ಕಾರಂತರು ಕರಾವಳಿಯ ಸಾಕ್ಷಿಪ್ರಜ್ಞೆಯಂತಿದ್ದರು: ರಂಗಕರ್ಮಿ ಸದಾನಂದ ಸುವರ್ಣ

Call us

ಸದಾನಂದ ಸುವರ್ಣರಿಗೆ ಡಾ| ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ.  ಚಿತ್ತಾರ 15ರ ಸಮಾರೋಪ

Call us

Call us

ಕುಂದಾಪುರ: ಕರಾವಳಿಯ ಆಗು-ಹೋಗುಗಳ ಕುರಿತು ಸದಾ ಸ್ಪಂದಿಸುತ್ತಿದ್ದ ಡಾ| ಶಿವರಾಮ ಕಾರಂತರು ಕರಾವಳಿ ಕರ್ನಾಟಕದ ಸಾಕ್ಷಿಪ್ರಜ್ಞೆಯಂತಿದ್ದರು. ಅವರು 20ನೇ ಶತಮಾನದ ಅದ್ಭುತ ವ್ಯಕ್ತಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ರಂಗಕರ್ಮಿ ಸದಾನಂದ ಸುವರ್ಣ ಅಭಿಪ್ರಾಯಪಟ್ಟರು.

ಅವರು ಕೋಟ ಕಾರಂತಭವನದಲ್ಲಿ ಕೋಟತಟ್ಟು ಗ್ರಾ.ಪಂ. ಸಾರಥ್ಯದಲ್ಲಿ, ಕಾರಂತ ಹುಟ್ಟೂರು ಪ್ರತಿಷ್ಠಾನ, ಕಾರಂತ ಟ್ರಸ್ಟ್‌ ಉಡುಪಿ ಸಹಕಾರದೊಂದಿಗೆ ಜರಗಿದ ಡಾ| ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರದಾನ – ಚಿತ್ತಾರ 15ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

Call us

Call us

ಕಾರಂತರಿಗೆ ಜ್ಞಾನದ ಹಸಿವೆಂಬುದಿತ್ತು. ಆದ್ದರಿಂದಲೇ ಅವರು ಕಾಲೇಜು ತೊರೆದು, ಕೌಟುಂಬಿಕ ಸಂಬಂಧಗಳನ್ನು ಮೀರಿ ವಿಶ್ವವೆಂಬ ಕಾಲೇಜಿಗೆ ತನ್ನನ್ನು ತಾನು ತೆರೆದುಕೊಂಡರು. ಅವರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಕೆಲಸ ಮುಂದಿನ ಪೀಳಿಗೆಗೆ ಪ್ರೇರಕ ಶಕ್ತಿಯಾಗಿ ಉಳಿದಿದೆ ಎಂದರು.

ಕೋಟದ ಕಾರಂತ ಭವನದ ಮೂಲಕ ಕಾರಂತರ ನೆನಪುಗಳು ಈ ಪರಿಸರದಲ್ಲಿ ಚಿರನೂತವಾಗಿರಿಸಿದ ಈ ಊರಿನವರ ಶ್ರಮ ಶ್ಲಾಘನೀಯ. ಆ ಮೂಲಕ ಕಾರಂತರ ಸ್ಮರಣೆಯಾಗಲಿ ಮತ್ತು ಅದು ಯುವ ಪೀಳಿಗೆಗೂ ತಲುಪುವಂತಾಗಲಿ ಎಂದು ಆಶಿಸಿದರು. (ಕುಂದಾಪ್ರ ಡಾಟ್ ಕಾಂ ವರದಿ)

[quote bgcolor=”#ffffff” arrow=”yes” align=”right”]ಕೋಟ ಗಣಿಯಲ್ಲಿ ಹುಟ್ಟಿದ ಕೋಹಿನೂರು ವಜ್ರ
ಹಿರಿಯ ಸಾಹಿತಿ ಎ.ಎಸ್‌.ಎನ್‌. ಹೆಬ್ಟಾರ್‌ ಮಾತನಾಡಿ ಶಿವರಾಮ ಕಾರಂತರು ಕೋಟವೆಂಬ ಗಣಿಯಲ್ಲಿ ಹುಟ್ಟಿದ ಕೋಹಿನೂರು ವಜ್ರ. ಈ ವಜ್ರಕ್ಕೆ ಬೆಲೆ ಕಟ್ಟಲು ಯಾರಿಂದಲೂ ಅಸಾಧ್ಯ. ಅವರಿಂದು ಜೀವಂತವಿದ್ದರೆ ಎತ್ತಿನಹೊಳೆ, ಮಹದಾಯಿ ಯೋಜನೆ ಮುಂತಾದವುಗಳ ಬಗ್ಗೆ ಅಧ್ಯಯನ ನಡೆಸಿ ಅದರ ಒಳಿತು-ಕೆಡುಕುಗಳನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದರು. ಇಂದು ನಮಗೆ ಬುದ್ಧಿ ಹೇಳುವವರು ಯಾರೂ ಇಲ್ಲದಂತಾಗಿದೆ. ಎಲ್ಲೆಡೆಯೂ ಅನಾಥ ಪ್ರಜ್ಞೆ ಕಾಡುತ್ತಿದೆ ಎಂದ ಅವರು ಕಾರಂತರೊಂದಿಗಿನ ಒಡನಾಟವನ್ನು ಮೆಲಕು ಹಾಕಿದರು.[/quote]

