178 ಪ್ರಯಾಣಿಕರೊಂದಿಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದೋಹಾದಿಂದ ಮಂಗಳೂರಿಗೆ

Call us

ದೀಪಕ್ ಶೆಟ್ಟಿ , ಕತಾರ್ | ಕುಂದಾಪ್ರ ಡಾಟ್ ಕಾಂ.
ಲಾಕ್‌ಡೌನ್ ಬಳಿಕ ಮೊದಲನೇ ಬಾರಿಗೆ 178 ಪ್ರಯಾಣಿಕರೊಂದಿಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ದೋಹಾದಿಂದ ಮಂಗಳೂರಿಗೆ ಮುಟ್ಟಿದೆ. ಕಳೆದೆರಡು ತಿಂಗಳಿಂದ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಮಂಗಳೂರಿನವರಿಗೆ ಒಂದು ತಾತ್ಕಾಲಿಕ ನೆಮ್ಮದಿ.

ಇಂದು ಪಯಣಿಸಿದ ಎಲ್ಲರ ಮೊಗದಲ್ಲೂ ದೀಪಾವಳಿ, ಈದ್, ಕ್ರಿಸ್ಮಸ್ ಹಬ್ಬ ಆಚರಿಸಿದಷ್ಟಷ್ಟೆ ಸಂಭ್ರಮ. 40ಕ್ಕೂ ಅಧಿಕ ಗರ್ಭಿಣಿ ಹೆಂಗಸರು, ವಯೋವೃದ್ಧರು , ವಿದ್ಯಾರ್ಥಿಗಳು , ವೈದ್ಯಕೀಯ ಚಿಕಿತ್ಸೆಗೆ ಹೋಗ ಬೇಕಾಗಿರುವವರು , ಆರ್ಥಿಕ ಹಿನ್ನೆಡೆಯಿಂದ ಅತಂತ್ರ ಪರಿಸ್ಥಿತಿಯಲ್ಲಿರುವ ನಿರುದ್ಯೋಗಿಗಳು, ಆನ್ ಅರೈವಲ್ ಹಾಗು ಫ್ಯಾಮಿಲಿ ವೀಸಾ ದಲ್ಲಿ ಬಂದು ಸಿಕ್ಕಿಕೊಂಡಿರುವವರು.

Call us

ಹೀಗೆ 178 ಜನ ಇಂದು ತಮ್ಮ ಮಾತ್ರ ಭೂಮಿಗೆ ತಲುಪಿದ್ದಾರೆ.ಜೂನ್ 4 ರಂದು ಭಾರತದ ವಿದೇಶಾಂಗ ಸಚಿವಾಲಯದಿಂದ ಹೊರಬಿದ್ದ ವಂದೇ ಭಾರತ್ ಮಿಷನ್ 2ನೇಯ ಹಂತದ ಪಟ್ಟಿ ಬಿಡುಗಡೆಗೊಂಡಾಗ ಕತಾರ್ ನಲ್ಲಿ ನೆಲೆಸಿರುವ ಕನ್ನಡಿಗರಿಗೆ ಶಾಕ್ ಆಗಿದ್ದಂತೂ ನಿಜ. ಅಪೇಕ್ಷೆಗೆ ಹಲವಾರು ಕಾರಣಗಳು ಇದ್ದವು. ಕತಾರ್ನಲ್ಲಿರುವ ಎಲ್ಲ ಕರ್ನಾಟಕ ಮೂಲತಃ ಸಂಘಟನೆಗಳು – ಕರ್ನಾಟಕ ಸಂಘ, ತುಳು ಕೂಟ, ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಷನ್, ಮ್ಯಾಂಗಲೋರ್ ಕ್ರಿಕೆಟ್ ಕ್ಲಬ್, ಬಂಟ್ಸ್ ಕತಾರ್, ಮ್ಯಾಂಗಲೋರ್ ಕಲ್ಚರಲ್ ಅಸೋಸಿಯೇಷನ್, ಸೌತ್ ಕೆನರಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ,ಕತಾರ್ ಬಿಲ್ಲವಾಸ್ -ಜಂಟಿಯಾಗಿ ಕೇಂದ್ರದ ಮಂತ್ರಿಗಳಿಗೆ, ರಾಜ್ಯದ ಮುಖ್ಯ ಮಂತ್ರಿ, ಮಂತ್ರಿಗಳು, ವಿಧಾನಸಭಾ ಶಾಶಕರಿಗೆ, ಲೋಕ ಸಭಾ ಸದಸ್ಯರುಗಳಿಗೆ ಮನವಿ ಮಾಡಿದ್ದರು. ಅದಕ್ಕೂ ಮಿಗಿಲಾಗಿ ವೈಯಕ್ತಿಕವಾಗಿ ನನ್ನಂತೆ ಹಲವಾರು ಜನರು ಬೇರೆ ಬೇರೆ ಮಂತ್ರಿಗಳಿಗೆ ಇನ್ನಿತರ ಜನ ಪ್ರತಿನಿಧಿಗಳಿಗೆ ನಿರಂತರವಾಗಿ ಮಾತಾಡುತ್ತಲೇ ಇದ್ದರು , ವಂದೇ ಭಾರತ್ ದೋಹಾ ಕರ್ನಾಟಕ ಸಮಿತಿ ಕೂಡ ಮನವಿ ಮಾಡಿತ್ತು, ಮತ್ತು ಭಾರತೀಯ ದೂತಾವಾಸ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ವಿದೇಶಾಂಗ ಮಂತ್ರಾಲಯಕ್ಕೆ ಮನವಿಯನ್ನ ಮಾಡಿದ್ದರು ಅಪೇಕ್ಷೆ ನುಚ್ಚು ನೂರಾದಾಗ ಸ್ವಾಭಾವಿಕವಾಗಿ ನಿರಾಸೆಯಾಗಿತ್ತು .

