ಯಕ್ಷಗಾನ ಸಂಘಟಕ ನಾಗರಾಜ ನೈಕಂಬ್ಳಿ ವಿರುದ್ಧ ಜಾಲತಾಣದಲ್ಲಿ ಫೇಕ್ ನ್ಯೂಸ್. ಠಾಣಾ ಮೆಟ್ಟಿಲೇರಿದ ಪ್ರಕರಣ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೈದಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕಿನ ನೈಕಂಬ್ಳಿಯ ನಾಗರಾಜ ಶೆಟ್ಟಿ ಎಂಬುವವರ ವಿರುದ್ಧ ಸುಳ್ಳು ಅತ್ಯಾಚಾರದ ಆರೋಪ ಹೊರಿಸಿ ಎಡಿಟ್ ಮಾಡಲಾಗಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಘಟನೆಯಿಂದ ನೊಂದಿರುವ ನಾಗರಾಜ ಶೆಟ್ಟಿ ನೈಕಂಬ್ಳಿ ಅವರು ಸೈಬರ್ ಕ್ರೈ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.

Call us

Call us

Click Here

Visit Now

ಬೆಂಗಳೂರಿನಲ್ಲಿ ವೃತ್ತಿಯಲ್ಲಿರುವ ನಾಗರಾಜ ಅವರು ಹವ್ಯಾಸಿ ಯಕ್ಷಗಾನ ಸಂಘಟಕರಾಗಿಯೂ ಗುರುತಿಸಿಕೊಂಡವರು. ಇತ್ತಿಚಿಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭ ಬಿಜೆಪಿ ಅಭ್ಯರ್ಥಿಯ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದರು. ಇದೇ ಇದೇ ಸಂದರ್ಭವನ್ನು ಗಮನದಲ್ಲಿರಿಸಿಕೊಂಡು ನಾಗರಾಜ ಅವರ ತೇಜೋವಧೆಗೆ ಮುಂದಾಗಿರಬಹುದು ಎಂದು ಶಂಕಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Click here

Click Here

Call us

Call us

ರಾಜ್ಯದ ಸುದ್ದಿವಾಹಿನಿಯೊಂದರಲ್ಲಿ ಪ್ರಕಟವಾದ ಸುದ್ದಿ ಎಂಬಂತೆ ಬಿಂಬಿಸಿ ನಾಗರಾಜ ಶೆಟ್ಟಿ ಹಾಗೂ ಅಪರಿಚಿತ ಮಗುವೊಂದರ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಅವರ ವಿರುದ್ಧ ಕಾನೂನು ಸಮರ ಮುಂದುವರಿಸುವುದಾಗಿ ನಾಗರಾಜ ಶೆಟ್ಟಿ ತಿಳಿಸಿದ್ದಾರೆ.

ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿ ಪರ ಸಕ್ರಿಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದರ ಹಿನ್ನೆಲೆಯಲ್ಲಿ ಈಗ ವ್ಯವಸ್ಥಿತವಾಗಿ ಅಪಪ್ರಚಾರಕ್ಕೆ ತೊಡಗಿದ್ದಾರೆ. ಆದರೆ ಈಗಾಗಲೇ ಆ ಎಡಿಟ್ ಮಾಡಲಾಗಿರುವ ಚಿತ್ರದಲ್ಲಿ ಬಳಸಿಕೊಂಡಿರು ವಾಹಿನಿಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದೇವೆ. ಸುಳ್ಳು ಸುದ್ದಿ ಹರಡಿದವರು ಮತ್ತು ಶೇರ್ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇವೆ – ನಾಗರಾಜ ಶೆಟ್ಟಿ ನೈಕಂಬ್ಳಿ

Leave a Reply

Your email address will not be published. Required fields are marked *

eight + sixteen =