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಕಾರಂತರ ವ್ಯಕ್ತಿತ್ವ, ಚಿಂತನೆಗಳು ನಿರ್ದಿಷ್ಟ ಕಾಲಘಟ್ಟಕ್ಕೆ ಸೀಮಿತವಾಗದೆ ಸಹಸ್ರಮಾನಕ್ಕೂ ಶಾಶ್ವತವಾಗಿ ನೆಲೆಯಾಗಬೇಕು ಎಂದರು. ಕಾರಂತರ ಬದುಕಿನಲ್ಲಿ ಒಂದಿಷ್ಟು ಕಾಲ ಒಡನಾಡಿಯಾಗಿದ್ದ ಸದಾನಂದ ಸುವರ್ಣರಲ್ಲಿ ಕಾರಂತರ ವ್ಯಕ್ತಿತ್ವ ಒಂದಿಷ್ಟು ಮೈಗೂಡಿದೆ ಎಂದೆನಿಸುತ್ತಿದೆ. ಮತ್ತೋಮ್ಮೆ ಕಾರಂತರನ್ನು ನೋಡಿದೇನೋ ಎನ್ನುವ ಭಾವನೆಯನ್ನು ಮೂಡಿಸುತ್ತಿದೆ ಎಂದರು

 ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಎಚ್‌. ಪ್ರಮೋದ ಹಂದೆ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಯು.ಎಸ್‌. ಶೆಣೈ ಪ್ರಶಸ್ತಿ ಆಯ್ಕೆ ಕುರಿತು ತಿಳಿಸಿದರು.

ಕಾರಂತರ ಮರಿಮೊಮ್ಮಗಳು, ಯಶೋದಾ ಧಾರಾವಾಹಿಯ ನಟಿ ನೀತಾ ಅಶೋಕ, ತಾ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌, ಭರತ್‌ ಕುಮಾರ್‌ ಶೆಟ್ಟಿ, ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್‌, ಕೋಟ ಗ್ರಾ.ಪಂ. ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ದತ್ತಾನಂದ ಗಂಗೊಳ್ಳಿ, ಕಾರಂತ ರಂಗ ರಥದ ಸಂಚಾಲಕಿ ಮಾಲಿನಿ ಮಲ್ಯ, ಪಂಚಾಯತ್‌ ಪಿಡಿಒ ಪಾರ್ವತಿ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ ಮೊದಲಾದವರು ಉಪಸ್ಥಿತರಿದ್ದರು.

ಸತೀಶ ಕುಮಾರ್‌ ವಡ್ಡರ್ಸೆ, ಪರಿಪೂರ್ಣ ಕಾರ್ಯಕ್ರಮ ನಿರೂಪಿಸಿದರು. ಸುಜಯೀಂದ್ರ ಹಂದೆ ಸಮ್ಮಾನಿತರನ್ನು ಪರಿಚಯಿಸಿದರು. ಮೀರಾ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಕಾರಂತ ಹುಟ್ಟೂರು ಪ್ರಶಸ್ತಿಯನ್ನು ಭವ್ಯ ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿರಿಸಿ ಹೊತ್ತು ತರಲಾಯಿತು.

Karantha theme parak Karantha huttura prashasti (16)Karantha theme parak Karantha huttura prashasti (24) Karantha theme parak Karantha huttura prashasti (29) Karantha theme parak Karantha huttura prashasti (12)Karantha theme parak Karantha huttura prashasti (3) Karantha theme parak Karantha huttura prashasti (4) Karantha theme parak Karantha huttura prashasti (5) Karantha theme parak Karantha huttura prashasti (6) Karantha theme parak Karantha huttura prashasti (7) Karantha theme parak Karantha huttura prashasti (8) Karantha theme parak Karantha huttura prashasti (10) Karantha theme parak Karantha huttura prashasti (11)Karantha theme parak Karantha huttura prashasti (13) Karantha theme parak Karantha huttura prashasti (14) Karantha theme parak Karantha huttura prashasti (17) Karantha theme parak Karantha huttura prashasti (19) Karantha theme parak Karantha huttura prashasti (20) Karantha theme parak Karantha huttura prashasti (21) Karantha theme parak Karantha huttura prashasti (25) Karantha theme parak Karantha huttura prashasti (15) Karantha theme parak Karantha huttura prashasti (23) Karantha theme parak Karantha huttura prashasti (26) Karantha theme parak Karantha huttura prashasti (27) Karantha theme parak Karantha huttura prashasti (28) Karantha theme parak Karantha huttura prashasti (30)

Leave a Reply

Your email address will not be published. Required fields are marked *

six + 1 =