ಕರೋನಾ ಭೀತಿ: ಬಗ್ವಾಡಿಗೆ ತಾತ್ಕಾಲಿಕ ಪ್ರವೇಶ ನಿಷೇಧಿಸಿದ ಗ್ರಾಮಸ್ಥರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಲ್ಲೆಡೆ ಕರೋನಾ ವೈರಸ್ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ಬೈಂದೂರು ತಾಲೂಕು ಹಕ್ಲಾಡಿ ಗ್ರಾಮದ ಬಗ್ವಾಡಿ ನಾಗರಿಕರು ಬೇರೆ ಬೇರೆ ಕಡೆಯಿಂದ ಬರುವವರಿಗೆ ತಾತ್ಕಾಲಿಕ ನಿಷೇಧ ಎಂಬ ಬೋರ್ಡು ಹಾಕಿದ್ದಾರೆ.

ವಿದೇಶದಿಂದ ಮಾತ್ರ ಕರೋನಾ ಬರುತ್ತಿಲ್ಲ. ನೀವು ಬರುತ್ತಿರುವ ಪ್ರದೇಶದಲ್ಲೂ ಕರೋನಾ ಇದೆ. ಈ ಹಿನ್ನೆಲೆಯಲ್ಲಿ ಯಾರೂ ಊರು ಪ್ರವೇಶ ಮಾಡಿ ನಮ್ಮೂರ ನೆಮ್ಮದಿ ಹಾಳು ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು, ಬಾಂಬೆ, ಗೋವಾ, ಬಾಗಿಲುಕೋಟೆ ಮುಂತಾದ ಕಡೆಯಿಂದ ಬಂದು ಊರಲ್ಲಿ ಸುಖಾಸುಮ್ಮನೆ ಅಲೆಯದೆ ಮನೆಯಲ್ಲೇ ಇರುವಂತೆಯೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

Leave a Reply

Your email address will not be published. Required fields are marked *

3 × two =