ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ, ಪ್ರತಿಭಾವಂತ ಕಲಾವಿದ ಗೌತಮ್ ಕೆ. ಅವರ ಎಲ್ಲಿರುವ ನಾನು ಆಲ್ಬಂ ಸಾಂಗ್ ಫೆ. 11ರ ಬೆಳಿಗ್ಗೆ 10ಗಂಟೆಗೆ ಬಿಡುಗಡೆಗೊಳ್ಳಲಿದೆ. ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಆಲ್ಬಂ ಸಾಂಗ್ ಬಿಡುಗಡೆಗೊಳಿಸಲಿದ್ದಾರೆ.
ಆಲ್ಬಂ ಸಾಂಗ್ ನಿರ್ದೇಶನ, ನಟನೆ ಹಾಗೂ ಹಾಡುಗಾರಿಕೆಯಲ್ಲಿ ಗೌತಮ್ ಕೆ. ಇದ್ದರೇ, ದಿಲೀಪ್ ಮರೀಚಿ ಸಾಹಿತ್ಯ ಬರೆದಿದ್ದು, ರಾಜೇಶ್ ನಾಯ್ಕ್ ಹಾಗೂ ಭರತ್ ಕ್ಯಾಮರಾದಲ್ಲಿ ಸಹಕರಿಸಿದ್ದಾರೆ. ನಿತೀಶ್ ಚಿತ್ರಕಥೆಯಲ್ಲಿ ಸಹಕರಿಸಿದ್ದರೆ, ರೆಲ್ವಿನ್ ಮೆಲ್ರಿನ್ ಸಂಕಲನ ಮಾಡಿದ್ದಾರೆ. ಸಹಕಲಾವಿದರಾದ ಶ್ರೇಯಾ ಗೌತಮ್ ನಟಿಸಿದ್ದಾರೆ. ಬಿಡುಗಡೆಯಾದ ಬಳಿಕ ಉಷಾಕಾಮ್ಯ ಪ್ರೊಡಕ್ಷನ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ (https://www.youtube.com/channel/UCfRKolvXC7K9Wt_a4eIYn6w/videos) ಲಭ್ಯವಾಗಲಿದೆ.