ಯಕ್ಷಗಾನ ಪ್ರದರ್ಶನಕ್ಕೆ ಪರವಾನಿಗೆ ನೀಡದಿದ್ದರೆ ಕಾನೂನು ಸಮರಕ್ಕೂ ಸಿದ್ಧ: ಜಯಪ್ರಕಾಶ್ ಹೆಗ್ಡೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅರ್ಜಿ ಸಮಿತಿ ಮುಂದೆ ಯಕ್ಷಗಾನ ಪ್ರದರ್ಶನದ ತನಿಕೆಯ ಕುರಿತಾಗಿ ಅರ್ಜಿ ಇದೆ ಎನ್ನೋವ ಕಾರಣಕ್ಕೆ ನೆಹರು ಮೈದಾನದಲ್ಲಿ ಯಕ್ಷಗಾನಕ್ಕೆ ಅವಕಾಶ ಇಲ್ಲಾ ಎನ್ನೋದು ಸರಿಯಲ್ಲ. ಇಲ್ಲದ ಸಮಸ್ಯೆ ಸೃಷ್ಟಿಮಾಡಿ ಪರಿಹಾರಕ್ಕೆ ಪ್ರಯತ್ನ ಮಾಡಬೇಕಾದ ಸ್ಥಿತಿ ಯಕ್ಷಗಾನಕ್ಕೆ ಬಂದಿದ್ದು ದುರಂತ ಎಂದು ಮಾಜಿ ಸಂಸದ ಹಾಗೂ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ವಿಷಾದ ವ್ಯಕ್ತ ಪಡಿಸಿದರು.

Click Here

Call us

Call us

‘ಯಕ್ಷಗಾನ ಕಲೆ ಉಳಿವಿಗಾಗಿ ಕರೆ, ಯಕ್ಷಗಾನ ಆಟಕ್ಕಿಲ್ಲದ ನೆಹರು ಮೈದಾನ’ ಬಗ್ಗೆ ಕುಂದಾಪುರ ಪದವಿಪೂರ್ವ ಕಾಲೇಜ್ ಕಲಾ ಮಂದಿರದಲ್ಲಿ ಕಲಾವಿರರ ಹಾಗೂ ಯಕ್ಷಗಾನ ಅಭಿಮಾನಿಗಳ ಸಮಾವೇಶ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಹರು ಮೈದಾನದಲ್ಲಿ ಕಾನೂನು ಮುರಿಯಲು ಯಕ್ಷಗಾನ ಪ್ರದರ್ಶವೇ ಆಗಬೇಕಿಂದಿಲ್ಲ. ಖಾಲಿ ಮೈದಾನದಲ್ಲೂ ಬೇಕಾದರೂ ಕೂಡಾ ಅನಾಹುತಗಳು ನಡೆಯುತ್ತದೆ. ಕಾನೂನು ಪಾಲನೆ ವ್ಯವಸ್ಥೆ ಮಾಡಿಕೊಡಬೇಕು. ಮಂತ್ರಿ, ಮಹೋದಯರ ರಕ್ಷಣೆಗೆ ಪೋಲಿಸರ ನಿಯುಕ್ತಿ ಮಾಡಿದ ಹಾಗೆ ನೆಹರ ಮೈದಾನದಲ್ಲಿ ಯಕ್ಷಗನಾ ಪ್ರದರ್ಶನ ಕಾನೂನು ವ್ಯವಸ್ಥೆ ತಾಲೂಕು ಅಡಳಿತ ಜವಾಬ್ದಾರಿ ಜೊತೆ ಸ್ಚಚ್ಛತಗೆ ಮೇಳದಗಳಿಂದ ಹಣ ಪಡೆದು ಕ್ಲೀನ್ ಮಾಡುವ ವ್ಯವಸ್ಥೆ ಮಾಡಿಕೊಳ್ಳಲಿ. ಅದನ್ನು ಬಿಟ್ಟು ಯಕ್ಷಗಾನ ಪ್ರದರ್ಶನ ನಿರಾಕರಿಸಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

Click here

Click Here

Call us

Visit Now

ಯಕ್ಷಗಾನ ಶಿಸುತ್ತಿರುವ ಕಾಲಘಟ್ಟದಲ್ಲಿ ಡಾ.ಶಿವರಾಮ ಕಾರಂತರು ಯಕ್ಷಗಾನಕ್ಕೆ ಹೊಸ ದಿಕ್ಕಿ ದಿಶೆ ತೋರಿಸಿ, ಆಸಕ್ತಿ ಮೂಡಿಸಿದ್ದರಿಂದ ಯಕ್ಷಗಾನ ಮತ್ತೆ ವಿಜ್ರಂಭಿಸುತ್ತಿದ್ದು, ನೆಹರು ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಹಿಂದೇಟು ಹಾಕುತ್ತಿರುವುದು ಮತ್ತೆ ಯಕ್ಷಗಾನ ಕಲೆ ಹಿನ್ನೆಡೆ ಆಗುತ್ತಿದೆ ಎಂದು ಅವರು ವಿಶ್ಲೇಶಿಸಿದರು.

