ಕೆಎಸ್‌ಆರ್‌ಟಿಸಿ ಸಂಸ್ಥೆಯ ಕಾರ್ಯವೈಖರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಹಲವಾರು ಗುಣಾತ್ಮಕ ಬದಲಾವಣೆಗಳನ್ನು ತರಲಾಗಿದ್ದು, ಇದರ ಪರಿಣಾಮವಾಗಿ ೨೫೦ಕೋಟಿ ನಷ್ಟದ ನಿರೀಕ್ಷೆ ಮೀರಿ ಫೆಬ್ರವರಿ ಅಂತ್ಯಕ್ಕೆ ೧೦ ಕೋಟಿ ಲಾಭ ಗಳಿಸುವಂತಾಗಿದೆ. ಕಳೆದೊಂದು ವರ್ಷದಲ್ಲಿ ಸಂಸ್ಥೆಯ ೨೦೮ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ೨ನೇ ಅತ್ಯುತ್ತಮ ಸಾರಿಗೆ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್. ಆರ್. ಉಮಾಶಂಕರ್ ಹೇಳಿದರು.

Call us

Call us

Visit Now

ಅವರು ಬೈಂದೂರು ಯಡ್ತರೆಯಲ್ಲಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆಗೈದು ಬಳಿಕ ಮಾತನಾಡಿ ಸಂಸ್ಥೆಯಲ್ಲಿ ಅನಗತ್ಯ ವೆಚ್ಚ ಕಡಿತಗೊಳಿಸಿ ಆದಾಯ ಹೆಚ್ಚಿಸುವ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ. ಕೆಎಸ್‌ಆರ್‌ಟಿಸಿಯ ಪ್ರತಿ ಡಿಪೋ ಬಸ್ ನಿಲ್ದಾಣಗಳಿಗೆ ನಿಗಮದ ಅಧ್ಯಕ್ಷರು ಹಾಗೂ ತಾನು ಭೇಟಿ ನೀಡಿ ಖುದ್ದಾಗಿ ಅಲ್ಲಿನ ಸಮಸ್ಯೆಗಳನ್ನು ಅರಿತು ಬಗೆಹರಿಸಲು ಕೆಲಸ ಮಾಡಲಾಗಿದೆ. ಪರಿಣಾಮವಾಗಿ ಸಂಸ್ಥೆ ಲಾಭದ ಹಾದಿಯಲ್ಲಿದೆ ಎಂದರು.

Click Here

Click here

Click Here

Call us

Call us

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಸಂಸ್ಥೆ ಕಳೆದ ವರ್ಷ ೧೭೭ ಕೋಟಿ ನಷ್ಟದಲ್ಲಿತ್ತು. ಆದರೆ ಈ ಭಾರಿ ೧೦ ಕೋಟಿ ಲಾಭಗಳಿಸಿದೆ. ಒಂದು ವರ್ಷದಲ್ಲಿ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುವಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂಧಿಗಳ ಶ್ರಮ ಅಪಾರವಾದದ್ದು. ಡಿಸೆಲ್ ಬೆಲೆ ಹೆಚ್ಚಾಗಿದ್ದರೂ ಟಿಕೇಟ್ ದರ ಏರಿಸದೇ, ಗ್ರಾಮೀಣ ಮತ್ತು ನಗರ ಭಾಗಗಳಿಗೆ ಹೆಚ್ಚು ಬಸ್‌ಗಳನ್ನು ಒದಗಿಸಿ ಜನರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಗಿದೆ ಎಂದ ಅವರು ಉಡುಪಿಯಲಲಿಲ ೩೪ ಕೋಟಿ ಹಾಗೂ ೬ ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಹಾಗೂ ಡೀಪೋ, ಬೈಂದೂರಿನಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ಹಾಗೂ ೬ ಕೋಟಿ ರೂ ವೆಚ್ಚದಲ್ಲಿ ಡೀಪೋ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಗೌರಿ ದೇವಾಡಿಗ, ಜಿಲ್ಲಾ ಕೆಡಿಪಿ ಸದಸ್ಯ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯರುಗಳಾದ ಸುಜಾತ ದೇವಾಡಿಗ, ಮಾಲಿನಿ ಕೆ, ಜಗದೀಶ ದೇವಾಡಿಗ, ಪ್ರಮೀಳಾ ದೇವಾಡಿಗ, ವಿಜಯ ಶೆಟ್ಟಿ, ಜಗದೀಶ ಪೂಜಾರಿ, ಮೆಸ್ಕಾಂ ನಿರ್ದೇಶಕರುಗಳಾದ ರಿಯಾಜ್ ಅಹಮ್ಮದ್, ಸಂಪಿಗೇಡಿ ಸಂಜೀವ ಶೆಟ್ಟಿ, ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ,, ಕೆಎಸ್‌ಆರ್‌ಟಿಸಿ ಡಿಪಿ ಜೈಶಾಂತ್ ಕುಮಾರ್ ಮೊದಲಾದವರು ವೇದಿಕೆಯಲ್ಲಿದ್ದರು.

ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್ ಸ್ವಾಗತಿಸಿದರು. ಪತ್ರಕರ್ತ ಅರುಣಕುಮಾರ್ ಶಿರೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

nineteen + 8 =