ಜೂನ್ 18ಕ್ಕೆ ದ್ವಿತೀಯ ಪಿಯು ಪರೀಕ್ಷೆ: ಕುಂದಾಪುರ & ಬೈಂದೂರು ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಾಕಿ ಉಳಿದಿರುವ ಇಂಗ್ಲೀಷ್ ಪರೀಕ್ಷೆ ಜೂನ್ 18ರ ಗುರುವಾರ ನಡೆಯಲಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಕುಂದಾಪುರ ಕೆಎಸ್ಆರ್‌ಟಿಸಿ ಡಿಪೋದಿಂದ 45 ವಿಶೇಷ ಬಸ್‌ಗನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗಿದೆ.

Click Here

Call us

Call us

ಒಟ್ಟು ಎಷ್ಟು ಬಸ್?
ಭಟ್ಕಳ-5, ಬೈಂದೂರು – 2, ಉಪ್ಪುಂದ – 2, ಗೋಳಿಹೊಳೆ – 1, ಕೊಲ್ಲೂರು – 5, ಗಂಗೊಳ್ಳಿ – 6, ಕೆರಾಡಿ-1, ಆಲೂರು-1, ಸಿದ್ದಾಪುರ-3, ಹಳ್ಳಿಹೊಳೆ-2, ಹೊಸಂಗಡಿ-4, ಶೇಡಿಮನೆ-1, ಮಚ್ಚಟ್ಟು-2, ಬೇಳೂರು -1, ನೆಲ್ಲಿಕಟ್ಟೆ -1, ನೂಜಾಡಿ -1, ಹಾಲಾಡಿ-2, ಕೊಂಡಳ್ಳಿ-1, ಆವರ್ಸೆ-1, ಗೋಳಿಯಂಗಡಿ-1, ಕುಂದಾಪುರ-2 ಬಸ್ಗಳು ಸಂಚರಿಸಲಾಗಿದೆ.

Click here

Click Here

Call us

Visit Now

ಯಾವೆಲ್ಲ ರೂಟ್‌ನಲ್ಲಿ ಬಸ್ ಇರಲಿದೆ:
ಭಟ್ಕಳ- ಬೈಂದೂರು, ಉಪ್ಪುಂದ – ನಾವುಂದ, , ಗೋಳಿಹೊಳೆ – ಕುಂದಾಪುರ, ಕೊಲ್ಲೂರು – ಕುಂದಾಪುರ, ಗಂಗೊಳ್ಳಿ – ಕುಂದಾಪುರ, ಕುಂದಾಪುರ – ಬೈಂದೂರು, ಗೋಳಿಯಂಗಡಿ- ಬಾರ್ಕೂರು, ಕೊಲ್ಲೂರು – ವಂಡ್ಸೆ, ಹೊಸಂಗಡಿ – ಬಿದ್ಕಲ್ಕಟ್ಟೆ, ಹಳ್ಳಿಹೊಳೆ – ಬಿದ್ಕಲ್ಕಟ್ಟೆ, ಶೇಡಿಮನೆ- ಬಿದ್ಕಲ್ಕಟ್ಟೆ, ಬೇಳೂರು – ಕೋಟೇಶ್ವರ, ಕುಂದಾಪುರ – ಬ್ರಹ್ಮಾವರ, ಸಿದ್ದಾಪುರ – ಬ್ರಹ್ಮಾವರ, ಕುಂದಾಪುರ- ಉಡುಪಿ ಮಾರ್ಗದಲ್ಲಿ ಬಸ್ಗಳು ಸಂಚರಿಸಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಎಲ್ಲೆಲ್ಲಿ ಪರೀಕ್ಷೆ ನಡೆಯಲಿವೆ:
ಕುಂದಾಪುರ ಮತ್ತು ಬೈಂದೂರು ತಾಲೂಕಿನ 9 ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆ ನಡೆಯಲಿದ್ದು, ಕುಂದಾಪುರ ಸರಕಾರಿ ಪ.ಪೂ ಕಾಲೇಜು, ಭಂಡಾರ್ಕಾರ್ ಕಾಲೇಜು, ಆರ್.ಎನ್. ಶೆಟ್ಟಿ ಪ.ಪೂ. ಕಾಲೇಜು, ಶಿರೂರು, ಬೈಂದೂರು, ನಾವುಂದ, ವಂಡ್ಸೆ, ಬಿದ್ಕಲ್ಕಟ್ಟೆ, ಕೋಟೇಶ್ವರ ಪ.ಪೂ. ಕಾಲೇಜುಗಳು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಈ ಎಲ್ಲಾ ಮಾರ್ಗಕ್ಕೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ.

ಪ.ಪೂ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ.ಪೂ. ಕಾಲೇಜಿನ ಮುಖಾಂತರ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದು, ಸ್ವಂತ ಅಥವಾ ಖಾಸಗಿ ವಾಹನದಲ್ಲಿ ಬರುವ ವಿದ್ಯಾರ್ಥಿಗಳು ಹೊರತುಪಡಿಸಿ, ಅವಶ್ಯವಿರುವ ಉಳಿದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

ಸಹಾಯವಾಣಿ:
ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ತಾಲೂಕು ಕಛೇರಿಯಲ್ಲಿ ಸಹಾಯವಾಣಿ ತೆರೆದಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಸಹಾಯವಾಣಿ ಸಂಖ್ಯೆ: 08254-230357, 08254-298077, ಮೊಬೈಲ್ – 9141513725, 9008052804 ಸಂಪರ್ಕಿಸಬಹುದಾಗಿದೆ.

 

Leave a Reply

Your email address will not be published. Required fields are marked *

nine + 5 =