ಜಯಪ್ರಕಾಶ ಹೆಗ್ಡೆ ಅವರ ನೆರವು ಸ್ಮರಣೀಯ:
ನಮ್ಮ ನೆರವಿಗೆ ಬಂದವರು ಜಯಪ್ರಕಾಶ್ ಹೆಗ್ಡೆಯವರು. ಮೊದಲೆರಡು ದಿನ ಅವರು ಕೂಡ ರಾಜ್ಯದ, ದೇಶದ ಮಂತ್ರಿಗಳ ನಡುವೆ ಮಾತಾಡಿ ಪರಿಸ್ಥಿತಿಯನ್ನ ಅರ್ಥಮಾಡ್ಕೊಂಡ್ರು. ಒಂದು ಕೆಲಸ ಮಾಡಿಕೊಡಬೇಕಾದ್ರೆ ಅಧಿಕಾರದಲ್ಲೇ ಇರಬೇಕೆಂದಿಲ್ಲ. ಮನಸಿದ್ದರೆ ಮಾರ್ಗವು ತೋಚಿತು ಎನ್ನುವದ್ದಕ್ಕೆ ಇವರೇ ಸಾಕ್ಷಿ. ನಾಗರಿಕ ವಿಮಾನಯಾನ ಮಂತ್ರಾಲಯದ ಅಧಿಕಾರಿಗಳೊಂದಿಗೆ ದಿನಕ್ಕೆರಡು ಬಾರಿ ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇದ್ದರು. ಅದಲ್ಲದೆ ತಾವಾಗೇ ದೂರವಾಣಿ ಮಾಡಿ ಅಪ್ಡೇಟ್ ಮಾಡ್ತಾ ಇದ್ರು. ಇವರನ್ನು ಬಲ್ಲವರಿಗೆ ಅವರ ಸ್ವಭಾವ ಚೆನ್ನಾಗಿ ಗೊತ್ತಿದೆ. ಹಿಡಿದ ಕೆಲಸ ಮಾಡದೆ ಬಿಡಲ್ಲ. ಕಡೆಗೂ ಜೂನ್ 11ರಂದು ಅನುಮೋದನೆ ಸಿಕ್ಕಿತು. ಇತರ ರಾಜಕಾರಣಿಗಳಂತೆ ಖಂಡಿತ ಮಾಡುತ್ತೇನೆ ಅಂತ ಯಾವತ್ತೂ ಹೇಳಿರಲಿಲ್ಲ. ಪ್ರಯತ್ನ ಮಾಡ್ತೇನೆ ಅಂತ ಹೇಳ್ತ ಇದ್ರು. ಇದು

ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಸಂದ ಫಲ. ಕತಾರ್ ನಲ್ಲಿರುವ ಕನ್ನಡಿಗರ ಪರವಾಗಿ ಅವರಿಗೊಂದು ಸಲಾಮ್ . ಕತಾರ್ ನಲ್ಲಿರುವ ಭಾರತೀಯ ದೂತಾವಾಸ , ಹಾಗೆ ನನ್ನೊಂದಿಗೆ ಪ್ರಯಾಣಿಕರ ಪಟ್ಟಿ ತಯಾರಿಸುವಲ್ಲಿ ಸಾಕಷ್ಟು ಶ್ರಮಿಸಿದ ವಂದೇ ಭಾರತ್ ದೋಹಾ ಕರ್ನಾಟಕ ಸಮಿತಿಯ ಇತರ ಸದಸ್ಯರಾದ ನಾಗೇಶ್ ರಾವ್, ಸಂದೀಪ್ ರೆಡ್ಡಿ, ಶಶಿಧರ್ ಹೆಬ್ಬಾಳ್, ಖಲೀಲ್ ಇವರುಗಳಿಗೂ ವಂದನೆಗಳು .

ಕರ್ನಾಟಕಕ್ಕೆ ಇದುವರೆಗೆ ೨ ವಂದೇ ಭಾರತ್ ಮಿಷನ್ ಫ್ಲೈಟ್ ಹಾಗು ಇನ್ನೊಂದು ICBF-KSQ ಚಾರ್ಟರ್ಡ್ ಫ್ಲೈಟ್ ಹೋಗಿದ್ದು, ಕಾಯುತ್ತಿರುವ ಸಾವಿರಾರು ಜನರನ್ನು ಸಾಗಿಸಲು ಇನ್ನು ನಮಗೆ ಹಲವಾರು ವಿಮಾನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಜಯಪ್ರಕಾಶ್ ಹೆಗ್ಡೆಯವರ ಜೊತೆಗೆ ಇನ್ನಿತರ ಎಲ್ಲ ಜನಪ್ರತಿನಿಧಿಗಳ್ಲಲಿ ಕಳಕಳಿಯ ವಿನಂತಿ. ನಮಗೆ ನಮ್ಮ ಜನ್ಮ ಭೂಮಿ ಬರಲು ಸಹಕರಿಸಿ ಹಾಗು ಅವಕಾಶ ಮಾಡಿಕೊಡಿ. 

Leave a Reply

Your email address will not be published. Required fields are marked *

seven + thirteen =