ಮರೆಯಾದ ಕರಾವಳಿಯ ರಂಗ-ಸಾಹಿತ್ಯ ಕೊಂಡಿ ಜಿ. ಕೆ. ಐತಾಳ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಮೊನಚು ಬರಹಗಳಿಂದ ಸಾರಸ್ವತ ಲೋಕದಲ್ಲಿ ಹೆಸರಾಗಿದ್ದ ಹಿರಿಯ ಸಾಹಿತಿ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ಜಿ.ಕೆ. ಐತಾಳ್ (68) ಗುರುವಾರ ಕೋಟೇಶ್ವರದ ಸ್ವಗೃಹದಲ್ಲಿ ನಿಧನರಾದರು.

Call us

Call us

Visit Now

1951ನೇ ಜೂ.25ರಂದು ಜನಿಸಿದ್ದ ಅವರು ಕೋಟೇಶ್ವರ ಹಾಗೂ ಕುಂದಾಪುರದಲ್ಲಿ ಶಿಕ್ಷಣಾಭ್ಯಾಸ ಮುಗಿಸಿದ್ದರು. ನಂತರ ಕರ್ಣಾಟಕ ಬ್ಯಾಂಕ್ ಸೇರಿದ್ದ ಜಿ.ಗೋಪಾಲಕೃಷ್ಣ ಐತಾಳರು ವಿಜ್ಞಾನ ಪದವೀಧರರಾಗಿದ್ದರೂ ಕೂಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಅವರು ಮೊದಮೊದಲು ಸಾಮಾನ್ಯ ನಾಟಕ ವಿಮರ್ಶೆಗಳ ಮೂಲಕ ಹವ್ಯಾಸಿ ಬರಹಗಾರರಾಗಿ ಗುರುತಿಸಿಕೊಂಡಿದ್ದರು.

Click here

Call us

Call us

ಸಾಹಿತ್ಯ ಕ್ಷೇತ್ರದಲ್ಲಿನ ಆಸಕ್ತಿ, ರಂಗ ಚಟುವಟಿಕೆಯ ಮೇಲೆ ಅವರಿಗಿದ್ದ ಮೋಹ ಬಹು ಬೇಗನೆ ಅವರನ್ನು ವೃತ್ತಿಪರ ಬರಹಗಾರರನ್ನಾಗಿಸಿತ್ತು. ಜಿ.ಕೆ. ಐತಾಳರ ಬರಹಗಳಲ್ಲಿನ ವಾಕ್ಯಗಳು ಕ್ಲಿಷ್ಟವಾಗಿದ್ದರೂ, ಓದುಗರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಿದ್ದವು. ಈ ಕಾರಣಕ್ಕಾಗಿಯೇ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಅವರದೇ ಆದ ಅಭಿಮಾನಿ ಬಳಗವಿತ್ತು. ‘ನವಭಾರತ’ ಪತ್ರಿಕೆಯಲ್ಲಿ ‘ಕಡಲ ತಡಿಯ ಕಲಾವಿದರು’ ಎನ್ನುವ ಬರಹದ ಮೂಲಕ ಎಲೆಮರೆಯ ಕಲಾವಿದರನ್ನು ಸಮಾಜದ ಮುಖ್ಯಭೂಮಿಕೆಯಲ್ಲಿ ಕರೆ ತರುವ ಪ್ರಯತ್ನ ಮಾಡಿದ್ದರು.

ರಂಗಭೂಮಿ ಚಟುವಟಿಕೆಗಳಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದ ಅವರ ರಂಗಾಸಕ್ತಿಯನ್ನು ಗಮನಿಸಿದ್ದ ಜಿಲ್ಲೆಯ ಪ್ರಸಿದ್ಧ ರಂಗಾಸಕ್ತ ಸಂಸ್ಥೆಗಳು ತಮ್ಮಲ್ಲಿನ ರಂಗ ಚಟುವಟಿಕೆಯ ಮುಖ್ಯ ಭೂಮಿಕೆಯಲ್ಲಿ ಐತಾಳರನ್ನು ಗುರುತಿಸುತ್ತಿದ್ದರು. ಉಡುಪಿಯ ರಂಗಭೂಮಿ, ಬೈಂದೂರಿನ ಲಾವಣ್ಯ, ಕೋಟ ಮಿತ್ರ ಮಂಡಳಿ ಸೇರಿದಂತೆ ಜಿಲ್ಲೆಯ ಪ್ರಸಿದ್ಧ ಸಂಸ್ಥೆಗಳು ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿರುತ್ತಿದ್ದರು.

ಅವರ ನಾಟಕ ವಿಮರ್ಶಾ ಲೇಖನಗಳು ರಾಜ್ಯದ ಪ್ರಮುಖ ದಿನಪತ್ರಿಕೆ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಸಮರ್ಪಣ’, ‘ಕಾಟುಮೂಲೆ ಎಸ್ಟೇಟ್’, ‘ಕುಜ’, ‘ಮಿನುಗು ಮಿನುಗೆಲೆ ನಕ್ಷತ್ರ’, ‘ಮೇರೆ ಭಾರತ್ ಮಹಾನ್’ ಕಾದಂಬರಿಗಳು ಪ್ರಕಟವಾಗಿದ್ದವು.

ಅನಕೃ ಅವರ ನೆನಪಿನಲ್ಲಿ ಕಾದಂಬರಿಕಾರರಿಗಾಗಿ ಸ್ಥಾಪಿಸಿದ ಪ್ರಶಸ್ತಿಯನ್ನು ಮೊಟ್ಟ ಮೊದಲ ಬಾರಿ ಪಡೆದ ಹಿರಿಮೆ ಅವರದ್ದಾಗಿತ್ತು.

Leave a Reply

Your email address will not be published. Required fields are marked *

3 × 3 =