ಅಧಿಕಾರಿಗಳೇ, ಜನರನ್ನು ಸತಾಯಿಸದೇ ಕೆಲಸ ಮಾಡಿಕೊಡಿ : ಸಂಸದ ಬಿ. ವೈ. ರಾಘವೇಂದ್ರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಧಿಕಾರಿಗಳು ಸರಕಾರ ಹೇಳಿದಷ್ಟನ್ನು ಅಚ್ಚುಕಟ್ಟಾಗಿ ಮಾಡಿದರೂ ಸಾಕು. ಒಂದು ಹಂತದ ಪ್ರಗತಿ ಸಾಧ್ಯವಿದೆ. ಅದರ ಜೊತೆಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ನಿರ್ದಿಷ್ಟ ಗುರಿ ಇಟ್ಟುಕೊಂಡು ಕೆಲಸ ಮಾಡಿದರೆ ನಿರ್ದಿಷ್ಟ ಅವಧಿಯೊಳಗೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.

Watch Video 

ಅವರು ಬೈಂದೂರು ನಿರೀಕ್ಷಣಾ ಮಂದಿರದಲ್ಲಿ ಜರುಗಿದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿ ದೊಡ್ಡ ದೊಡ್ಡ ಯೋಜನೆಗಳ ಅನುಷ್ಠಾನವನ್ನು ಯಶಸ್ವಿಯಾಗಿ ಮಾಡುವುದರ ಜೊತೆಗೆ ಸಣ್ಣ ಯೋಜನೆಗಳ ಬಗೆಗೂ ವಿಶೇಷ ಮುತುವರ್ಜಿ ವಹಿಸುವುದು ಅಗತ್ಯ. ಸರಕಾರ ಅಧಿಕಾರಿಗಳಗೆ ಎಲ್ಲಾ ರೀತಿಯ ಸವಲತ್ತು ಮಾಡಿಕೊಟ್ಟಿದೆ. ಅದಕ್ಕೆ ಸರಿಯಾಗಿ ಸರಕಾರಿ ಕೆಲಸಕ್ಕಾಗಿ ಬರುವ ಜನರನ್ನು ಹೆಚ್ಚು ಸತಾಯಿಸದೇ ಪ್ರತಿಯೊಬ್ಬ ಫಲಾನುಭವಿಗೂ ಯೋಜನೆ ಯಶಸ್ವಿಯಾಗಿ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಿ. ದೇವರು ನಮಗೆ ಒಳ್ಳೆಯನ್ನೇ ಮಾಡಿದ್ದಾನೆ. ಭ್ರಷ್ಟಾಚಾರ ರಹಿತವಾದ ಆಡಳಿತಕ್ಕೆ ಕಡಿವಾಣ ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಅಧಿಕಾರಿಗಳ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ, ನಿರಾವರಿ ಯೋಜನೆ ಅನುಷ್ಠಾನ, ಆಯುಷ್ಮಾನ್ ಭಾರತ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಎರಡು ಗ್ರಾಮಗಳಿಗೆ ಸ್ಮಶಾನ, ೯೪ಸಿ ಹಕ್ಕುಪತ್ರ, ಬಂದರು ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ತಾ.ಪಂ ಸದಸ್ಯರುಗಳಾದ ಮಾಲಿನಿ ಕೆ., ಸುಜಾತ ದೇವಾಡಿಗ, ಕರಣ್ ಪೂಜಾರಿ, ಬೈಂದೂರು ತಹಶಿಲ್ದಾರ್ ಬಿ.ಪಿ ಪೂಜಾರ್, ಡಿವೈಎಸ್‌ಪಿ ಬಿಪಿ ದಿನೇಶ್ ಕುಮಾರ್, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ದೀಪಕ್‌ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

10 − seven =