ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅಭಿಮಾನಿ ಬಳಗದಿಂದ ಶಿರೂರು ಲಾಕ್‌ಡೌನ್ ಚೆಕ್‌ಪೋಸ್ಟ್ ಮೂಲಕ ಹೊರರಾಜ್ಯಗಳಿಂದ ಜಿಲ್ಲೆಗೆ ಹಿಂತಿರುಗುತ್ತಿರುವವರಿಗೆ ಮಧ್ಯಾಹ್ನದ ಊಟ ವಿತರಿಸುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಶನಿವಾರ ಚಾಲನೆ ನೀಡಿದರು.
ಮುಂಬೈಯಂತ ದೂರದ ಸ್ಥಳದಿಂದ ದಣಿದು ಬರುವ ನಮ್ಮ ಜಿಲ್ಲೆಯ ಪ್ರಯಾಣಿಕರು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯಂತಹ ಪ್ರಕ್ರಿಯೆ ನಡೆಯುವ ವರೆಗೆ ಕಾಯಬೇಕಾಗುತ್ತದೆ. ಇಲ್ಲಿ ಯಾವುದೇ ಊಟ, ಉಪಹಾರ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಬರುವ ಎಲ್ಲರಿಗೆ ಮಧ್ಯಾಹ್ನದ ಊಟ ಬಡಿಸಲಾಗುವುದು. ಇದು ಚೆಕ್‌ಪೋಸ್ಟ್ ಕಾರ್ಯಾಚರಿಸುವ ವರೆಗೂ ಮುಂದುವರಿಯುವುದು ಎಂದರು.
ಕೆಪಿಸಿಸಿ ಸದಸ್ಯರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮದನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ.ಮೋಹನ್ ಪೂಜಾರಿ, ವಾಸುದೇವ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಉಪ್ಪುಂದ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ತಬ್ರೇಜ್ ನಾಗೂರು, ಹಸನ್ ಮಾವಡ್, ಪ್ರಿನ್ಸ್ ತೂದಳ್ಳಿ, ಕೀರ್ತನ್ ಉಪ್ಪುಂದ ಇದ್ದರು. ಆರಂಭದ ದಿನ ಆಗಮಿಸಿದ ಸುಮಾರು 250 ಜನರಿಗೆ ಊಟ ನೀಡಲಾಯಿತು.