ದ್ವಿತೀಯ ಪಿಯುಸಿಯಲ್ಲಿ ಗಂಗೊಳ್ಳಿಯ ರಾಧಿಕಾ ಪೈ ರಾಜ್ಯಕ್ಕೆ ಪ್ರಥಮ

Click Here

Call us

Call us

ದ್ವಿತೀಯ ಪಿಯುಸಿಯಲ್ಲಿ ಎಸ್.ವಿ ಕಾಲೇಜಿನ ವಿದ್ಯಾರ್ಥಿನಿಯ ಸಾಧನೆ

Call us

Call us

Click Here

Visit Now

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಾಧಿಕಾ ಪೈ ಅವರು ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ೫೯೬ ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾಳೆ.

Click here

Click Here

Call us

Call us

ಗಂಗೊಳ್ಳಿಯ ಪೋಸ್ಟ್ ಆಫೀಸಿನ ಬಳಿಯ ಉದ್ಯಮಿ ಎಂ.ಮಾಧವ ವಿ.ಪೈ ಹಾಗೂ ಎಂ.ಮಾಯಾ ಎಂ.ಪೈ ಅವರ ಏಕೈಕ ಪುತ್ರಿಯಾಗಿರುವ ಈಕೆ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಂಸ್ಕೃತ-೯೮, ಇಂಗ್ಲೀಷ್-೯೮, ಭೌತಶಾಸ್ತ್ರ-೧೦೦, ರಸಾಯನಶಾಸ್ತ್ರ-೧೦೦, ಜೀವಶಾಸ್ತ್ರ-೧೦೦, ಲೆಕ್ಕಶಾಸ್ತ್ರ-೧೦೦ ಅಂಕ ಗಳಿಸಿ ಅದ್ಭುತ ಸಾಧನೆ ಮಾಡುವ ಮೂಲಕ ರಾಜ್ಯದಲ್ಲಿ ಗಂಗೊಳ್ಳಿ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ರಾಧಿಕಾ ಪೈ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು, ಸರಸ್ವತಿ ವಿದ್ಯಾಸಂಸ್ಥೆಗಳ ಅಧ್ಯಾಪಕರು, ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

two + nineteen =