ಕುಂದಾಪುರ: ರಕ್ಷಾಬಂಧನಕ್ಕೆಂದು ಊರಿಗೆ ಬಂದ ಅಣ್ಣನಿಂದಲೇ ತಂಗಿಯ ಕಿಡ್ನಾಪ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಕ್ಷಾಬಂಧನವೆಂಬುದು ಅಣ್ಣ ತಂಗಿಯರ ಭ್ರಾತೃತ್ವದ ಭಾವನೆಯನ್ನು ಗಟ್ಟಿಗೊಳಿಸುವ ಹಬ್ಬ. ಆದರೆ ಇಲ್ಲೋಬ್ಬ ಆಸಾಮಿ ರಕ್ಷಾಬಂಧನಕ್ಕೆಂದು ಊರಿಗೆ ಬಂದು ತಂಗಿಯನ್ನೆ ಕಿಡ್ನಾಪ್ ಮಾಡಿ ಪರಾರಿಯಾಗಿದ್ದು ಸಂಬಂಧಗಳ ಅರ್ಥವನ್ನೇ ತಲೆ ಕೆಳಗೆ ಮಾಡಿದ್ದಾನೆ. ಕುಂದಾಪುರ ತಾಲೂಕಿನ ಕಟ್‌ಬೆಲ್ತೂರು ಎಂಬಲ್ಲಿ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿ  ಶುಕ್ರವಾರ ಬೆಳಿಗ್ಗೆಯಿಂದ ಕಾಣೆಯಾಗಿದ್ದು ಮಗಳನ್ನು ಹುಡುಕಿಕೊಡುವಂತೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

Call us

Call us

Call us

ಕಟ್‌ಬೆಲ್ತೂರಿನಲ್ಲಿ ನೇಪಾಳ ಮೂಲದ ಭರತರಾಜ್ ಮತ್ತು ಸೋನಾ ದಂಪತಿಗಳು ತಮ್ಮ ಮಕ್ಕಳು ಹಾಗೂ ಸಂಬಂಧಿಗಳೊಂದಿಗೆ ಕೆಲವು ಸಮಯದಿಂದ ವಾಸವಾಗಿದ್ದಾರೆ. ರಕ್ಷಾಬಂಧನ ಹಬ್ಬಕ್ಕಾಗಿ ತಮಿಳುನಾಡಿನಿಂದ ಇಲ್ಲಿಗೆ ಬಂದಿದ್ದ ಭರತರಾಜ್ ಅವರ ಸ್ವಂತ ಅಣ್ಣನ ಮಗ ಬಿಕ್ರಮ್ ಮತ್ತು ಆತನ ಸ್ನೇಹಿತ ಸುನಿಲ್ ಇಬ್ಬರೂ ಮನೆಯಲ್ಲಿ ಹಬ್ಬವನ್ನು ಚನ್ನಾಗಿ ಆಚರಣೆ ಮಾಡಿದ್ದರು. ಶುಕ್ರವಾರ ಚಿಕ್ಕಪ್ಪನ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ತಮಿಳುನಾಡಿಗೆ ಕಿಡ್ನಾಪ್ ಮಾಡಿ ಕರೆದೊಯ್ದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ.

Call us

Call us

ಶಾಲೆಗೆ ಮಗಳು ಹೋಲಿರಲಿಲ್ಲ:
ತನ್ನ ಅಣ್ಣನ ಜೊತೆ ಶಾಲೆಗೆ ಹೋದ ಹುಡುಗಿ ಸಂಜೆಯಾದರು ಮನೆಗೆ ಬಾರದೆ ಇರುದನ್ನು ಗಮನಿಸಿದ ತಂದೆ ಶಾಲೆಗೆ ಹೋಗಿ ವಿಚಾರಿಸಿದ್ದಾರೆ. ಆದರೆ ಶಿಕ್ಷಕರು ಅವಳು ಇವತ್ತು ಶಾಲೆಗೆ ಬರಲಿಲ್ಲ ಎಂದು ಹೇಳಿದ್ದರಿಂದ ಪೊಷಕರು ಗಾಬರಿಗೊಂಡಿದ್ದಾರೆ. ಕೂಡಲೇ ಬಿಕ್ರಮ್‌ಗೆ ಕರೆ ಮಾಡಿದಾಗ ಮಗಳು ಆತನ ಜೊತೆಗಿದ್ದು ಮಾತನಾಡಿದ್ದಾಳೆನ್ನಲಾಗಿದೆ. ಈ ಬಗ್ಗೆ ಪೋಷಕರು ಕುಂದಾಪುರ ಪೊಲೀಸರಿಗೆ ದೂರು ನೀಡಿದ್ದು ಆರೋಪಿಗಳನ್ನು ಬಂಧಿಸಿ ತಮ್ಮ ಮಗಳನ್ನು ಕರೆತರುವಂತೆ ಮನವಿ ಮಾಡಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Leave a Reply

Your email address will not be published. Required fields are marked *

11 + nineteen =