ತ್ಯಾಗ, ಆತ್ಮಸಂಯಮದ ಪ್ರತೀಕ ಈದ್‌ ಉಲ್‌ ಫಿತರ್‌

Click Here

Call us

Call us

ಮೌಲಾನ ವಾಹಿದುದ್ದೀನ್ ಖಾನ್ | ಕುಂದಾಪ್ರ ಡಾಟ್ ಕಾಂ ಲೇಖನ.
ಸೃಷ್ಟಿಕರ್ತನ ಸಂಪ್ರೀತಿಯನ್ನು ಆಕಾಂಕ್ಷಿಸಿ ಉದರ ಬರಿದಾಗಿಸಿದ ಮೂವತ್ತು ದಿನಗಳ ವ್ರತಾನುಷ್ಠಾನದ ಕೊನೆಯಲ್ಲೊಂದು ಸಂತೋಷದ ದಿನ ಈದುಲ್‌ ಫಿತರ್. ರಮಝಾನ್‌ನ ಅನಂತರ ರವ್ವಾಲ್‌ ತಿಂಗಳ ಶುಭ ಸೂಚನೆಯನ್ನು ಬಾಲಚಂದ್ರ ನೀಡುವನು. ‌ ಮುಸ್ಸಂಜೆಯ ಈ ಶುಭಸೂಚನೆಯನ್ನು ಮನ್ನಿಸಿ ಮಸೀದಿಗಳ ಮಿನಾರಗಳಿಂದ “ಅಲ್ಲಾಹು ಅಕ್ಬರ್‌’ (ದೇವನೇ ಶ್ರೇಷ್ಠ) ಎಂಬ ಉದ್ಘೋಷದ ಮೂಲಕ ಈದುಲ್‌ ಫಿತರ್‌ನ್ನು ಸ್ವಾಗತಿಸಲಾಗುವುದು.

Call us

Call us

Click Here

Visit Now

ಪ್ರತಿವರ್ಷ ಮುಸ್ಲಿಮರು ಎರಡು ಪ್ರಮುಖ ಹಬ್ಬಗಳನ್ನು ಆಚರಿಸುತ್ತಾರೆ. ರಂಜಾನ್ ತಕ್ಷಣದ ನಂತರದ ಈದ್-ಉಲ್- ಫಿತರ್ ಹಾಗೂ ಹಜ್ ತಿಂಗಳಲ್ಲಿ ಈದ್-ಉಲ್ ಜುದಾ. ಈದ್-ಉಲ್ ಫಿತರ್ ಎಂದರೆ ಉಪವಾಸ ಅಂತ್ಯಗೊಳಿಸುವುದು ಎಂದು ಇತರ ಹಬ್ಬಗಳಂತೆ ಈದ್ ಉಲ್ ಫಿತರ್ ನಂಬಿಕೆಯ ಒಂದು ಪ್ರಮುಖವಾದ ಚಿಹ್ನೆ. ಸಾಮಾಜಿಕ ಪದ್ಧತಿಯ ರೂಪದಲ್ಲಿ ಇಸ್ಲಾಮಿಕ್ ನಂಬಿಕೆಯನ್ನು ನೆನಪು ಮಾಡುತ್ತಾರೆ.

