ಹಸಿವೆಯಿಂದ ಬಳಲುವ ಕೂಲಿ ಕಾರ್ಮಿಕರು, ನಿರ್ವಸಿತರಿಗೆ ದೇವಾಲಯಗಳಿಂದ ಊಟೋಪಚಾರ

Call us

Call us

Click here

Click Here

Call us

Call us

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೋರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ವಿಧಿಸಿರುವ ನಿರ್ಭಂದಗಳಿಂದಾಗಿ ಹಸಿವಿನಿಂದ ಬಳಲುತ್ತಿರುವ ಕೂಲಿ ಕಾರ್ಮಿಕರು ಮತ್ತು ನಿರಾಶ್ರಿತರಿಗೆ ಶೆಲ್ಟರ್ ರೂಂಗಳಲ್ಲಿ ಸೂಕ್ತ ವಸತಿ ಮತ್ತು ಊಟೋಪಚಾರ ವ್ಯವಸ್ಥೆಯನ್ನು ದೇವಾಲಯಗಳ ಮೂಲಕ ಒದಗಿಸಿಕೊಡಲು ಉಡುಪಿ ಜಿಲ್ಲಾಡಳಿತ ಸೂಚನೆ ನೀಡಿದೆ.

Call us

Call us

ವಸತಿ ಮತ್ತು ಊಟೋಪಚಾರ ವ್ಯವಸ್ಥೆ ಒದಗಿಸಲು ತಗುಲುವ ವೆಚ್ಚವನ್ನು, ಜಿಲ್ಲೆಯ ಧಾರ್ಮಿಕ ಧತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಲೂರು, ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ, ಅಂಬಲಪಾಡಿ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮಂದಾರ್ತಿ, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಡ್ಕೂರು, ಶ್ರೀ ಅನಂತ ಪದ್ಮನಾಭ ಮತ್ತು ಅರ್ಧ ನಾರೀಶ್ವರ ದೇವಸ್ಥಾನ ಹೆಬ್ರಿ ಈ ದೇವಾಲಯಗಳ ನಿಧಿಯಿಂದ ಭರಿಸಲು ಆಯಾಯಾ ತಾಲೂಕಿನ ಅವಶ್ಯಕತೆಗೆ ಸಂಬಂದಿಸಿದಂತೆ, ಸ್ಥಳೀಯ ತಹಸೀಲ್ದಾರ್‌ಗಳು, ಸಂಬಂದಿಸಿದ ದೇವಾಲಯಗಳ ಆಡಳಿತಾಧಿಕಾರಿ/ಕಾರ್ಯ ನಿರ್ವಹಣಾಧಿಕಾರಿ/ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು/ಆಡಳಿತ ಮೊಕ್ತೇಸರರಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯಾದ್ಯಂತ ಇರುವ ಎ ಗ್ರೇಡ್ ದೇವಾಲಯಗಳ ಮೂಲಕ ಅಗತ್ಯವಿರುವವರಿಗೆ ಊಟೋಪಚಾರ ವ್ಯವಸ್ಥೆ ಮಾಡುವಂತೆ ಮಾ.28ರಂದು ಸೂಚಿಸಿದ್ದರು.

Leave a Reply

Your email address will not be published. Required fields are marked *

17 + 17 =