ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್: ಬಸ್ರೂರು ಶಾಖೆಯ ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬಸ್ರೂರು ಶಾಖೆಯ ಸ್ವಂತ ಕಟ್ಟಡಕ್ಕೆ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಬಸ್ರೂರು ಚರ್ಚಿನ ಧರ್ಮಗುರು ವಂ|ಚಾಲ್ರ್ಸ್ ನೊರೊನ್ಹಾ ಅವರು ಆಶಿರ್ವಚನಗೈದು ಶಿಲಾನ್ಯಾಸ ನೆರವೇರಿಸಿ ಶುಭ ಹಾರೈಸಿದರು.

Click Here

Call us

Call us

ಈ ಸಂದರ್ಭ ಬ್ರದರ್ ದಿಯೊಕೋನ್ ಜೊಯ್ಸಟನ್ ಪಿಂಟೊ, ಬಸ್ರೂರು ಚರ್ಚಿನ ಉಪಾಧ್ಯಕ್ಷ ಫ್ಲೈವನ್ ಡಿಸೋಜಾ, ಕುಂದಾಪುರ ವಲಯ ಕಥೊಲಿಕ್ ಸಭಾ ವರಾಡೋ ಅಧ್ಯಕ್ಷೆ ಮೇಬಲ್ ಡಿಸೋಜಾ, ಎಮ್. ಸಿ. ಸಿ ಬ್ಯಾಂಕಿನ ನಿರ್ದೇಶಕ ಕಿರಣ್ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

Click here

Click Here

Call us

Visit Now

ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಜಾನ್ಸನ್ ಡಿ ಆಲ್ಮೆಡಾ, ಉಪಾಧ್ಯಕ್ಷ ಕಿರಣ್ ಲೋಬೊ, ಬಸ್ರೂರು ಶಾಖೆಯ ಉಸ್ತುವಾರಿ, ಸೊಸೈಟಿ ನಿರ್ದೇಶಕ ಫಿಲಿಪ್ ಡಿಕೋಸ್ತಾ, ಶಿಲಾನ್ಯಸ ಗೈದರು.

ಸೊಸೈಟಿ ನಿರ್ದೇಶಕರಾದ ವಿನೋದ್ ಕ್ರಾಸ್ಟೊ, ವಿಲ್ಫ್ರೆಡ್ ಮಿನೇಜೆಸ್, ಜಾಕೋಬ್ ಡಿಸೋಜಾ, ಪ್ರಕಾಶ್ ಲೋಬೊ, ಬ್ಯಾಪ್ಟಿಸ್ಟ್ ಡಾಯಸ್, ಸೊಸೈಟಿಯ ಪ್ರಧಾನ ನಿರ್ವಹಣಾ ವ್ಯವಸ್ಥಾಪಕ ಪಾಸ್ಕಲ್ ಡಿಸೋಜಾ, ರೋಜರಿ ಸೊಸೈಟಿ ಶಾಖಾ ವ್ಯವಸ್ಥಾಪಕರು ಮತ್ತು ಸೊಸೈಟಿ ಸಿಬಂದಿ ವರ್ಗದವರು, ಕಥೊಲಿಕ್ ಸಭಾ ಪದಾಧಿಕಾರಿಗಳು ಮತ್ತು ಇನ್ನಿತರರು ಉಪಸ್ತಿತರಿದ್ದರು. ಸೊಸೈಟಿ ನಿರ್ದೇಶಕ ಜೇಕಬ್ ಡಿಸೋಜಾ ಪ್ರಸ್ತಾವಿಸಿದರು.

ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ಕಛೇರಿಯು 3 ಅಂತಸ್ತಿನ ಸ್ವಂತ ಕಟ್ಟಡ ಹೊಂದಿದೆ. ಪಡುಕೋಣೆ ಶಾಖೆ ನೆಲ ಹಾಗೂ ಮೊದಲ ಮಹಡಿ ಸ್ವಂತ ಕಟ್ಟಡ, ಸಂತೆಕಟ್ಟೆ ಶಾಖೆಯು ಎಕ್ತಾ ಟವರ್ಸ್ ಇದರಲ್ಲಿ ಸ್ವಂತ ಕೋಣೆ ಹೊಂದಿದ್ದು, ಬಸ್ರೂರು ಶಾಖೆಯ ಸ್ವಂತ ಕಟ್ಟಡ ನಿರ್ಮಾಣ ಹಂತದಲ್ಲಿದೆ. ಶೀಘ್ರದಲ್ಲಿ ಬೈಂದೂರು ಶಾಖೆಗೂ ಸ್ವಂತ ಕಟ್ಟಡ ನಿರ್ಮಿಸಲಾಗುತ್ತದೆ.

Call us

Leave a Reply

Your email address will not be published. Required fields are marked *

seventeen − five =