ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್ ಉಡುಪಿ: ಗ್ಲುಕೊಮೀಟರ್ ಉಚಿತ ಕೊಡುಗೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ ಮಾ.8:
ವೈದ್ಯಕೀಯ ಪರಿಕರಗಳ ಪ್ರಸಿದ್ಧ ಮಳಿಗೆ ಉಡುಪಿಯ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ನಲ್ಲಿ ಮತ್ತೆ ಶುಗರ್ ಟೆಸ್ಟಿಂಗ್ ಯಂತ್ರವಾದ ಗ್ಲುಕೊಮೀಟರ್ ಉಚಿತ ಕೊಡುಗೆಯ ಬಂಪರ್ ಕೊಡುಗೆ ನಡೆಯುತ್ತಿದೆ. ಈ ಹಿಂದೆ ಸಂಸ್ಥೆಯ ವತಿಯಿಂದ ಹಿರಿಯ ನಾಗರಿಕರಿಗೆ ಗ್ಲುಕೊಮೀಟರ್ ಉಚಿತ ಕೊಡುಗೆ ನೀಡಲಾಗಿದ್ದು, ಇದೀಗ ಮತ್ತೆ ನಾಗರಿಕರ ಒತ್ತಾಯದ ಮೇರೆಗೆ 40 ವರ್ಷ ಮೇಲ್ಪಟ್ಟ ಮಧುಮೇಹ ರೋಗಿಗಳಿಗೆ ಮತ್ತು ಎಲ್ಲಾ ಹಿರಿಯ ನಾಗರಿಕರಿಗೆ ಶುಗರ್ ಟೆಸ್ಟಿಂಗ್ ಯಂತ್ರವಾದ ಗ್ಲುಕೊಮೀಟರ್ ನ್ನು ಉಚಿತವಾಗಿ ನೀಡಲಾಗುತ್ತಿದೆ.

Call us

Call us

ನಾಗರಿಕರು ರೂ.200 ಬೆಲೆ ಬಾಳುವ 10 ಟೆಸ್ಟಿಂಗ್ ಸ್ವೀಪ್ ಕೊಂಡಲ್ಲಿ ಒಂದು ಗ್ಲುಕೊಮೀಟರ್ ಸೆಟ್ ಉಚಿತವಾಗಿ ದೊರೆಯಲಿದೆ. ಈ ಕೊಡುಗೆ ಮಾ.20 ರವರೆಗೆ ಮಾತ್ರ ಲಭ್ಯವಿದ್ದು, ಅರ್ಹ ನಾಗರಿಕರು ತಮ್ಮ ಆಧಾರ್ ಕಾರ್ಡ್ ತೋರಿಸಿ ಈ ಕೊಡುಗೆಯ ಸದುಪಯೋಗ ಪಡೆಯಬಹುದಾಗಿದೆ. ಆದರೆ ಈ ಮೊದಲು ಸಂಸ್ಥೆಯಿಂದ ಗ್ಲುಕೊಮೀಟರ್ ಉಚಿತವಾಗಿ ಪಡೆದುಕೊಂಡವರಿಗೆ ಅವಕಾಶ ಇರುವುದಿಲ್ಲ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

Call us

Call us

Leave a Reply

Your email address will not be published. Required fields are marked *

18 + 15 =