ಸಮನ್ವಿ ಸಾವಿನ ಕಾರಣ ಬಯಲು. ಚಾಕಲೇಟ್‌ನಿಂದಲ್ಲ, ಹೃದಯಾಘಾತದಿಂದ ಬಾಲಕಿ ಸಾವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ06:
ಜುಲೈ 20ರಂದು ಮೃತಪಟ್ಟಿದ್ದ ಉಪ್ಪುಂದ ಖಾಸಗಿ ಶಾಲೆಯೊಂದರ ಎರಡನೇ ತರಗತಿ ವಿದ್ಯಾರ್ಥಿನಿ ಸಮನ್ವಿಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆಯ ಸಾವಿನ ನೈಜ ಕಾರಣ ಬಯಲಾಗಿದೆ. ಹೃದಯಾಘಾತದಿಂದ ಬಾಲಕಿ ಮೃತಪಟ್ಟಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Call us

Call us

ಬಿಜೂರು ಗ್ರಾಮದ ಗಂಟಿಹೊಳೆ ಕೊಚ್ಲುಗದ್ದೆ ನಿವಾಸಿ ಸುಪ್ರಿತಾ ಪೂಜಾರಿ ಎಂಬವರ ಪುತ್ರಿ ಸಮನ್ವಿ, ಜು.20ರಂದು ಮನೆಯಿಂದ ತಾಯಿಯೊಂದಿಗೆ ಶಾಲಾ ಬಸ್ ಏರಲು ತೆರಳುತ್ತಿದ್ದ ಸಂದರ್ಭ ಕುಸಿದು ಬಿದ್ದಿದ್ದಳು. ತಕ್ಷಣ ಬೈಂದೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಬಾಲಕಿ ಮೃತಪಟ್ಟಿರುವುದನ್ನು ತಿಳಿಸಿದ್ದರು.

Call us

Call us

ಚಾಕಲೇಟ್ ಕವರ್ ಸಹಿತ ತಿಂದು ಗಂಟಲ್ಲಿ ಸಿಕ್ಕಿಕೊಂಡು ಉಸಿರಾಟದ ಸಮಸ್ಯೆಯಿಂದ ಸಮನ್ವಿ ಮೃತಪಟ್ಟಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿತ್ತು. ಈ ಬಗ್ಗೆ ಕುಂದಾಪ್ರ ಡಾಟ್ ಕಾಂ ನಿಖರವಾದ ವರದಿ ಪ್ರಕಟಿಸಿ, ಮರಣೋತ್ತರ ಪರಿಕ್ಷೇಯ ವರದಿ ಬಳಿಕವಷ್ಟೇ ಸತ್ಯ ತಿಳಿಯಲಿದೆ ಎಂದು ತಿಳಿಸಿತ್ತು. ವೈದಕೀಯ ವರದಿ ನಂತರ ಸಮನ್ವಿ ಸಾವಿಗೆ ನಿಜವಾದ ಕಾರಣ ಬಯಲಾಗಿದೆ.

ಇದನ್ನೂ ಓದಿ:
ಗಂಟಿಹೊಳೆ: ಶಾಲೆಗೆ ಹೊರಟಿದ್ದ ಬಾಲಕಿ‌ ಕುಸಿದುಬಿದ್ದು ಸಾವುhttps://kundapraa.com/?p=60749 .

Leave a Reply

Your email address will not be published. Required fields are marked *

5 + twenty =