ಇಂಜಿನೀಯರಿಂಗ್ ಪದವೀಧರೆಗೆ ಪ್ರಿಯದರ್ಶಿನಿಗೆ ಸಮಾಜ ಸೇವೆಯ ಅಕ್ಕರೆ

ಕುಂದಾಪ್ರ ಡಾಟ್ ಕಾಂ ಲೇಖನ
ಬೈಂದೂರು: ಸಾಕಷ್ಟು ಕುತೂಹಲ ಕೆರಳಿಸಿರುವ ಕಂಬದಕೋಣೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪ್ರಿಯದರ್ಶಿನಿ ದೇವಾಡಿಗ ಬೆಸ್ಕೂರು ಸ್ವರ್ಧೆಗಿಳಿದಿದ್ದಾರೆ.

ಕಲಿತದ್ದು ಇಂಜಿನಿಯರಿಂಗ್, ವೃತ್ತಿಯಲ್ಲಿ ಉಪನ್ಯಾಸಕಿ, ಸಂಘಟನೆಯಲ್ಲಿ ಪರಿಣತಿ, ಸಮಾಜ ಸೇವೆಯಲ್ಲಿ ಆಸಕ್ತಿ. ಸಂಘ-ಸಂಸ್ಥೆ, ಸಹಕಾರಿಗಳಲ್ಲಿ ಸಕ್ರಿಯೆ. ಇದು ಪ್ರಿಯದರ್ಶಿನಿ ಅವರ ಶಾರ್ಟ್ ಪ್ರೊಪೈಲ್. ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡು ಜನಸೇವೆಗೈಯಬೇಕೆಂಬ ತುಡಿತ, (ಕುಂದಾಪ್ರ ಡಾಟ್ ಕಾಂ) ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ತಾಯಿ ಶಾರದಾ ಬಿಜೂರು ಅವರ ಪ್ರೇರಣೆ, ಬೆಸ್ಕೂರು ಕುಟುಂಬದ ಪ್ರೋತ್ಸಾಹ. ಇವೆಲ್ಲದರಿಂದ ಪ್ರಿಯದರ್ಶಿನಿ ಮೊದಲ ಭಾರಿಗೆ ರಾಜಕೀಯ ರಂಗಕ್ಕೆ ಧುಮುಕುತ್ತದ್ದಾರೆ. ಕುಂದಾಪ್ರ ಡಾಟ್ ಕಾಂ ಲೇಖನ

ಸೌಪರ್ಣಿಕಾ ಮಹಿಳಾ ಸಹಕಾರಿಯ ನಿರ್ದೇಶಕಿಯಾಗಿ, ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ತ್ರಾಸಿ ಯುವತಿ ಮಂಡಲದ ಅಧ್ಯಕ್ಷೆಯಾಗಿದ್ದ ಪ್ರೀಯದರ್ಶಿನಿ ಅವರಿಗೆ ರಾಜಕೀಯದ ಹಿನ್ನೆಲೆಯೂ ಇದ್ದ ಕಾರಣ ಬಿಜೆಪಿ ಪಕ್ಷದಿಂದ ಸ್ವರ್ಧಿಸುವ ಅವಕಾಶ ದೊರೆತಿದೆ. ಸೂಕ್ತ ಸಮಯದಲ್ಲಿ ದೊರೆತ ಅವಕಾಶ, ಪಕ್ಷದಿಂದಲೂ ಸಹಕಾರ, ಕುಟುಂಬ ವರ್ಗದ ಪ್ರೋತ್ಸಾಹದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿರುವ ಪ್ರಿಯದರ್ಶಿನಿ ಅವರಿಗೆ ಕಂಬದಕೋಣೆ ಜಿಪಂ ವ್ಯಾಪ್ತಿಯ ದೇವಾಡಿಗ ಸಮುದಾಯದ ಮತಗಳೇ ನಿರ್ಣಾಯಕವಾಗಲಿದೆ. ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

seven − four =