ಉಡುಪಿ ಜಿಲ್ಲೆ: ಗೇರು ಬೀಜ ಸಂಸ್ಕರಣಾ ಘಟಕ ಆರಂಭಕ್ಕೆ ಷರತ್ತು ಬದ್ದ ಅನುಮತಿ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೊರೋನಾ ವೈರಾಣು ಸಾಂಕ್ರಾಮಿಕವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ಕೆಲವೊಂದು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ನಡುವೆ ಆಹಾರ ಸಂಸ್ಕರಣೆ ಘಟಕಗಳಿಗೆ ಕಾರ್ಯಾಚರಣೆ ಮಾಡಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಈಗ ಮಾರುಕಟ್ಟೆಗೆ ಆಗಮಿಸುತ್ತಿರುವ ಸ್ಥಳೀಯ ಗೇರು ಬೀಜ ಕೃಷಿಕರಿಗೆ ಉತ್ತಮ ಧಾರಣೆ ಒಗದಿಸಿಕೊಟ್ಟು, ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಗೇರು ಬೀಜ ಸಂಸ್ಕರಣಾ ಘಟಕಗಳನ್ನು ಕೆಲವೊಂದು ಷರತ್ತು ವಿಧಿಸಿ ಕಾರ್ಯಚರಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅನುಮತಿ ನೀಡಿದ್ದಾರೆ.

Call us

Call us

ಸಂಸ್ಕರಣಾ ಘಟಕದ ಒಟ್ಟು ಕಾರ್ಮಿಕರ 25% ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡು. ಸಂಸ್ಕರಣೆಯನ್ನು ಆರಂಭಿಸುವುದು, ಘಟಕ ಆರಂಬಿಸುವ ಮುನ್ನ ಕಾರ್ಮಿಕರ ಆರೋಗ್ಯ ಪರೀಕ್ಷೆಯನ್ನು ಸ್ಥಳೀಯ ಸರ್ಕಾರಿ ಆರೋಗ್ಯ ಕೇಂದ್ರದ ವತಿಯಿಂದ ಕೈಗೊಳ್ಳುವುದು, ಆರೋಗ್ಯಕರ ಕಾಮಿಕರನ್ನು ಮಾತ್ರ ಕೆಲಸಕ್ಕೆ ನಿಯೋಜಿಸುವುದು. ಸಂಸ್ಕರಣಾ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದಯಕೊಳ್ಳುವಂತೆ ನೋಡಿಕೊಳ್ಳುವುದು, ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಸ್ಯಾನಿಟೈಜರ್, ಮಾಸ್ಕ್ ಹಾಗೂ ಗ್ಲೌಸ್ ಗಳನ್ನು ಕಡ್ಡಾಯವಾಗಿ ಒದಗಿಸಬೇಕು, ಸ್ಥಳೀಯ ಕಾರ್ಮಿಕರನ್ನು ಹೆಚ್ಚಾಗಿ ನಿಯೋಜಿಸುವುದು, ಕಾರ್ಮಿಕರನ್ನು ಕರೆತರಲು ಮತ್ತು ವಾಪಸು ಬಿಡಲು ಯಾವುದೇ ಸಾರ್ವಜನಿಕ ವಾಹನ ಬಳಸುವಂತಿಲ್ಲ, ಕಾರ್ಖಾನೆ ಹಾಗೂ ಅವರ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು, ಗೇರು ಬೀಜಗಳನ್ನು ಸ್ಥಳೀಯ ರೈತರಿಂದ ಉತ್ತಮ ಧಾರಣೆ ನೀಡಿ ಖರೀದಿಸುವುದು, ಕೆಲಸ ನಿರ್ವಹಿಸುವ ಸಮಯದಲ್ಲಿ ಯಾವುದೇ ಕಾರ್ಮಿಕರು ಸಂಸ್ಥೆಯ ಆವರಣದಿಂದ ಹೊರಹೋಗುವಂತಿಲ್ಲ ಹಾಗೂ ಸಕ್ಷಮ ಪ್ರಾಧಿಕಾರದಿಂದ ಕಾಲಕಾಲಕ್ಕೆ ನೀಡುವ ಮಾರ್ಗಸೂಚಿಗಳಿಗೆ ಬದ್ದವಾಗಿರಬೇಕು ಎಂಬ ಷರತ್ತುಗಳೊಂದಿಗೆ ಗೇರು ಬೀಜ ಸಂಸ್ಕರಣಾ ಘಟಕಗಳು ಕಾರ್ಯಾಚರಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಅನುಮತಿ ನೀಡಿದ್ದಾರೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

9 + fifteen =