‘ಸುರಭಿ ಸಾರ’ ಉತ್ಪನ್ನಕ್ಕೆ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ 2021

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶೀ ತಳಿ ಗೋಮೂತ್ರ ಪೌಡರ್ ಕ್ಯಾಪ್ಸೂಲ್ಸ್ ‘ಸುರಭಿ ಸಾರ’ ಉತ್ಪನ್ನಕ್ಕೆ 2021ನೇ ಸಾಲಿನ ಟೈಮ್ಸ್ ಬಿಸಿನೆಸ್ ಅವಾರ್ಡ್ಸ್ ದೊರೆತಿದೆ. ಗಜಾನನ ಅಗ್ರೊ ಫುಡ್ ಇಂಡಸ್ಟ್ರೀಸ್ ಸಂಸ್ಥೆಯ ಉತ್ಪನ್ನವಾದ ‘ಸುರಭಿ ಸಾರ’ಕ್ಕೆ ಎಕ್ಸಲೆಂಟ್ ಹೆಲ್ತ್ ಸಪ್ಲಿಮೆಂಟ್ – ಕನ್ಸೂಮರ್ ಚಾಯ್ಸ್ ಅವಾರ್ಡ್ ವಿಭಾಗದಲ್ಲಿ ಈ ಗೌರವ ದೊರೆತಿದೆ.

Click Here

Call us

Call us

ಮಂಗಳೂರಿನ ಹೋಟೆಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ದಿ ಟೈಮ್ಸ್ ಗ್ರೂಪ್ ಸಂಸ್ಥೆಯ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಸುರಭಿಸಾರ ಉತ್ಪನ್ನದ ತಯಾರಕರಾದ ಬಿ. ರಾಘವೇಂದ್ರ ಹೆಮ್ಮಣ್ಣ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

Click here

Click Here

Call us

Visit Now

ಪ್ರಶಸ್ತಿ ದೊರೆತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹೆಮ್ಮಣ್ಣ ದಂಪತಿಗಳು, “ಮಾನವ ಕುಲಕ್ಕೆ ವರದಾನವಾದ ಈ ಉತ್ಪನ್ನದ ಆವಿಷ್ಕಾರಕ್ಕೆ ಕಾರಣಿಕರ್ತರಾಗಿರುವ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳಿಗೆ ಈ ಗೌರವವನ್ನು ಸಮರ್ಪಿಸುತ್ತಿದ್ದೇವೆ. ನಮ್ಮೆಲ್ಲಾ ಗ್ರಾಹಕರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದಿದ್ದಾರೆ.

Leave a Reply

Your email address will not be published. Required fields are marked *

3 + four =