ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಚಿತ್ರಗಾರರ ಮೇಲೆ ಹರಿಹಾಯುವ ಪ್ರವೃತ್ತಿ ಹೆಚ್ಚುತ್ತಿದೆ ಆದರೆ ಮಾಡುವ ಕೆಲಸದಲ್ಲಿ ಬದ್ಧತೆ ಇದ್ದರೆ ಅಂತಹ ಶಕ್ತಿಗಳಿಗೆ ಹೆದರುವ ಅಗತ್ಯವೇ ಇಲ್ಲ ಎಂದು ಸಿನೆಮಾ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಅವರು ಶನಿವಾರ ಕುಂದಾಪುರದ ಕಲಾಮಂದಿರದಲ್ಲಿ ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರದ ನೇತೃತ್ವದಲ್ಲಿ ನಡೆದ ನಾಲ್ಕು ದಿನಗಳ ಕಾರ್ಟೂನು ಹಬ್ಬ ಉದ್ಘಾಟಿಸಿ ಮಾತನಾಡಿ ಸಮಾಜವನ್ನು ವಿಡಂಬನಾ ದೃಷ್ಟಿಯಿಂದ ನೋಡಲು ಸಾಧ್ಯವಾದರೆ ಮಾತ್ರ ಉತ್ತಮ ಕಾರ್ಟೂನಿಷ್ಠ್ ಆಗಲು ಸಾಧ್ಯ. ಅದು ರಾಜಕೀಯ ಕಾರಣಗಳಿಂದಾಗಿ ವಿವಾದಕ್ಕೊಳಗಾದರೇ, ಅದಕ್ಕೆ ಪ್ರತಿಕ್ರಿಯಿಸುತ್ತಾ ಕೂರದೇ ಮುಂದೆ ಸಾಗುವುದು ಒಳಿತು ಎಂದರು.
ಸಿನೆಮಾಗಳಲ್ಲಿ ನಮ್ಮ ಸುತ್ತಮುತ್ತಲಿನ ಕಥೆಯನ್ನೇ ಹೇಳಲು ಹೊರಟಾಗ ಅದರಲ್ಲಿನ ಕಥಾವಸ್ತು ಗಟ್ಟಿಯಾಗುತ್ತದೆ, ಜನರಿಗೂ ಹತ್ತಿರವಾಗುತ್ತದೆ. ಹಾಗೆಯೇ ಭಾರತೀಯ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಾಗ ನಾವು ಗಟ್ಟಿಯಾಗಲು, ನಮ್ಮತನ ಉಳಿಸಿಕೊಳ್ಳಲು ಸಾಧ್ಯವಿದೆ. ಬ್ರಿಟೀಷರ ಕಾಲದ ಗುಮಾಸ್ತವಾಗುವ ಶಿಕ್ಷಣ ಬದಲಾಗಬೇಕಿದೆ ಎಂದರು.
ರಿಷಬ್ ಶೆಟ್ಟಿ ಅವರಿಗೆ ಕುಂದಾಪುರ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಹೂ ನೀಡಿ ಬೋರ್ಡ್ ಮೇಲೆ ಧನ್ಯವಾದ ಎಂದು ಬರೆದು ಸನ್ಮಾನಿಸಿದ್ದು ವಿಶೇಷವಾಗಿತ್ತು. ಬೆಂಗಳೂರಿನ ಹಿರಿಯ ವ್ಯಂಗ್ಯಚಿತ್ರಕಾರ ವಿ. ಜಿ. ನರೇಂದ್ರ, ದಿ ಹಿಂದೂ ಇಂಗ್ಲಿಷ್ ದಿನಪತ್ರಿಕೆ ವ್ಯಂಗ್ಯಚಿತ್ರಕಾರ ಸುರೇಂದ್ರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪವರ್ ಲಿಪ್ಟರ್ ವಿಶ್ವನಾಥ ಗಾಣಿಗ ಬಾಳಿಕೆರೆ ಅವರನ್ನು ಸನ್ಮಾನಸಿಲಾಯಿತು.
ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ದಿಕ್ಸೂಚಿ ಭಾಷಣ ಮಾಡಿದರು. ಮಣಿಪಾಲ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ವರದೇಶ್ ಹಿರೇಗಂಗೆ, ಸಿನೆಮಾ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿ, ಕಾರ್ಟೂನು ಹಬ್ಬದ ರೂವಾರಿ ಸತೀಶ್ ಆಚಾರ್ಯ ಉಪಸ್ಥಿತರಿದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಇದನ್ನೂ ಓದಿ:
► ಆತ್ಮ ವಿಕಾಸದ ಮೂಲಕ ಸ್ವಾತಂತ್ರ್ಯ, ಸ್ವರಾಜ್ ಗಾಂಧೀಜಿ ಪ್ರತಿಪಾದನೆಯಾಗಿತ್ತು:ಕೆ. ಅಣ್ಣಾಮಲೈ – https://kundapraa.com/?p=33798 .
► ಕುಂದಾಪುರದಲ್ಲಿ ರೇಖೆಗಳ ಕಲರವ. ನ.23ರಿಂದ ಕಾರ್ಟೂನು ಹಬ್ಬ – https://kundapraa.com/?p=33781 .