Click here

Click Here

Call us

Call us

ಮಾನವನ ಬದುಕನ್ನು ಎರಡು ಭಾಗಗಳಾಗಿ ಮುಸ್ಲಿಮರು ನಂಬುತ್ತಾರೆ. ಸಾವಿನ ಮುನ್ನದ ಕಾಲ ಹಾಗೂ ಸಾವಿನ ನಂತರದ ಕಾಲ. ದೈವಶಕ್ತಿಯ ಆಜ್ಞೆಗಳನ್ನು ಸಾವಿನ ಮುನ್ನ ಕಾಲದಲ್ಲಿ ಅನುಸರಿಸುವವರಿಗೆ ಸಾವಿನ ನಂತರದ ಕಾಲದಲ್ಲಿ ಪ್ರತಿಫಲ ಸಿಗುತ್ತದೆ. ಈದ್-ಉಲ್-ಫಿತರ್‌ಗೆ ಮುನ್ನ ಮುಸ್ಲಿಮರು ರಂಜಾನ್ ಮಾಸವಿಡೀ ಉಪವಾಸ ಕೈಗೊಳ್ಳುವರು. ಮುಸ್ಲಿಮರು ದೇವರ ಆಜ್ಞೆಗಳನ್ನು ಪಾಲಿಸುವ ಪ್ರಸ್ತುತ ಜಗತ್ತಿನಲ್ಲಿನ ಬದುಕಿನ ಸಂಕೇತ ಉಪವಾಸ. ಒಳ್ಳೆಯ ಕಾರಣಗಳಿಗೆ ದೇವರು ನೀಡುವ ಪ್ರತಿಫಲವನ್ನು ಈದ್-ಉಲ್- ಫಿತರ್ ಸೂಚಿಸುತ್ತದೆ. ರಂಜಾನ್ ತಿಂಗಳಲ್ಲಿ ಉಪವಾಸವೆಂದರೆ ಬರೀ ಆಹಾರ ತ್ಯಜಿಸುವುದೆಂದಲ್ಲ. ವಾಸ್ತವವಾಗಿ ಇದು, ಇಸ್ಲಾಂನಲ್ಲಿ ಅಕ್ರಮ ಎಂಬಂತಹ ಎಲ್ಲ ರೀತಿಯ ಆಚರಣೆಯ ಅನುಪಸ್ಥಿತಿಯ ಪ್ರತೀಕ, ಸಂಕೇತ. ರಂಜಾನ್ ತಿಂಗಳಲ್ಲಿ ಹಗಲಿನ ವೇಳೆ ಆಹಾರ ಮತ್ತು ನೀರು ಸೇವನೆಯಿಮದ ದೂರ ಉಳಿಯುವುದು ಮುಸ್ಲಿಮರಿಗೆ ಜವಾಬ್ದಾರಿಯುತ ಬದುಕಿನ ಬಗೆಗೆ ನೆನಪು ಮಾಡಿಕೊಡುತ್ತದೆ. ಪ್ರಸ್ತುತ ಜಗತ್ತಿನಲ್ಲಿ, ಒಂದಷ್ಟು ಒಯ್ಯುವ ಹಾಗೂ ಒಂದಷ್ಟು ಬಿಟ್ಟು ಹೋಗುವ ಅನುಪಸ್ಥಿತಿ ಜೀವನ ನಡೆಸಬೇಕೆಂಬುದನ್ನು ಅವರಿಗೆ ನೆನಪು ಮಾಡಿಕೊಡುತ್ತದೆ. ಇದು ರಂಜಾನಿನ ನಿಜವಾದ ಸ್ಫೂರ್ತಿ, ಚೇತನ, ಉತ್ಸಾಹ. ಕುಂದಾಪ್ರ ಡಾಟ್ ಕಾಂ ಲೇಖನ.

ನಂತರ ಬರುತ್ತದೆ ಈದ್-ಉಲ್- ಫಿತರ್‌ನ ಆಚರಣೆ. ಈ ಜಗತ್ತಿನಲ್ಲಿ ಜವಾಬ್ದಾರಿಯುತ ಜೀವನ ನಡೆಸಿದವರಿಗೆ ಸ್ವರ್ಗದಲ್ಲಿ ಸಂತಸ ಬದುಕಿನ ಪ್ರತಿಫಲ ನೀಡುತ್ತದೆ ಎಂಬುದನ್ನು ನೆನಪಿಸುತ್ತದೆ. ಈ ಹಬ್ಬಕ್ಕೆ ಸಾಮಾಜಿಕ ಮೆರುಗೂ ಇದೆ. ಈ ದಿನ ಮುಸ್ಲಿಮರು ಮನೆಯಿಮದ ಹೊರ ಬಂದು ಒಟ್ಟಾಗಿ ಪ್ರಾರ್ಥನೆ ಸಲ್ಲಿಸುವುದು. ನೆರೆಯವರನ್ನು ಭೇಟಿ ಮಾಡಿ ಶುಭಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಯಾವುದೇ ಅಡೆ ತಡೆ/ ನಿರ್ಭಂಧ ಇಲ್ಲದೆ ತಿನ್ನುತ್ತಾರೆ, ಕುಡಿಯುತ್ತಾರೆ. ಈ ಎಲ್ಲ ಚಟುವಟಿಕೆಗಳು ಸ್ವರ್ಗ ಜೀವನದ ಜ್ಞಾಪಿಸುತ್ತದೆ.

