ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ಟಾರ್ ಸುವರ್ಣ ಕನ್ನಡದ ಖಾಸಗಿ ವಾಹಿನಿ ನಡೆಸುವ ಸುವರ್ಣ ಸೂಪರ್ ಸ್ಟಾರ್ ಎರಡನೇ ಸೀಸನ್ ಮೊದಲ ಎಪಿಸೋಡ್‌ನಲ್ಲಿ ಕುಂದಾಪುರದವರಾದ ದೀಪಿಕಾ ರಾಘವೇಂದ್ರ ಅವರು ವಿನ್ನರ್ ಆಗಿದ್ದಾರೆ.
ಅಗಸ್ಟ್ 23ರ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೂವರು ಸ್ವರ್ಧಿಗಳು ಕೂಡ ಕುಂದಾಪುರದವರು ಎಂಬುದು ವಿಶೇಷವಾಗಿತ್ತು. ವಿಜೇತರಾದ ದೀಪಿಕಾ ಅವರು ಕುಂದಾಪುರ ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದಾರೆ. ಉಳಿದಂತೆ ಸೌಮ್ಯಾ ಗೃಹಿಣಿ ಹಾಗೂ ಆನ್‌ಲೈನ್ ವ್ಯವಹಾರ ಮಾಡಿಕೊಂಡಿದ್ದರೆ, ರಂಜಿತಾ ಸಾಫ್ಟವೇರ್ ಕಂಪೆನಿಯಲ್ಲಿ ಹೆಚ್‌ಆರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂವರು ಒಂದೇ ದಿನ ವಿವಿಧ ಟಾಸ್ಕ್‌ಗಳ ಮೂಲಕ ಎದುರಾಳಿಗಳಾಗಿದ್ದರು.
ನಟಿ ಶಾಲಿನಿ ಈ ಕಾರ್ಯಕ್ರಮ ನಿರೂಪಿಸುತ್ತಿದ್ದು ಮಹಿಳೆಯರೇ ಭಾಗವಹಿಸುವ ಕಾರ್ಯಕ್ರಮ ಇದಾಗಿದೆ. ಅಗಸ್ಟ್ 23ರ ಸಂಜೆ ಈ ಕಾರ್ಯಕ್ರಮ ವಾಹಿನಿಯಲ್ಲಿ ಪ್ರಸಾರವಾಗಿದ್ದು, ಅಗಸ್ಟ್ 10ರಂದು ಶೂಟಿಂಗ್ ನಡೆದಿತ್ತು.




