ್ ಸ್ಟೋರ್‌ನಲ್ಲಿ ಮೆಟ್ರೋ ನಗರಗಳ ಎಲ್ಲಾ ಫ್ಯಾಶನ್‌ನ ಬಟ್ಟೆಗಳು ಲಭ್ಯವಿರಲಿದೆ. ಮದುವೆ ಬಟ್ಟೆಗಳ ವಿಭಾಗದಲ್ಲಿ ವಿವಿಧ ನಮೂನೆಯ ಮದುವೆ ಬಟ್ಟೆಗಳು ಕೈಗೆಟಕುವ ದರದಲ್ಲಿ ಲಭ್ಯವಿರಲಿದೆ.

Leave a Reply

Your email address will not be published. Required fields are marked *

20 + 13 =