ಗೋಳಿಯಂಗಡಿ: ಯುವತಿಯನ್ನು ಅತ್ಯಾಚಾರಗೈದು ಕೊಲೆ. ಅನುಮಾನಾಸ್ಪದ ವ್ಯಕ್ತಿಯ ಬಂಧನ

Call us

ಕುಂದಾಪುರ: ತಾಲೂಕಿನ ಗೋಳಿಯಂಗಡಿಯ ಕಾರಿಕೋಡ್ಲು ಎಂಬಲ್ಲಿ ಯುವತಿಯೋರ್ವಳನ್ನು ಅತ್ಯಾಚಾರಗೈದು ಕೊಲೆ ಮಾಡಿದ ಅಮಾನುಷ ಘಟನೆ ವರದಿಯಾಗಿದೆ. ಮೃತ ಯುವತಿಯನ್ನು ಕಾರಿಕೋಡ್ಲು ನಿವಾಸಿ ಸುಚಿತ್ರಾ ನಾಯ್ಕ್(19) ಎಂದು ಗುರುತಿಸಲಾಗಿದ್ದು, ಅತ್ಯಾಚಾರ ಹಾಗೂ ಕೊಲೆ ಶಂಕೆಯ ಮೇಲೆ ಮಣಿಕಂಠ ಎನ್ನುವವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Call us

Call us

ಘಟನೆಯ ವಿವರ:
ಗೋಳಿಯಂಗಡಿಯ ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಚಿತ್ರಾ ಎಂದಿನಂತೆ ಸಂಜೆಯ ವೇಳೆಗೆ ಮನೆಗೆ ಬಾರದಿದ್ದುದರಿಂದ ಆಕೆಯ ಮನೆಯವರು ಅಂಗಡಿ ಮಾಲಿಕರಲ್ಲಿ ವಿಚಾರಿಸಿದಾಗ, ಸಂಜೆ 5:30 ಸುಮಾರಿಗೆ ಆಕೆ ಮನೆಗೆ ಹೊರಟಿರುವುದನ್ನು ಅವರು ಖಾತರಿಪಡಿದ್ದರು. ಆದರೆ ರಾತ್ರಿಯಾಗುತ್ತಾ ಬಂದರೂ ಸುಚಿತ್ರಾ ನಾಯ್ಕ್ ಮನೆಗೆ ಬಾರದಿದ್ದುದರಿಂದ ಗಾಬರಿಗೊಂಡ ಹುಡುಕಾಟ ನಡೆಸಿದಾಗ ಮನೆಯ ಸಮೀಪದಲ್ಲೇ  ಸುಚಿತ್ರಾ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮನೆಯಿಂದ ಬಹಳ ಹಿಂದೆಯೇ ಅತ್ಯಾಚಾರಗೈದು, ಕೊಲೆ ಮಾಡಿ ಬಳಿಕ ನಿರ್ಜನ ಕಾಡು ಪ್ರದೇಶದಲ್ಲಿ ಮೃತ ದೇಹವನ್ನು ತಂದು ಹಾಕಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಮೃತ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದೆ.

ಕ್ರಿಮಿನಲ್ ಹಿನ್ನೆಲೆಯ ಮಣಿಕಂಠ ಕೆಲವು ದಿನಗಳಿಂದ ಸುಚಿತ್ರಾಳನ್ನು ಹಿಂಬಾಲಿಸುತ್ತಿದ್ದ ಬಗ್ಗೆ ಮಾಹಿತಿ ಇದ್ದುದರಿಂದ, ಅಲ್ಲದೇ ಸುಚಿತ್ರಾಳ ಮೊಬೈಲ್ ಪೋನ್ ಮಣಿಕಂಠನ ಬಳಿ ಇದ್ದುದರಿಂದ ಆತನ ಬಗೆಗೆ ಅನುಮಾನ ಮೂಡಿ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಸ್ಥಳಕ್ಕೆ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ದಿವಾಕರ ದೌಡಾಯಿಸಿದ್ದಾರೆ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ, ಶಂಕರನಾರಾಯಣ ಪೊಲೀಸರು ತನಿಕೆಯನ್ನು ಕೈಗೆತ್ತಿಕೊಂಡಿದ್ದಾರೆ.

Call us

Call us

ತಾಲೂಕಿನ ಬೈಂದೂರು ಹೇನಬೇರು ಅಕ್ಷತಾ ದೇವಾಡಿಗ ಎಂಬ ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ನಡೆದು ನಾಲ್ಕು ತಿಂಗಳು ಕಳೆಯುವ ಮೊದಲೇ ಇನ್ನೊಂದು ಅಮಾನುಷ ಘಟನೆ ನಡೆದಿರುವುದು ಹಳ್ಳಿಗಾಡಿನ ಹೆಣ್ಣುಮಕ್ಕಳ ಸುರಕ್ಷೆಯ ಬಗ್ಗೆ ಯೋಚಿಸುವಂತೆ ಮಾಡಿದೆ.

Goliyangadi rape and murder9 Goliyangadi rape and murder10 Goliyangadi Suchitra Rape and murder (1) Goliyangadi Suchitra Rape and murder (2) Goliyangadi Suchitra Rape and murder (3) Goliyangadi Suchitra Rape and murder (4) Goliyangadi Suchitra Rape and murder (5) Goliyangadi Suchitra Rape and murder (6)yan

Leave a Reply

Your email address will not be published. Required fields are marked *

nineteen − 17 =