ಊಟದ ನಂತರ ಸಿಹಿ ತಿನ್ನೋದು ಆರೋಗ್ಯಕ್ಕೆ ಒಳ್ಳೇಯದಾ?

Call us

Call us

ಹೆಚ್ಚಿನವರು ಊಟ ಮಾಡಿದ ನಂತರ ಸಿಹಿ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಹೋಟೆಲ್‍ನಲ್ಲಿ ಅಥವಾ ಹೊರಗೆ ಎಲ್ಲಾದರೂ ತಿಂದರೆ, ಅಂತಿಮವಾಗಿ ಐಸ್ ಕ್ರೀಮ್, ಸಿಹಿತಿಂಡಿಗಳು ಅಥವಾ ಯಾವುದೇ ಪುಡ್ಡಿಂಗ್ ನಂತಹ ಸಿಹಿತಿಂಡಿಗಳನ್ನು ನೀಡಲಾಗುತ್ತದೆ. ಆದರೆ ಊಟ ಮಾಡಿದ ನಂತರವೇ ಸಿಹಿ ತಿಂಡಿಗಳನ್ನು ಏಕೆ ತಿನ್ನಲಾಗುತ್ತದೆ ಎಂದು ಯಾರಾದರೂ ಯೋಚಿಸಿದ್ದಾರೆಯೇ? ಈ ಬಗ್ಗೆ ಇಂದು ಒಂದಷ್ಟು ಮಾಹಿತಿ ಇಲ್ಲಿದೆ.

Call us

Call us

Call us

ನಮ್ಮ ಹಿರಿಯರು ಹಿಂದಿನಿಂದಲೂ ಮೊದಲಿಗೆ ಖಾರ ತಿನ್ನಬೇಕು, ಊಟದ ಕೊನೆಗೆ ಸಿಹಿಯನ್ನು ತಿನ್ನಬೇಕು, ಎಂದು ಪಾಯಸ ಮತ್ತಿತರ ಸಿಹಿ ಭಕ್ಷ್ಯಗಳನ್ನು ಮಾಡುತ್ತಾರೆ. ಯಾಕೆ ಕೊನೆಗೆ ಸಿಹಿ ಸೇವಿಸಬೇಕು ತಿಳಿಯೋಣ.

Call us

Call us

ವಾಸ್ತವವಾಗಿ, ಸಿಹಿ ವಸ್ತುಗಳು ಕಾರ್ಬೋಹೈಡ್ರೆಟ್‍ಗಳಿಂದ ಸಮೃದ್ಧವಾಗಿರುತ್ತವೆ, ಇದು ಜೀರ್ಣಾಂಗ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಆದ್ದರಿಂದ ಊಟ ತಿಂದ ನಂತರ ಸ್ವಲ್ಪ ಸಿಹಿ ತಿನ್ನಬೇಕು. ಸಿಹಿ ತಿಂದ ನಂತರ ಸೆರೊಟೋನಿನ್ ಹಾರ್ಮೋನ್ ಮಟ್ಟ ಹೆಚ್ಚುತ್ತದೆ. ಇದು ಮನಸ್ಸನ್ನು ಸಂತೋಷಪಡಿಸುತ್ತದೆ. ಆದ್ದರಿಂದ ಮನಸ್ಸು ಅಸಂತುಷ್ಟವಾಗಿದ್ದರೆ, ಸ್ವಲ್ಪ ಸಿಹಿ ತಿನ್ನಬೇಕು. ಅನೇಕ ಜನರು ಹೈಪೋಗ್ಲೈಸೀಮಿಯಾ ಅಂದರೆ ಕಡಿಮೆ ಸಕ್ಕರೆಯಿಂದ ಬಳಲುತ್ತಿದ್ದಾರೆ. ಆಹಾರವನ್ನು ಸೇವಿಸಿದ ನಂತರ ಸಿಹಿ. ತಿನ್ನುವುದು ಉತ್ತಮ. ಇಂತಹ ಪರಿಸ್ಥಿತಿಯಲ್ಲಿ ಊಟ ಮಾಡಿದ ನಂತರ ಸಿಹಿಯಾದದ್ದನ್ನು ತಿನ್ನಬೇಕು. ಕೊನೆಯದಾಗಿ ಸಿಹಿತಿಂಡಿಯನ್ನು ತಿನ್ನುವ ಪ್ರಯೋಜನವೆಂದರೆ ಅದು ಸಾಮಾನ್ಯವಾಗಿ ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರುವ ಸಿಹಿ ತಿಂಡಿಗಳ ಸೇವನೆ ಪ್ರಮಾಣವನ್ನು ಕಡಿತಗೊಳಿಸುತ್ತದೆ.

ಕೊನೆಯಲ್ಲಿ ಸಿಹಿ ತಿನ್ನುವುದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಆಹಾರಕ್ಕೆ ಅಗತ್ಯ ನಾರುಗಳು ಮತ್ತು ವಿಟಮಿನ್ಸ್ ಸೇರಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಹಾರ್ಮೋನುಗಳನ್ನು. ಸಮತೋಲನಗೊಳಿಸುತ್ತದೆ. ಕೊನೆಗೆ ಸಿಹಿ ತಿನ್ನುವುದರಿಂದ ಎಲ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು (ಕೆಟ್ಟ ಕೊಲೆಸ್ಟ್ರಾಲ್) ಕಡಿಮೆ ಮಾಡುತ್ತದೆ, ಚ್ಡಿಎಲ್ ಕೊಲೆಸ್ಟ್ರಾಲ್ ಮಟ್ಟವನ್ನು (ಉತ್ತಮ ಕೊಲೆಸ್ಟ್ರಾಲ್) ಸುಧಾರಿಸುತ್ತದೆ ಮತ್ತು ಖಿನ್ನತೆ-ಶಮನಕಾರಿಯಾಗಿಯೂ ಕಾರ್ಯನಿರ್ವಹಿಸುತ್ತದೆ.

ಇನ್ನು ಭಾರತದ ಹಲವು ಜನಾಂಗಗಳಲ್ಲಿ ಸಾಮಾನ್ಯವಾಗಿ ಊಟದ ಮೊದಲು ಸಿಹಿ ತಿನ್ನುತ್ತಾರೆ. ಊಟದ ಮೊದಲು ಸ್ವೀಟ್ ತಿಂದರೆ. ಏನಾಗುತ್ತದೆ? ಮೊದಲು ಮಸಾಲೆಯುಕ್ತ ಭಕ್ಷ್ಯವನ್ನು ಸೇವಿಸಿದರೆ ಆಗ ಅದು ಖಾಲಿ ಹೊಟ್ಟೆಯಲ್ಲಿ ಆಮ್ಲದೊಂದಿಗೆ ಬೆರೆಯುತ್ತದೆ ಮತ್ತು ಗ್ಯಾಸ್ಟ್ರಿಕ್, ಆಮ್ಲೀಯತೆ, ತೇಗುವಿಕೆ, ಹುಣ್ಣುಗಳ ಜೊತೆಗೆ ಹೊಟ್ಟೆಗೆ ಗಂಭೀರ ಹಾನಿ ಉಂಟುಮಾಡಬಹುದು. ಮೊದಲಿಗೆ ಸ್ವೀಟ್ ತಿಂದು ನಂತರ ಬೇರೆ ಆಹಾರ ಸೇವಿಸಿದರೆ ಆಮ್ಲದ ಸಮಸ್ಯೆ ಉಂಟಾಗುವುದಿಲ್ಲ

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

seventeen + 19 =