ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮಂಗಳವಾರ ಮೀನುಗಾರರು ಸಾಮೂಹಿಕವಾಗಿ ಸಮುದ್ರಪೂಜೆ ನೆರವೇರಿಸಿ ಸಮೃದ್ಧ ಮತ್ಸ್ಯಸಂಪತ್ತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಗಂಗೊಳ್ಳಿಯ ಬಂದರಿನ ಅಳಿವೆ ಪ್ರದೇಶದಲ್ಲಿ ಗಂಗೊಳ್ಳಿಯ ಆಳ ಸಮುದ್ರ ಮೀನುಗಾರರ ಯೂನಿಯನ್, ಪರ್ಸಿನ್ ಬೋಟ್ ಯೂನಿಯನ್ ಹಾಗೂ ಟ್ರಾಲ್ ಬೋಟ್ ಯೂನಿಯನ್ ಆಶ್ರಯದಲ್ಲಿ ವೇದಮೂರ್ತಿ ಜಿ.ವಿಠಲದಾಸ ಭಟ್ ಮತ್ತು ವೇದಮೂರ್ತಿ ಜಿ.ಅನಂತಕೃಷ್ಣ ಭಟ್ ಪೌರೋಹಿತ್ಯದಲ್ಲಿ ಆಳ ಸಮುದ್ರ ಮೀನುಗಾರರ ಯೂನಿಯನ್ನ ಸೌಪರ್ಣಿಕ ಬಸವ ಖಾರ್ವಿ, ಪರ್ಸಿನ್ ಬೋಟ್ ಯೂನಿಯನ್ನ ಪ್ರಭಾಕರ ಖಾರ್ವಿ ಮತ್ತು ಟ್ರಾಲ್ ಬೋಟ್ ಯೂನಿಯನ್ನ ಬಿ.ಎಂ.ಗಣೇಶ
ನೇತೃತ್ವದಲ್ಲಿ ಸಮಸ್ತ ಮೀನುಗಾರರು ಸಮುದ್ರಪೂಜೆ ನಡೆಸಿ, ಸಮುದ್ರರಾಜನಿಗೆ ಬಾಗಿನ ಅರ್ಪಿಸಿ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಎಲ್ಲಾ ಮೀನುಗಾರರ ಕುಟುಂಬಗಳು ಸುಖ ಶಾಂತಿ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಮತ್ತು ಈ ಮೀನುಗಾರಿಕಾ ಋತುವಿನಲ್ಲಿ ಸಮೃದ್ಧ ಮತ್ಸ್ಯ ಸಂಪತ್ತನ್ನು ಶ್ರೀದೇವರು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಗಂಗೊಳ್ಳಿ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ರಮೇಶ ಕುಂದರ್, ಮೀನುಗಾರರ ಮುಖಂಡರಾದ ಕೋಡಿ ಶೀನ, ವಿಕ್ರಮ್, ಸಂಜೀವ ಶ್ರೀಯಾನ್ ಕೋಟ, ಎಂ.ರಾಮನಾಥ ಪೈ, ನಾರಾಯಣ ಖಾರ್ವಿ, ಮಾಧವ ವೈ.ಕೆ., ಪಾಂಡುರಂಗ ಖಾರ್ವಿ ಗಂಗೊಳ್ಳಿ, ಹೂವ ಖಾರ್ವಿ, ಗಣಪತಿ ಖಾರ್ವಿ, ಚಂದ್ರ ಖಾರ್ವಿ, ಶೇಖರ, ಮಂಜುನಾಥ ಖಾರ್ವಿ ಗಂಗೊಳ್ಳಿ, ಸುಬ್ಬ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.