ಸಂಬಂಧಿಗಳೇ ಮದುವೆ ಮನೆಗೆ ಬೆಂಕಿ ಇಟ್ಟರು!

Click Here

Call us

Call us

ಬೈಂದೂರು: ಇಲ್ಲಿನ ತಗ್ಗರ್ಸೆ ಗ್ರಾಮದ ನೆಲ್ಯಾಡಿ ಅರಳಿಕಟ್ಟೆ ಮನೆಯ ಸುಶೀಲಾ ಮತ್ತು ನಾಗಮ್ಮ ಶೆಡ್ತಿ ಎಂಬುವವರ ಹಂಚಿನ ಮನೆಗೆ ಯಾರೂ ಇಲ್ಲದ ವೇಳೆ ಬೆಂಕಿ ಹಚ್ಚಿದ್ದ ಆರೋಪಿಗಳು, ಮದುವೆ ಸಂಭ್ರಮದಲ್ಲಿದ್ದ ಮನೆಮಂದಿಗೆ ಬಿಸಿ ಶಾಕ್ ನೀಡಿದ ಘಟನೆ ವರದಿಯಾಗಿದೆ.

Click Here

Call us

Call us

Visit Now

ಘಟನೆಯ ವಿವರ:
ತಗ್ಗರ್ಸೆಯ ನೆಲ್ಯಾಡಿ ಅರಳಿಕಟ್ಟೆ ಮನೆ ಸುಶೀಲಾ ಎಂಬುವವರ ಮಗನಿಗೆ ಮದವೆ ನಿಗದಿಯಾಗಿತ್ತು. ಮನೆಯವರೆಲ್ಲರೂ ಮದುವೆ ಸಮಾರಂಭಕ್ಕೆ ಕಲ್ಯಾಣ ಮಂಟಪಕ್ಕೆ ತೆರಳಿದ್ದ ಸಂದರ್ಭವನ್ನು ನೋಡಿಕೊಂಡು ಕುಟುಂಬದ ಹತ್ತಿರದ ಸಂಬಂಧಿಕರಾದ ರಾಘವೇಂದ್ರ ಹಾಗೂ ರಾಜೇಶ ಎಂಬುವವರು ಮಧ್ಯಾಹ್ನ 12ಗಂಟೆಯ ಸುಮಾರಿಗೆ ಸುಶೀಲಾ ಅವರ ಮನೆಗೆ ಬಿಂಕಿ ಹಚ್ಚಿ ಪರಾರಿಯಾಗಿದ್ದರು. ಇವರುಗಳ ನಡುವೆ ಆಸ್ತಿ ವಿಚಾರಕ್ಕೆ ತಕರಾರಿತ್ತು ಎನ್ನಲಾಗಿದ್ದು ಅದೇ ವಿಷಯವನ್ನಿಟ್ಟುಕೊಂಡು ಮನೆಗೆ ಬೆಂಕಿ ಹಚ್ಚಿದ ಬಗ್ಗೆ ತಿಳಿದುಬಂದಿದೆ

Click here

Click Here

Call us

Call us

ಬೆಂಕಿ ಮನೆ ಜಗಲಿಯನ್ನು ಆವರಿಸಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಶಕ್ಕೆ ಪೋನಾಯಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರಾದರೂ ಅಷ್ಟರಲ್ಲಾಗಲೇ ಸುಮಾರು 3ಲಕ್ಷ ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿದ್ದವು. ಪ್ರಕರಣದ ಬೆನ್ನತ್ತಿದ ಬೈಂದೂರು ಪೊಲೀಸರು ಶೀಘ್ರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

one × 2 =