ದೀಪಾವಳಿಗೆ ದೇಸಿ ಹಣತೆ. ಪಂಚಗವ್ಯದಿಂದ ತಯಾರಾದ ಗೋ-ದೀಪ

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ:
ಭಾರತೀಯ ಸಂಸ್ಕೃತಿಯಲ್ಲಿ ದೀಪಗಳಿಗೆ ವಿಶೇಷ ಪ್ರಾಧಾನ್ಯತೆ. ವೈವಿಧ್ಯಮಯ ದೀಪಗಳು ದೀಪಾವಳಿಯ ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ. ಅಂತಹ ಬಣ್ಣ ಬಣ್ಣದ ಹಣತೆಗಳನ್ನು ಪಂಚಗವ್ಯದಿಂದ ತಯಾರಿಸಿ ಗ್ರಾಹಕರಿಗೆ ತಲುಪಿಸುವ ಕೈಂಕರ್ಯಕ್ಕೆ ಬೀಜಾಡಿಯ ಕಪಿಲೆ ಗೋ ಸಮೃದ್ಧಿ ಟ್ರಸ್ಟ್ ಮುಂದಾಗಿದೆ.

Call us

Call us

ಗೋಮಯ, ತುಪ್ಪ, ಮೊಸರು, ಹಾಲು, ಜೇಡಿಮಣ್ಣು ಮತ್ತು ಅರಿಶಿನವನ್ನು ಸೇರಿಸಿ ಗೋ-ದೀಪವನ್ನು ತಯಾರು ಮಾಡಲಾಗುತ್ತಿದೆ. ದೀಪವನ್ನು ಹಚ್ಚಿಗಾಗ ಹೋಮ ಹವನ ಮಾಡಿದ ರೀತಿಯಲ್ಲಿ ಅನುಭವದ ಜತೆಗೆ ಸುವಾಸನೆ ಬರುತ್ತದೆ. ಇದರಿಂದ ಮನಸ್ಸಿನಗೆ ನೆಮ್ಮದಿ ಮತ್ತು ಖುಷಿ ನೀಡುತ್ತದೆ. ಈ ದೀಪದ ಬಳಕೆಯ ನಂತರ ದೀಪದ ಬೂದಿಯು ಗೊಬ್ಬರವಾಗಿ ಉಪಯೋಗವಾಗಲಿದೆ. 12 ಹಣತೆಗಳಿರುವ ಒಂದು ಪ್ಯಾಕೇಟ್‌ಗೆ 70 ರೂ. ಬೆಲೆ ನಿಗದಿಪಡಿಸಲಾಗಿದೆ.

Call us

Call us

ಈಗ ಮಾರುಕಟ್ಟೆಯಲ್ಲಿರುವ ಸಿರಾಮಿಕ್ ದೀಪಗಳಿಂದ ಪರಿಸರ ಮಾಲಿನ್ಯದ ಜೊತೆಗೆ ಮಾನವ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಇವೆಲ್ಲವನ್ನೂ ತಡೆಗಟ್ಟುವ ಸಲುವಾಗಿ ಗೋಶಾಲೆಯಲ್ಲಿ ವಿವಿಧ ರೀತಿಯ ಪ್ರಾಕೃತಿಕ ಬಣ್ಣಗಳಿಂದ ತಯಾರಿಸಿದ ಈ ಗೋ ದೀಪವು ಪರಿಸರ ಪೂರಕವಾಗಿದೆ. ಇದರಿಂದ ಸ್ಥಳೀಯ ಮಾರಾಟಗಾರರಿಗೆ ಲಾಭದ ಜೊತೆ ಪರಿಸರ ಮಾಲಿನ್ಯವನ್ನು ತಡೆಯುವ ಮೂಲಕ ಪ್ರಾಣಿ ಮತ್ತು ಪಕ್ಷಿಗಳಿಗೂ ಅನುಕೂಲವಾಗಲಿದೆ.

ಆಧ್ಯಾತ್ಮಿಕ ಮತ್ತು ಸ್ವಚ್ಚ ಭಾರತ ದೃಷ್ಟಿಯಿಂದಲೂ ಗೋ ದೀಪವು ಉಪಯೋಗವಾಗಲಿದೆ. ಈ ದೀಪವನ್ನು ವ್ಯವಹಾರದ ದೃಷ್ಟಿಯಿಂದ ಮಾಡುತ್ತಿಲ್ಲ. ಬದಲಾಗಿ ಗೋಮಾತೆ ಹಾಗೂ ಗೋಶಾಲೆ ಪೋಷಿಸುವ ದೃಷ್ಟಿಯಿಂದ ಸ್ವದೇಶಿ ಕಲ್ಪನೆಯಲ್ಲಿ ತಯಾರಿಸಲಾಗುತ್ತಿದೆ. – ಕುಮಾರ್ ಕಾಂಚನ್, ಸಂಚಾಲಕರು ಕಪಿಲೆ ಗೋ ಸಮೃದ್ಧಿ ಟ್ರಸ್ಟ್ ಬೀಜಾಡಿ

Kapile Go Samruddhi Trust Beejady

ಚಿತ್ರಗಳು: ಐಶ್ವರ್ಯ ಬೀಜಾಡಿ

Leave a Reply

Your email address will not be published. Required fields are marked *

1 + seven =