ಸ್ವಾಮಿ ಸತ್ಯಸ್ವರೂಪಾನಂದರ ಗೀತಾ ಮಾಧುರ್ಯ ಕೃತಿ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಳಜಿತ ಶ್ರೀ ರಾಮಕೃಷ್ಣ ಕುಟೀರದ ಸ್ವಾಮಿ ಸತ್ಯಸ್ವರೂಪಾನಂದ ಅವರ ಗೀತಾ ಮಾಧುರ್ಯ ಕೃತಿ ಶನಿವಾರ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.

ಶ್ರೀಮದ್ಭಗವದ್ದೀತಾ ಜಯಂತಿ ಆಚರಣಾ ಸಮಿತಿ ಪ್ರಧಾನ ಸಂಚಾಲಕ ಬಿ. ರಾಮಕೃಷ್ಣ ಶೇರುಗಾರ್ ಪುಸ್ತಕವನ್ನು ಬಿಡುಗಡೆಗೊಳಿಸಿ ಬಳಿಕ ಮಾತನಾಡಿ ಭಗವದ್ಗೀತೆಯ ಅರ್ಥವನ್ನು ಅರಿತು ಮತ್ತೆ ಮನನ ಮಾಡಿಕೊಳ್ಳುವವರಿಗೆ ಈ ಕೃತಿ ಅತ್ಯುತ್ತಮ ಆಯ್ಕೆಯಾಗಿದೆ. ಸತ್ಸಂಗಗಳ ಮೂಲಕ ಭಗವದ್ಗೀತೆಯ ಸಾರವನ್ನು ಭೋಧಿಸಿ ಅದರ ಮಹತ್ವವನ್ನು ಪ್ರಚುರ ಪಡಿಸುತ್ತಿರುವ ಸ್ವಾಮಿ ಸತ್ಯಸ್ವರೂಪಾನಂದರು ಈ ವರೆಗೆ ಹಲವು ಪುಸ್ತಕಗಳನ್ನು ಬರೆದು ಪ್ರಕಟಿಸಿರುವುದು ಶ್ಲಾಘನಾರ್ಹ ಎಂದರು.

ಈ ಸಂದರ್ಭ ಕೃತಿಕಾರರಾದ ಸ್ವಾಮಿ ಸತ್ಯಸ್ವರೂಪಾನಂದರು, ಯಶೋದಾ ಎಮ್. ಅಡಿಗ ನೈಕಂಬ್ಳಿ, ಶಿಕ್ಷಕ ಹಮನುಂತ ಜಿ. ಮಯ್ಯಾಡಿ, ಶ್ರೀ ರಾಮಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷೆ ಸುಂದರಿ ಗಣಪತಿ ಇದ್ದರು. ಉಪನ್ಯಾಸಕ ಕೇಶವ ನಾಯಕ್ ಬಿಜೂರು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

18 − twelve =