ಬೈಂದೂರು ತಾಲೂಕಿನ 9 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶ್ರೀಕ್ಷೇತ್ರ ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಗುರುವಾರ ನಡೆಸಲು ನಿರ್ಧರಿಸಲಾಗಿತ್ತು. ಕೋವಿಡ್-19ರ ನಿರ್ಬಂಧದ ಕಾರಣ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶಯದಂತೆ ವಿವಾಹಕ್ಕೆ ನೋಂದಣಿ ಮಾಡಿಕೊಂಡವರು ಅವರ ಗ್ರಾಮದ ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ಕುಟುಂಬದ ಸದಸ್ಯರೊಡನೆ ಸೇರಿಕೊಂಡು ವಿವಾಹ ನೆರವೇರಿಸಬಹುದು ಎಂದು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಬೈಂದೂರು ತಾಲ್ಲೂಕಿನ 9 ಜೋಡಿಗಳ ವಿವಾಹ ಗುರುವಾರ ನೆರವೇರಿತು ಎಂದು ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್ ಹೇಳಿದರು.

Click here

Click Here

Call us

Call us

Visit Now

Call us

Call us

ಅವರು ಹೇರಂಜಾಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ನಂದನವನದ ಎನ್. ಜಿ. ನರೇಂದ್ರ ಮತ್ತು ಹನೆಹಳ್ಳಿ ಜ್ಯೋತಿ ಅವರ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರದಿಂದ ವಧುವಿಗೆ ಮಂಗಳಸೂತ್ರ, ಸೀರೆ, ರವಿಕೆ ಕಣ, ವರನಿಗೆ ಪಂಚೆ, ಶಾಲು, ಇಬ್ಬರಿಗೂ ತಲಾ ರೂ 5 ಸಾವಿರ ಮೊತ್ತದ ಚೆಕ್, ಮಂಜುನಾಥ ಸ್ವಾಮಿಯ ಫೋಟೋ ಮತ್ತು ಉಡುಗೊರೆಯನ್ನು ನೀಡಲಾಗಿದೆ ಎಂದರು.

ಇನ್ನೂಳಿದ ಜೋಡಿಗಳಾದ ಹೇರೂರು ಕೊಣಾಲಿನ ದಿನಕರ ಗೌಡ-ಯಳಜಿತ ದುಗ್ಗನಗದ್ದೆ ಸುಜಾತಾ ವರನ ಮನೆಯಲ್ಲಿ, ಗೋಳಿಹೊಳೆ ಕೊಗಳಮಕ್ಕಿ ರವೀಂದ್ರ ಗೌಡ-ಹೇರೂರು ಕೊಣಾಲಿನ ನಾಗರತ್ನಾ ವಧುವಿನ ಮನೆಯಲ್ಲಿ, ಉಳ್ಳೂರು ಮೂಡುಮಠ ಗಣೇಶ-ಮುದೂರು ಕೊಳ್ಕೆಹೊಳೆ ಗೌರಿ ಮೆಕ್ಕೆ ವನದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಶಿರೂರು ಅಳ್ವೆಗದ್ದೆ ಗಣಪತಿ- ಇಲ್ಲಿನ ಗೂಡನಮನೆ ಪದ್ಮಾ ಅಳ್ವೆಗದ್ದೆ ಗಣಪತಿ ದೇವಸ್ಥಾನದಲ್ಲಿ, ಕೆರ್ಗಾಲು ಚರುಮಕ್ಕಿ ಸುಕುಮಾರ ದೇವಾಡಿಗ-ಕಿರಿಮಂಜೇಶ್ವರ ನಾಗೂರು ಅನಿತಾ ದೇವಾಡಿಗ ನಾಯ್ಕನಕಟ್ಟೆ ಗಣಪತಿ ದೇವಸ್ಥಾನದಲ್ಲಿ, ಮುದೂರು ತಾರಿಕೊಡ್ಲು ಸಂತೋಷ ಬೋವಿ-ಹಳ್ಳಿಹೊಳೆ ಅರೆಮನೆಕೊಡ್ಲು ಸುಜಾತಾ ವರನ ಮನೆಯಲ್ಲಿ, ಭಟ್ಕಳ ಬೆಳಕೆ ಭಾಸ್ಕರ ಅನಂತ-ಬಡಾಕೆರೆ ರಾಜೇಶ್ವರಿ ವರನ ಮನೆಯಲ್ಲಿ, ಹೊಸನಗರ ಗಂಗನಕೊಪ್ಪ ಶ್ರೀಕಾಂತ್-ಬಿಜೂರು ಬವುಳಾಡಿ ಪೂಜಾ ಕುಮಾರಿ ಉಪ್ಪುಂದ ಕಾಸನಾಡಿ ಜಟ್ಟಿಗೇಶ್ವರ ದೇವಸ್ಥಾನದಲ್ಲಿ ವಿವಾಹವಾದರು.

ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಶಶಿರೇಖಾ ಪಿ, ಕರಾವಳಿ ಪ್ರಾದೇಶಿಕ ವಿಭಾಗ ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ವಧುವರರ ಕುಟುಂಬದ ಸದಸ್ಯರು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ನರಸಿಂಹ ಹಳಗೇರಿ, ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ ದೇವಾಡಿಗ, ನಿವೃತ್ತ ಮುಖ್ಯೋಪಾಧ್ಯಾಯ ಮುಡೂರ ಅಂಬಾಗಿಲು ಇದ್ದರು.

Call us

Leave a Reply

Your email address will not be published. Required fields are marked *

three × five =