ಕಲೆ ಕ್ರೀಡೆ ವಿದ್ಯಾಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿದ್ದು, ಯಕ್ಷಗಾನ ಆಸಕ್ತ ಮಕ್ಕಳಿದ್ದು ಅವರಿಗೆ ಯಕ್ಷಗಾನ ಆಸಕ್ತಿ ಮೂಡಿಸುವುದರಿಂದ ಯೋಗ್ಯ ಕಲಾವಿದರ ನಿರ್ಮಾಣ ಸಾಧ್ಯವಿದ್ದು, ವಿದ್ಯಾಭ್ಯಾಸ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಅರ್ಜಿ ಸಮಿತಿಯಲ್ಲಿ ಅರ್ಜಿ ಇದ್ದ ಮಾತ್ರಕ್ಕೆ ಯಕ್ಷಗಾನ ಪದರ್ಶನಕ್ಕೆ ನಿರಾಕರಣೆ ಮಾಡಲು ಸಾಧ್ಯವಿಲ್ಲ. ವಿವರಣೆ ನೀಡಲು ವಿಳಂಬಮಾಡಿದ ತಹಸೀಲ್ದಾರ್ ಅಪರಾಧಿಯಾಗಿತ್ತಾರೆ. ಯಕ್ಷಗಾನ ಅವಕಾಶ ನೀಡದಿದ್ದರೆ ಕಾನೂನು ಹೋರಾಟಕ್ಕೂ ಸಿದ್ದ ಎಂದು ಅವರು ಎಚ್ಚರಿಸಿದರು.

ಸದನ ಸಮಿತಿಗೆ ಬಂದ ಅರ್ಜಿ ಬಗ್ಗೆ ವರದಿ ತಯಾರಿಸಿ, ಸರಕಾರಕ್ಕೆ ನೀಡಿದ ನಂತರ ಸರಕಾರ ಯಕ್ಷಗಾನ ಪ್ರದರ್ಶನಕ್ಕೆ ತಡೆ ಹಾಕಿದ್ದರೆ, ತಾಲೂಕು ಆಡಳಿತ ಪರಾವಾನಿಗೆ ನೀಡದಿದ್ದರೆ ಒಪ್ಪಬಹುದಿತ್ತು. ಆರ್ಜಿ ಸಮಿತಿಯಲ್ಲಿ ಎಷ್ಟು ಅರ್ಜಿ ಬಂದಿದೆ, ಎಷ್ಟು ವಿಲೇವಾರಿ ಆಗಿದೆ ಹಾಗೂ ಎಷ್ಟೋ ಭ್ರಷ್ಟಾಚಾರ ಸದನ ಸಮಿತಿ ಮುಂದೆ ಧೂಳು ತಿನ್ನುತ್ತಿದ್ದರೂ, ನೆಹರೂ ಮೈದಾನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಮಾತ್ರ ಅನ್ವಯಿಸುವುದು ಹೇಗೆ ಎಂದು ಅವರು ಪ್ರಶ್ನಿಸಿದರು.

Call us

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸದನ ಸಮಿತಿ ಸದಸ್ಯರಿದ್ದು, ಅರ್ಜಿ ವಿಲೇವಾರಿ ಮಾಡುವ ಬಗ್ಗೆ ಚರ್ಚಿಸಿದ್ದು, ಅವರು ಸದನದಲ್ಲಿ ಚರ್ಚಿಸಿ ಅರ್ಜಿ ಇತ್ಯಾರ್ಥ ಮಾಡುತ್ತಾರೆ. ನೆಹರು ಮೈದಾನ ಯಕ್ಷಗಾನ ಪ್ರದರ್ಶನ ಅಡ್ಡಿ ನಿವಾರಣೆ ಹಿನ್ನೆಲೆಯಲ್ಲಿ ಇಂದಿನಿಂದಲೇ ಅಕಾಡಕ್ಕಿಳಿದು, ಹೋರಾಟ ಮಾಡಲು ಸಿದ್ದ ಎಂದು ಅವರು, ಕುಂದಗನ್ನಡ ಅಧ್ಯಯನ ಪೀಠ ಮಂಗಳೂರಿನಲ್ಲಿ ಸ್ಥಾಪಿಸುವ ಬಗ್ಗೆ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ, ಕುಂದಾಪುರ ಪುರಸಭೆ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪತ್ರಕರ್ತ ಕೆ.ಸಿ.ರಾಜೇಶ್, ಯಕ್ಷಗಾನ ವಿಮರ್ಷಕ ಎಸ್.ವಿ.ಉದಯ ಕುಮಾರ್ ಶೆಟ್ಟಿ, ಯಕ್ಷಾಗನ ಅಕಾಡೆಮಿ ಸದಸ್ಯ ಪಳ್ಳಿ ಕಿಶನ್ ಹೆಗ್ಡೆ, ಪೆರ್ಡೂರ ಮೇಳ ಯಜಮನಾನ ವೈ.ಕರುಣಾಕರ ಶೆಟ್ಟಿ ತಮ್ಮ ಅನಿಸಿಕೆ ಹಂಚಿಕೊಂಡರು. ಯಕ್ಷಗಾನ ಕಲಾಭಿಮಾನಿ ರಾಮಕೃಷ್ಣ ಹೇರ್ಳೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಕಲಾರಂಗ ಕುಂದಾಪುರ ಅಧ್ಯಕ್ಷ ಬಿ.ಕಿಶೋರ್ ಕುಮಾರ್ ವಂದಿಸಿದರು.

One thought on “ಯಕ್ಷಗಾನ ಪ್ರದರ್ಶನಕ್ಕೆ ಪರವಾನಿಗೆ ನೀಡದಿದ್ದರೆ ಕಾನೂನು ಸಮರಕ್ಕೂ ಸಿದ್ಧ: ಜಯಪ್ರಕಾಶ್ ಹೆಗ್ಡೆ

Leave a Reply

Your email address will not be published. Required fields are marked *

19 − 19 =