ಡಿ.20: ರಾಣಿಬಲೆ ಮೀನುಗಾರರಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಬೆಳ್ಳಿರಥ ಸಮರ್ಪಣೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪುಂದ ರಾಣಿಬಲೆ ಮೀನುಗಾರರು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಬೆಳ್ಳಿರಥ ಸಮರ್ಪಿಸಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಡಿ. 20ರ ಬುಧವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸನ್ನಿಧಿಯಲ್ಲಿ ಬೆಳ್ಳಿರಥ ಸಮರ್ಪಣೆ ಮಾಡಲಿದ್ದಾರೆ ಎಂದು ರಾಣಿಬಲೆ ಮೀನುಗಾರರ ಒಕ್ಕೂಟ ರಿ. ಉಪ್ಪುಂದ ಇದರ ಅಧ್ಯಕ್ಷ ವೆಂಕಟರಮಣ ಖಾರ್ವಿ ತಿಳಿಸಿದರು.

Call us

Call us

ಅವರು ಉಪ್ಪುಂದದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮೂರು ವರ್ಷಗಳ ಹಿಂದೆ ಮತ್ಸ್ಯಕ್ಷಾಮ ಉಂಟಾದ ಸಂದರ್ಭ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ರಾಣಿಬಲೆ ಮೀನುಗಾರರು ಬೆಳ್ಳಿ ರಥ ಸಮರ್ಪಿಸುವ ಹರಕೆ ಹೊತ್ತಿದ್ದರು. ಅದರಂತೆ ಪ್ರತಿವರ್ಷ ಬಂದ ಲಾಭದಲ್ಲಿ ಶೇ.1ರಷ್ಟು ಮೊತ್ತವನ್ನು ಬೆಳ್ಳಿರಥ ನಿರ್ಮಾಣಕ್ಕಾಗಿ ಮೀಸಲಿಟ್ಟು ಬೆಳ್ಳಿರಥ ನಿರ್ಮಾಣ ಮಾಡಲಾಗಿದೆ ಎಂದರು. ಸುಮಾರು ೪೫ಲಕ್ಷ ವೆಚ್ಚದಲ್ಲಿ ರಥಶಿಲ್ಪಿ ಬಿ. ಲಕ್ಷ್ಮೀನಾರಾಯಣ ಆಚಾರ್ಯ ಅವರಿಂದ ಬೆಳ್ಳಿರಥ ನಿರ್ಮಾಣಗೊಂಡಿದೆ. ಬೆಳ್ಳಿರಥ ಸಮರ್ಪಣಾ ಕಾರ್ಯಕ್ರಮಕ್ಕೆ ಸುಮಾರು ಹದಿನೈದು ಸಾವಿರ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ನೂತನ ಬೆಳ್ಳಿರಥ ಸಮರ್ಪಣಾ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಡಿ.15ರಂದು ಉಪ್ಪುಂದ ಅಂಬಾಗಿಲಿನಿಂದ ನೂತನ ಬೆಳ್ಳಿರಥವನ್ನು ಬೃಹತ್ ಪುರಮೆರವಣಿಗೆಯ ಮೂಲಕ ದುರ್ಗಾಪರಮೇಶ್ವರ ದೇವಳಕ್ಕೆ ಕೊಂಡೊಯ್ಯಲಾಗುವುದು. ಡಿ.19ರಂದು ವಿವಿಧ ಪೂಜೆ, ಹೋಮ, ಬಲಿ ಪ್ರಕ್ರಿಯೆಗಳು ನಡೆಯಲಿವೆ. ಡಿ.20ರ ಬೆಳಿಗ್ಗೆ 11ಗಂಟೆಗೆ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗುವುದು. ಅವರು ಬೆಳ್ಳಿರಥ ಸಮರ್ಪಿಸಿದ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ, ಬಳಿಕ ಮಹಾ ಅನ್ನಸಂತರ್ಪಣೆ ಜರುಗಲಿದೆ ಎಂದವರು ವಿವರಿಸಿದರು.

Call us

Call us

ಪತ್ರಿಕಾಗೋಷ್ಠಿಯಲ್ಲಿ ರಾಣಿಬಲೆ ಮೀನುಗಾರರ ಒಕ್ಕೂಟದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಸಲಹೆಗಾರರಾದ ಎಸ್. ಮದನಕುಮಾರ್, ಆಂತರಿಕ ಲೆಕ್ಕಪರಿಶೋಧಕರಾದ ಶ್ರೀಧರ ಉಪ್ಪುಂದ, ಕಾರ್ಯದರ್ಶಿ ಡಿ. ಮೋಹನ ಖಾರ್ವಿ, ಕೋಶಾಧಿಕಾರಿ ಜಿ. ಮಾಧವ ಖಾರ್ವಿ, ಜೊತೆ ಕಾರ್ಯದರ್ಶಿ ಮಂಜುನಾಥ ಜಿ. ಖಾರ್ವಿ, ನಿರ್ದೇಶಕರಾದ ಎ. ಶ್ರೀನಿವಾಸ ಖಾರ್ವಿ, ಡಿ. ಶುಕ್ರ ಖಾರ್ವಿ, ರಮೇಶ್ ಖಾರ್ವಿ, ಪದ್ಮನಾಭ ಖಾರ್ವಿ, ರಾಜರಾಮ ಖಾರ್ವಿ, ನಾಗೇಶ್ ಖಾರ್ವಿ ಹಾಗೂ ಇತತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

8 − three =