ಸಂದೀಪ್ ಶೆಟ್ಟಿ ಅವರ ‘ಗಂಡ್ ಹಡಿ ಗಂಡ್’ ಕುಂದಗನ್ನಡ ಆಲ್ಬಂ ಬಿಡುಗಡೆಗೆ ಸಿದ್ಧ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯುವ ಸಾಹಿತಿ, ಹಾಡುಗಾರ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರ ಚೊಚ್ಚಲ ಕುಂದಾಪ್ರ ಕನ್ನಡದ ‘ಗಂಡ್ ಹಡಿ ಗಂಡ್’ ಆಲ್ಬಂ ಸಾಂಗ್ ಬಿಡುಗಡೆಗೆ ಸಿದ್ಧಗೊಂಡಿದ್ದು, ಎರಡು ಹಾಡುಗಳುಳ್ಳ ಆಲ್ಬಂ ನ.೨೫ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ.

Call us

Call us

ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರೇ ಸಾಹಿತ್ಯ ಬರೆದು ಹಾಡಿರುವ ಕುಂದಾಪ್ರ ಕನ್ನಡದ ಹಾಡು ಅದ್ದೂರಿ ಸಂಗೀತ ಸಂಯೋಜನೆಯಲ್ಲಿ ಮೂಡಿಬರಲಿದ್ದು ಕುಂದಗನ್ನಡಿಗರ ಮನಗೆಲ್ಲಲಿದೆ. ಅಲ್ವಿನ್ ಬ್ರೂನೊ ಹಾಗೂ ವರ್ಣ ಬ್ರದರ್ಸ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರುಕ್ಮಿಣಿ ಸುರೇಶ್ ನಿರ್ಮಾಪಕರಾಗಿದ್ದಾರೆ.

ಹುಟ್ಟೂರಿನ ಅಭಿಮಾನದಿಂದ ಕುಂದಗನ್ನಡದಲ್ಲಿಯೇ ಹಾಡು ರಚಿಸಿ, ಧ್ವನಿ ನೀಡಿರುವ ಸಂದೀಪ್ ಅವರ ಪ್ರಯತ್ನಕ್ಕೆ ಕುಂದಾಪ್ರ ಕನ್ನಡದ ವಾಟ್ಸಪ್ ಹೀರೋ ಮನು ಹಂದಾಡಿ ಸೇರಿದಂತೆ ಹಲವರು ಸಹಕಾರವಿತ್ತಿದ್ದು, ಎರಡೂ ಹಾಡುಗಳೂ ಅತ್ಯುತ್ತಮವಾಗಿ ಮೂಡಿಬಂದಿವೆ.

Call us

Call us

Gand hadi gandi releasing on nov 25

Leave a Reply

Your email address will not be published. Required fields are marked *

twelve + five =