ರಂಗಸ್ಥಳದ ಎದುರು ಹೆಜ್ಜೆಹಾಕಿದ ದ್ರಿತಿಲ್ ಶೆಟ್ಟಿಯ ವೀಡಿಯೋ ವೈರಲ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಲ್ಲಿ ರಂಗಸ್ಥಳದಲ್ಲಿ ಯಕ್ಷಗಾನ ಸಾಂಗವಾಗಿ ನಡೆಯುತ್ತಿದ್ದರೇ, ಎದುರಿನಲ್ಲಿ ಕುಳಿತು ನೋಡುತ್ತಿದ್ದ ಪುಟ್ಟ ಪೋರನೋರ್ವ ವೇಷಧಾರಿಯ ಹೆಜ್ಜೆ ಹಾಗೂ ಅಭಿಯನವನ್ನು ತಾನೂ ಅನುಕರಿಸಲು ಆರಂಭಿಸಿದ್ದಲ್ಲದೇ, ಸುತ್ತಮುತ್ತಲಿನ ಪರಿವೇ ಇಲ್ಲದೇ ಅಭಿನಯದಲ್ಲಿ ಮುಳುಗಿಹೋಗಿದ್ದ.

Video

ಹೌದು. ಜನ್ನಾಲಿಯಲ್ಲಿ ನಡೆಯುತ್ತಿದ್ದ ಮಾರಣಕಟ್ಟೆ ಮೇಳದ ಯಕ್ಷಗಾನದಲ್ಲಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ್ದು ನಂದ್ರೋಳ್ಳಿ ಗುಣಕರ ಶೆಟ್ಟಿ ಹಾಗೂ ಪ್ರಿಯಾಂಕ ಗುಣಕರ ಶೆಟ್ಟಿ ಅವರು ಎರಡೂವರೆ ವರ್ಷ ಪುತ್ರ ದ್ರಿತಿಲ್ ಶೆಟ್ಟಿ. ಯಾವುದೇ ಕಲಿಕೆ ಇಲ್ಲದೇ, ಆಸಕ್ತಿಯಿಂದಷ್ಟೇ ಮುದ್ದಾಗಿ ಕುಣಿಯುತಿದ್ದ ದ್ರಿತಿಲ್ ಶೆಟ್ಟಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕುಂದಾಪುರ ತಾಲೂಕಿನ ನಂದ್ರೋಳ್ಳಿಯವರಾದ ಗುಣಕರ ಶೆಟ್ಟಿ ಅವರು ಬೆಳಗಾವಿ ಲೋಕಾಪುರದಲ್ಲಿ ಶಾಂತಿಪ್ರಿಯ ಹೋಟೆಲ್ ನಡೆಸುತ್ತಿದ್ದಾರೆ. ಗುಣಕರ ಶೆಟ್ಟಿ ಹಾಗೂ ಪ್ರಿಯಾಂಕ ಶೆಟ್ಟಿ ದಂಪತಿಗಳೀರ್ವರೂ ಕಲಾಸಕ್ತರಾಗಿದ್ದು, ಮಗ ದ್ರಿತಿಲ್‌ನಲ್ಲಿಯೂ ಸುಪ್ತವಾಗಿ ಮೂಡಿಬರುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Leave a Reply

Your email address will not be published. Required fields are marked *

one × three =