ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಶಾಲಾರಂಭಕ್ಕೆ ಉತ್ತಮ ಸ್ಪಂದನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು: ಶಾಲೆಗಳನ್ನು ಹಂತ ಹಂತವಾಗಿ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದರಿಂದ ಸರ್ಕಾರದ ವೇಳಾಪಟ್ಟಿಯಂತೆ 6 ರಿಂದ 9ನೇ ತರಗತಿ ವರೆಗಿನ ಮೊದಲ ಬ್ಯಾಚಿನ ವಿದ್ಯಾರ್ಥಿಗಳು ಹಾಗೂ 10ನೇ ತರಗತಿ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ತಾಲೂಕಿನಾದ್ಯಾಂತ ತಮ್ಮ ತಮ್ಮ ಶಾಲೆಗಳಿಗೆ ಆಗಮಿಸಿದ್ದರು.

Click Here

Call us

Call us

ಶಾಲೆಯ ಆವರಣದ ಒಳಗೆ ಬಂದ ವಿದ್ಯಾರ್ಥಿಗಳು ತರಗತಿ ಕೊಠಡಿಗಳಿಗೆ ಹೋಗುವ ಮೊದಲು ದೇಹದ ಉಷ್ಣತೆ ಪರೀಕ್ಷೆ ಹಾಗೂ ಸ್ಯಾನಿಟೈಸೇಶನ್ ಕಡ್ಡಾಯವಾಗಿ ಮಾಡಲಾಗುತ್ತಿತ್ತು. ಕಳೆದ 10 ತಿಂಗಳಿಂದ ಶಾಲಾಂಗಣವನ್ನು ಮರೆತಿದ್ದ ವಿದ್ಯಾರ್ಥಿಗಳು ಇಂದು ಶಾಲಾ ಸಮವಸ್ತ್ರ ಹಾಗೂ ಶಾಲಾ ಸಾಮಾಗ್ರಿಯನ್ನು ಹೊಂದಿದ್ದ ಬ್ಯಾಗ್ ಗಳೊಂದಿಗೆ ಶಾಲೆಗೆ ಆಗಮಿಸಿದ್ದರು.

Click here

Click Here

Call us

Visit Now

ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿಕೊಂಡರು. ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಬೈಂದೂರು ಬಿಇಓ ಜಿ. ಎಂ. ಮಂದಿನಮನಿ ಅವರು ವಿಧ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತಿಸಿದರು. ಪಾಳಿಯ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ವಿಂಗಡನೆ ಮಾಡಿರುವುದರಿಂದ ತರಗತಿಯ ಒಳ ಭಾಗದಲ್ಲಿ ಪ್ರತಿಯೊಂದು ಡೆಸ್ಕ್ ಹಾಗೂ ಬೆಂಚುಗಳಿಗೆ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಕುಳ್ಳಿರಿಸಲಾಗಿತ್ತು. ಶಾಲಾವಧಿಯಲ್ಲಿ ಕಡ್ಡಾಯವಾಗಿ ಮೊಸ್ಕ್ ಧರಿಸಬೇಕು, ಗುಂಪಾಗಿ ವಿದ್ಯಾರ್ಥಿಗಳು ಸೇರುವಂತಿಲ್ಲ, ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸಗಳು ಕಂಡು ಬಂದರೂ ಕೂಡಲೇ ಅಧ್ಯಾಪಕರ ಗಮನಕ್ಕೆ ತರಬೇಕು ಎನ್ನುವ ಸೂಚನೆಗಳನ್ನು ನೀಡುವುದರ ಜತೆಯಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಧೈರ್ಯವನ್ನು ತುಂಬುವ ಕೆಲಸಗಳು ಆಗುತ್ತಿದೆ.

ಕುಂದಾಪುರ ವಲಯ ಶಿಕ್ಷಣ ವ್ಯಾಪ್ತಿಯ ಸರ್ಕಾರಿ, ಅನುದಾನಿತ, ಖಾಸಗಿ ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು 162 ಶಿಕ್ಷಣ ಸಂಸ್ಥೆಗಳಲ್ಲಿ ಶುಕ್ರವಾರದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಚಾಲನೆ ದೊರೆಕಿದೆ. ಬೈಂದೂರು ವಲಯ ಶಿಕ್ಷಣ ವ್ಯಾಪ್ತಿಯಲ್ಲಿಯೂ ಎಲ್ಲಾ ಶಾಲೆಗಳು ಇಂದು ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಿದ್ದವು.

ಸೂಚನೆ ಹಾಗೂ ಕೋವಿಡ್ ನಿಯಮಾವಳಿಗಳಿಗೆ ಪೂರಕವಾಗಿ ಶಾಲೆಗಳನ್ನು ಆರಂಭಿಸಲು ಸೂಚನೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಮಾನಸಿಕ ಹಾಗೂ ನೈತಕ ಧೈರ್ಯವನ್ನು ತುಂಬಲು ಶಾಲೆಗಳಲ್ಲಿ ಎದುರಾಗುವ ಯಾವುದೆ ಪರಿಸ್ಥಿತಿಯ ಬಗ್ಗೆ ಕೂಡಲೇ ಸಂಬಂಧಿತ ಇಲಾಖೆ ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಲು ಹಾಗೂ ಸರ್ಕಾರದ ನಿಯಮಾವಳಿಗಳ ಪಾಲನೆಗೆ ಕಡ್ಡಾಯ ಒತ್ತು ನೀಡುವಂತೆ ಸೂಚನೆ ನೀಡಲಾಗಿದೆ.
– ಅರುಣ್ ಕುಮಾರ ಶೆಟ್ಟಿ ಕುಂದಾಪುರ ವಲಯ ಶಿಕ್ಷಣಾಧಿಕಾರಿ

Call us

ಬೈಂದೂರು ವಲಯ ಶಿಕ್ಷಣ ವ್ಯಾಪ್ತಿಯಲ್ಲಿ ಎಲ್ಲಾ ಶಾಲೆಗಳು ಇಂದು ಕಾರ್ಯಾರಂಭ ಮಾಡಿವೆ. ಪ್ರಥಮ ದಿನ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಉತ್ತಮ ಸ್ಪಂದನ ದೊರೆಕಿದೆ. 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳು ಬಹುಪಾಲು ಹಾಜರಾಗಿದ್ದು, ಎಲ್ಲಾ ಸರಕ್ಷತಾ ಕ್ರಮಗಳನ್ನು ವಹಿಸಲಾಗಿದೆ. – ಜಿ. ಎಂ. ಮಂದಿನಮನಿ, ಬೈಂದೂರು ವಲಯ ಶಿಕ್ಷಣಾಧಿಕಾರಿ




Leave a Reply

Your email address will not be published. Required fields are marked *

20 − 15 =