ಈದ್-ಉಲ್-ರ್ಫಿರ್ ಮುಸ್ಲಿಮರ ಹಬ್ಬ ಇರಬಹುದು. ಆದರೆ ಇತರರಂಗತೆ, ಮುಸ್ಲಿಮರು ಸಮಾಜದಲ್ಲಿ ಬದುಕುತ್ತಿದ್ದಾರೆ, ನೆರ ಜನಗಳ ಜತೆ, ಇದು ಈದ್-ಉಲ್- ಫಿತರ್ ಅನ್ನು ಸಾಮಾಜಿಕ ಹಬ್ಬವಾಗಿ ಪರಿವರ್ತಿಸುತ್ತದೆ. ಆದುದರಿಂದ ಮುಸ್ಲಿಮರು ತಮ್ಮ ಧರ್ಮದ ಸೋದರರನ್ನಷ್ಟೇ ಅಲ್ಲ, ಇತರೆ ಸಮುದಾಯ ನೆರೆಯವರು ಹಾಗೂ ಕಚೇರಿ ಅಥವಾ ವ್ಯಾಪಾರ ಸ್ಥಳಗಳಲ್ಲಿ ಸಹೋದ್ಯೋಗಿಗಳ ಜತೆಗೆ ಮಿಲನವಾಗುತ್ತಾರೆ. ಈದ್-ಉಲ್- ಫಿತರ್‌ನ ಈ ಸಾಮಾಜಿಕ ಅಂಶವೇ ಈದ್ ಮಿಲಾನ್ ಆಚರಣೆಗೆ ಹಾದಿ ಹಾಕಿದೆ. ಮುಸ್ಲಿಮರು ತಮ್ಮ ನೆರೆಯವರು ಹಾಗೂ ಇತರರನ್ನು ಈದ್ ಮಿಲಾನ್‌ಗೆ ಆಹ್ವಾನಿಸುತ್ತಾರೆ. ಈ ಅರ್ಥದಲ್ಲಿ ಈದ್-ಉಲ್ ಫಿತರ್ ಸಾಮಾಜಿಕ ಸೌಹಾರ್ದತೆಯನ್ನು ಉತ್ತೇಜಿಸುತ್ತದೆ. ಇತರೆ ಹಬ್ಬಗಳಂತೆ ಈದ್-ಉಲ್ ಫಿತರ್ ಅನ್ನು ಏಕಾಂತವಾಗಿ ಆಚರಿಸಲಾಗದು. ಅದು ಮುಸ್ಲಿಂ ಹಬ್ಬದಂತೆ ಆರಂಭವಾಗುವುದು ಸ್ವಾಭಾವಿಕ. ಆದರೆ ಆಚರಣೆಯಲ್ಲಿ ಅದು ಸಾಮಾಜಿಕ ಹಬ್ಬವಾಗುತ್ತದೆ. ಹಬ್ಬದ ಪ್ರಾರ್ಥನೆ ಅಥವಾ ವಸ್ತು ಖರೀದಿ ಎಲ್ಲವೂ ಧಾರ್ಮಿಕ, ಸಾಮಾಜಿಕ ಚಟುವಟಿಕೆಯಾಗುತ್ತದೆ. ಈದ್-ಉಲ್-ಫಿತರ್‌ಗೆ ಒಮದು ರೂಪವಿದೆ. ಆದರೆ ಅದೇ ವೇಳೆ ಹಬ್ಬದ ಸಡಗರದಲ್ಲಿ ಅಂತರ್ಗತ ಉತ್ಸಾಹ, ಹುಮ್ಮಸು ಇದೆ. ತುಂಬು ಉತಸಾಹದಿಂದ ಈದ್-ಉಲ್-ಫಿತರ್ ಅನ್ನು ಆಚರಿಸಿದರೆ, ಅದು ಜನರನ್ನು ಒಂದೆಡೆ ಸೇರಿಸುತ್ತದೆ. ಸೌಹಾರ್ದವನ್ನು ಬಿಂಬಿಸುತ್ತದೆ. ಆದುದರಿಂದ, ಈದ್-ಉಲ್-ಫಿತರ್‌ನ ನಿಜವಾದ ಅರ್ಥ ಈದ್-ಉಲ್ ಇನ್ಯಾನ್ ಅಥವಾ ಮಾನವೀಯತೆಯ ಹಬ್ಬ/ಕುಂದಾಪ್ರ ಡಾಟ್ ಕಾಂ ಲೇಖನ/

Leave a Reply

Your email address will not be published. Required fields are marked *

6 + four =