ರೇಡಿಯೋ ಸಿಟಿ ಸೂಪರ್ ಸಿಂಗಿಂಗ್ ಸೀಸನ್ -8 ವಿಜೇತ ಗಣೇಶ ಕಾರಂತ್

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೇಡಿಯೋ ಸಿಟಿ ಎಫ್.ಎಂ ಬೆಂಗಳೂರಿನ ‘ಲವಿಟ್’ ಸಂಸ್ಥೆಯ ಸಹಯೋಗದೊಂದಿಗೆ ನಡೆಸಿದ  ‘ರೇಡಿಯೋ ಸಿಟಿ ಸೂಪರ್ ಸಿಂಗಿಂಗ್ ಸೀಸನ್ – 8’ ಸ್ಪರ್ಧೆಯಲ್ಲಿ ತಾಲೂಕಿನ ಕಂಬದಕೋಣೆ ಗಣೇಶ ಕಾರಂತ ವಿಜೇತರಾಗಿದ್ದಾರೆ.

Call us

Call us

ರಾಷ್ಟ್ರದ ಪ್ರಮುಖ 15 ನಗರಗಳಲ್ಲಿ ಸ್ಪರ್ಧೆ ನಡೆದಿದ್ದು, ಒಟ್ಟು 1.70 ಲಕ್ಷ ಯುವ ಗಾಯಕರು ಭಾಗವಹಿಸಿದ್ದರು. ಬೆಂಗಳೂರು ನಗರದಲ್ಲಿ ನಡೆದ ಸ್ಪರ್ಧೆಯಲ್ಲಿ 24,500 ಮಂದಿ ಪಾಲ್ಗೊಂಡಿದ್ದರು. ಅಂತಿಮ ಸುತ್ತಿನಲ್ಲಿ ಆಯ್ಕೆಯಾದ 6 ಪ್ರತಿಭಾನ್ವಿತರಲ್ಲಿ ಗಣೇಶ್ ಕಾರಂತ ಅವರು ‘ಸಂತೋಷಕ್ಕೆ ಹಾಡು ಸಂತೋಷಕ್ಕೆ’ ಎಂಬ ಗೀತೆಯನ್ನು ಹಾಡಿ 1ಲಕ್ಷ ರು. ನಗದು ಪುರಸ್ಕಾರದೊಂದಿಗೆ ವಿಜೇತರಾದರು. ಅಲ್ಲದೇ ಖ್ಯಾತ ಚಲನಚಿತ್ರ ನಟ-ನಿರ್ದೇಶಕ ರಮೇಶ್ ಅರವಿಂದ ಅವರ 100ನೇ ಚಲನಚಿತ್ರ ‘ಪುಷ್ಪಕ ವಿಮಾನ’ದಲ್ಲಿ ಹಾಡುವ ಅವಕಾಶವನ್ನೂ ಪಡೆದುಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಗಣೇಶ್ ಕಾರಂತ್ ಬಿಎಸ್‌ಎನ್‌ಎಲ್ ಮಂಗಳೂರು ಜಿಲ್ಲಾ ಉಪಮಹಾಪ್ರಬಂಧಕ ಕೆ.ಶಿವರಾಮ ಕಾರಂತ ಹಾಗೂ ಯಶೋದ ಅವರ ಪುತ್ರರಾಗಿದ್ದು, ‘ಎಮ್‌ಪಸಿಸ್’ ಸಾಪ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.

Leave a Reply

Your email address will not be published. Required fields are marked *

fifteen − three =