ಮೇ.1ಕ್ಕೆ ರಾಷ್ಟ್ರಮಟ್ಟದ ಡಬಲ್ ವಿಕೆಟ್ ಕ್ರಿಕೆಟ್

Call us

ಕುಂದಾಪುರ: ಇಲ್ಲಿನ ಟೋರ್ಪಡೋಸ್ ಸ್ಟೋರ್ಟ್ ಕ್ಲಬ್ ಆಶ್ರಯದಲ್ಲಿ ಮೂರು ದಿನಗಳ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಡಬಲ್ ವಿಕೆಟ್ ಕ್ರಿಕೆಟ್ ಪಂದ್ಯಾಂಟ ನಗರದ ಮಧ್ಯಭಾಗದಲ್ಲಿರುವ ಗಾಂಧಿಮೈದಾನದಲ್ಲಿ ನಡೆಯಲಿದೆ.

Call us

ಈ ಬಗ್ಗೆ ಕುಂದಾಪುರದ ಪ್ರೆಸ್ ಕ್ಲಬ್ ನಲ್ಲಿ ಟೋರ್ಪೊಡೋಸ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಮಾತನಾಡಿ ಕುಂದಾಪುರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮೇ1ರಿಂದ 3ನೇ ತಾರೀಕಿನ ತನಕ ಡಬಲ್ ವಿಕೆಟ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗುತ್ತಿದೆ. ಅತ್ಯಂತ ರೋಮಾಂಚಕವಾದ ಕ್ರಿಕೆಟ್ ಪ್ರಕಾರವಾದ ಡಬಲ್ ವಿಕೆಟ್ ಎಂಬುದು ಕ್ರಿಕೆಟ್ ನ ವಿಶಿಷ್ಟ ಪ್ರಕಾರವಾಗಿದ್ದು ಇದು ಬ್ಯಾಟಿಂಗ್, ಬೌಲಿಂಗ್ ಸಾಮರ್ಥ್ಯ ಹಾಗೂ ನೈಪುಣ್ಯತೆಯನ್ನಲ್ಲದೇ ನಾಯಕತ್ವದ ಗುಣಗಳನ್ನು ಪರೀಕ್ಷಿಸುತ್ತದೆ. ಪದ್ಯಾಟದಲ್ಲಿ ದೇಶದ ನೂರಾರು ಅಪ್ರತಿಮ ಕ್ರಿಕೆಟಿಗರ ಜೋಡಿಗಳು ಭಾಗವಹಿಸಲಿದೆ ಎಂದರು.

Double wicket2

Call us

ಮೂರು ದಿನಗಳ ಕಾಲ ನಡೆಯಲಿರುವ ಪದ್ಯಾಂಟದಲ್ಲಿ ಭಾಗವಹಿಸುವ ಸ್ವರ್ಧಾರ್ಥಿಗಳಿಗೆ ವಸತಿ, ಉಟ ಹಾಗೂ ಸಮವಸ್ತ್ರದ ವ್ಯವಸ್ಥೆಯನ್ನು ಮಾಡಲಾಗಿದೆ. ಎಪ್ರಿಲ್ 15 ತಂಡವನ್ನು ನೊಂದಾಯಿಸಲು ಕೊನೆಯ ದಿನವಾಗಿದ್ದು ನೋದಣಿ ಶುಲ್ಕ ಆರು ಸಾವಿರಕ್ಕೆ ನಿಗದಿಗೊಳಿಸಲಾಗಿದೆ. ಪಂದ್ಯದಲ್ಲಿ ಪ್ರಥಮ ಬಹುಮಾನವಾಗಿ 1,11,111ರೂ ಹಾಗೂ ಟೋರ್ಪಡೋಸ್ ಟ್ರೋಪಿ ಸಿಗಲಿದೆ. ಡಬಲ್ ವಿಕೆಟ್ ನಲ್ಲಿ ಫಿಲ್ಡರ್ ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು ಪ್ರತಿ ಪಂದ್ಯಾಟದಲ್ಲೂ ಪಂದ್ಯ ಶೇಷ್ಠ, 5 ಉತ್ತಮ ಆಟಗಾರರು ಮುಂತಾದ ಬಹುಮಾನಗಳಿವೆ.

1980ರಲ್ಲಿ ಹುಟ್ಟಿಕೊಂಡ ಟೋರ್ಪಡೋಸ್ ಕ್ರಿಕೆಟ್ ಕ್ಲಬ್ ಮುಂದೆ ಟೋರ್ಪಡೋಸ್ ಸ್ಟೋರ್ಟ್ ಕ್ಲಬ್ ಆಗಿ ಬದಲಾವಣೆಗೊಂಡು ಪ್ರತಿವರ್ಷ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ಪ್ರೋತ್ಸಾಹಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಟೋರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ನ ಉಪಾಧ್ಯಕ್ಷ ರಮೇಶ್ ಶೆಟ್ಟಿ, ನಿರ್ದೇಶಕರಾದ ಸುದೀಪಚಂದ್ರ ಹೆಗ್ಡೆ, ರಾಜೇಶ್ ಕಾವೇರಿ, ಕಾರ್ಯದರ್ಶಿ ಕೆ. ಪಿ. ಸತೀಶ್, ಸಹಕಾರ್ಯದರ್ಶಿ ಪ್ರದೀಪ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

two × 2 =